ಕೊಪ್ಪಳ ಜು. ೦೭ (ಕ.ವಾ): ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ೨೦೧೦-೧೧ ನೇ ಸಆಲಿಗಾಗಿ ಜಿಲ್ಲಾ ಯುವ ಪ್ರಶಸ್ತಿ, ಕ್ರೀಡಾ ಪ್ರಶಸ್ತಿ ಹಾಗೂ ಸಂಘ ಪ್ರಶಸ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಜಿಲ್ಲಾ ನೋಂದಾಣಾಧಿಕಾರಿಗಳ ಕಾರ್ಯಾಲಯದಲ್ಲಿ ನೋಂದಾಯಿತವಾಗಿರುವ ಸಂಘ ಸಂಸ್ಥೆಗಳ ಸದಸ್ಯರುಗಳಿಗೆ ಜಿಲ್ಲಾ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಯುವಕ ಮತ್ತು ಯುವತಿ ಪ್ರಶಸ್ತಿಗಾಗಿ ಸಮಾಜ ಸೇವೆ, ಸಾಂಸ್ಕೃತಿಕ ಮತ್ತು ಇತರೆ ಕ್ಷೇತ್ರಗಳಲ್ಲಿ ಗಣನೀಯ ಸಏವೆ ಮಾಡಿದಂತಹ ಯುವಕ ಮತ್ತು ಯುವತಿಯರಿಗೆ ತಲಾ ಒಂದರಂತೆ ಪ್ರಶಸ್ತಿ ನೀಡಲಾಗುವುದು. ಸಾಧನೆ ಮಾಡಿದ ಬಗ್ಗೆ ಮೂಲ ದಾಖಲಾತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಬೇಕು. ಸಮಾಜ ಸೇವೆ, ಸಾಂಸ್ಕೃತಿಕ ಹಾಗೂ ಇತರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿರಬೇಕು. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಮಾತ್ರ ಸಾಧನೆ ಮಾಡಿದಂತಹ ಕ್ರೀಡಾಪಟುಗಳಿಗೆ, ಅದರಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಕ್ರೀಡಾಪಟುಗಳು ಸಾಧನೆ ಮಾಡಿದ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ೨೦೧೦ ರ ಏಪ್ರಿಲ್ ೦೧ ರಿಂದ ೨೦೧೧ ರ ಮಾರ್ಚ್ ೩೧ ರವರೆಗೆ ಸಾಧನೆ ಮಾಡಿರುವುದನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ನಿಗದಿತ ಅರ್ಜಿಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಕೊಪ್ಪಳ ಇವರಿಂದ ಪಡೆದು, ಭರ್ತಿ ಮಾಡಿದ ಪ್ರಸ್ತಾವನೆಯನ್ನು ಜುಲೈ ೧೫ ರ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ, ದೂರವಾಣಿ ಸಂ: ೨೦೧೦೯೦ ಅಥವಾ ಸಿ.ಎ. ಪಾಟೀಲ್- ೯೩೪೨೩೮೭೯೩೫ ಕ್ಕೆ ಸಂಪರ್ಕಿಸಬಹುದು.

0 comments:
Post a Comment