PLEASE LOGIN TO KANNADANET.COM FOR REGULAR NEWS-UPDATES

ಸಂಘಟಿತ ಹೋರಾಟಕ್ಕೆ ಸಂದ ಜಯ
ಬೆಂಗಳೂರು, ಜು.13: ರೈತರ ಹೋರಾಟಕ್ಕೆ ಮಣಿದಿರುವ ಸರಕಾರ, ಕೊನೆಗೂ ಗದಗ್ ಜಿಲ್ಲೆಯ ಮುಂಡರಗಿ ತಾಲೂಕಿನ ಗುಡಿಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಪೋಸ್ಕೊ ಉಕ್ಕು ಕಾರ್ಖಾನೆ ಯೋಜನೆಯನ್ನು ಕೈ ಬಿಟ್ಟಿದೆ.ಬುಧವಾರ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪೋಸ್ಕೊ ಯೋಜನೆಯನ್ನು ಗದಗದಿಂದ ಕೈ ಬಿಟ್ಟಿದ್ದು, ರೈತರು ಹೋರಾಟ ಮಾಡುವ ಅಗತ್ಯವಿಲ್ಲ ಎಂದರು.ರೈತರ ಭಾವನೆಗಳು ತನಗೆ ಅರ್ಥವಾಗಿದ್ದು, ಅವರ ವಿರೋಧ ಕಟ್ಟಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸುವುದಿಲ್ಲ.
ಅಲ್ಲದೆ, ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ರೈತರ ಒಪ್ಪಿಗೆ ಇಲ್ಲದೆ ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಎಲ್ಲಿ ಒಣ ಭೂಮಿಯಿರುತ್ತದೆಯೊ ಅಲ್ಲಿ ಮಾತ್ರ ಕೈಗಾರಿಕೆ ಸ್ಥಾಪನೆಗೆ ಅವಕಾಶ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದರು.ಸ್ವಯಂ ಪ್ರೇರಿತರಾಗಿ ರೈತರು ಮುಂದೆ ಬಂದು ತಮ್ಮ ಭೂಮಿಯನ್ನು ನೀಡಲು ಇಚ್ಛಿಸಿದಲ್ಲಿ ಮಾತ್ರ ಸರಕಾರ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.


ಸರಕಾರದ ನಿರ್ಧಾರಕ್ಕೆ ಸ್ವಾಮೀಜಿ ಸಂತಸ : ಪೋಸ್ಕೊ ಉಕ್ಕು ಕಂಪೆನಿಗಾಗಿ ನಡೆಸ ಲಾಗುತ್ತಿದ್ದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿರುವುದನ್ನು ತೋಂಟ ದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಸ್ವಾಗತಿಸಿದ್ದಾರೆ.ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ನಿರ್ಧಾರವನ್ನು ಗದಗ ಜಿಲ್ಲಾಧಿಕಾರಿ ವೌಖಿಕವಾಗಿ ತಮಗೆ ತಿಳಿಸಿದ್ದು, ಈ ಸಂಬಂಧ ಅಧಿಕೃತ ಆದೇಶ ತಮ್ಮ ಕೈ ಸೇರಿಲ್ಲ. ಆದಾಗ್ಯೂ, ಇದು ನಾಡಿನ ಜನತೆಗೆ ಸಂದ ಜಯ ಎಂದರು.ರೈತರ ಹೋರಾಟಕ್ಕೆ ಮನ್ನಣೆ ನೀಡಿದ ಮುಖ್ಯಮಂತ್ರಿ ಹಾಗೂ ರೈತರಿಗೆ ಬೆಂಬಲ ನೀಡಿದ ಜನತೆ, ವಿರೋಧ ಪಕ್ಷದ ನಾಯಕರಿಗೆ ಸ್ವಾಮೀಜಿ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

Advertisement

0 comments:

Post a Comment

 
Top