PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜು.: ಕಳೆದ ಜುಲೈ ೬ ರಿಂದ ೮ವರೆಗೆ ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಕೊಪ್ಪಳ ಜಿಲ್ಲೆಯಿಂದ ಪ್ರತಿಸ್ಪರ್ಧಿಸಿದ್ದ ಕ್ರೀಡಾಪಟುಗಳಲ್ಲಿ ೭ ಜನ ಕ್ರೀಡಾ ಪಟುಗಳು ವೈಯಕ್ತಿಕ ಸ್ಪರ್ಧೆಗಳಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕರಕುಶಲ ವಿಭಾಗದಲ್ಲಿ ಶಿಕ್ಷಣ ಇಲಾಖೆಯ ಎ.ಪಿ.ಅಂಗಡಿ ಪ್ರಥಮ ಸ್ಥಾನ ಪಡೆದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಅದೇ ರೀತಿಯಾಗಿ ೧೫೦೦ ಮೀ ಓಟದಲ್ಲಿ ಶಿಕ್ಷಣ ಇಲಾಖೆಯ ಶಬ್ಬೀರ್ ನದಾಫ್ ಪ್ರಥಮ, ಸ್ಟ್ರಿಂಗ ವಾದ್ಯದಲ್ಲಿ ಕೃಷಿಇಲಾಖೆಯ ಉಮೇಶ ಹಳ್ಳದ ಪ್ರಥಮ, ೮೦೦ ಮೀ. ಓಟ ಹಾಗೂ ೧೦,೦೦೦ ಓಟದಲ್ಲಿ ದಲ್ಲಿ ಶಿಕ್ಷಣ ಇಲಾಖೆಯ ಕೇಶವ್ ಸಿ.ಆರ್. ದ್ವಿತೀಯ ಸ್ಥಾನ, ಸರಪಳಿ ಗುಂಡು ಎಸೆತದಲ್ಲಿ ಶಿಕ್ಷಣ ಇಲಾಖೆಯ ಹುಲುಗಪ್ಪ ದ್ವಿತೀಯ ಸ್ಥಾನ ಹಾಗೂ ಮಹಿಳೆಯರ ವಿಭಾಗದಲ್ಲಿ ೨೦೦ ಮೀ ಓಟದಲ್ಲಿ ಶ್ರೀಮತಿ ಅಕಿಲಾ ಚವ್ಹಾಣ ಹಾಗೂ ೧೦೦ ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಯಲ್ಲಮ್ಮ ಮುನವಳ್ಳಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ರಾಜ್ಯ ಮಟ್ಟದಲ್ಲಿ ಸಾಧನೆ : ೧೫೦೦ ಮೀ ಓಟದಲ್ಲಿ ಶಿಕ್ಷಣ ಇಲಾಖೆ ಕೇಶವ್ ಸಿ.ಆರ್, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಶಿಕ್ಷಣ ಇಲಖೆಯ ವೆಂಕಟೇಶ ತೃತೀಯ ಸ್ಥಾನ ಪಡೆದುಕೊಂಡರೆ ಗುಂಪು ಸ್ಪರ್ಧೆಯ ಟೇಬಲ್ ಟೆನ್ನಿಸ್ ಡಬಲ್ಸ್‌ನ ಮಹಿಳೆಯರ ವಿಭಾಗದಲ್ಲಿ ಹಂಪಮ್ಮ ಹಾಗೂ ಜ್ಯೋತಿ ರೆಡ್ಡಿ ದ್ವಿತೀಯ ಸ್ಥಾನ ಮತ್ತು ಶೆಟಲ್ ಬ್ಯಾಡ್ಮಿಂಟನ್‌ನಲ್ಲಿ ಡಾ.ರಾಜಶೇಖರ್ ನಾರಿನಾಳ, ಬಸಂತಕುಮಾರ ಪಾಟೀಲ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಅಭಿನಂದನೆ : ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವೈಯಕ್ತಿಕ ಸ್ಪರ್ಧೆಯಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಅಭಿನಂದನಾರ್ಹ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತರಲೆಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಲಗೇರಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಲಾಸ್ ಎನ್.ಘಾಡಿ, ಕ್ರೀಡಾ ಕಾರ್ಯದರ್ಶಿ ಎನ್.ಎಸ್.ಪಾಟೀಲ್, ಸಂಗಪ್ಪ ಅಂಗಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಶರಣಬಸನಗೌಡ ಪಾಟಿಲ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಆರ್.ಜೆ, ರಾಜ್ಯ ಪರಿಷತ್ ಸದಸ್ಯ ಬೀರನಾಯ್ಕರ್, ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗರಾಜ ಕುಷ್ಟಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಮಂಜುನಾಥ, ನೌಕರರ ಸಂಘದ ಪದಾಧಿಕಾರಿಗಳು ಮತ್ತಿತರರು ಹಾರ್ಧಿಕವಾಗಿ ಅಭಿನಂದಿಸಿ ಶುಭ ಕೋರಿದ್ದಾರೆ.

Advertisement

0 comments:

Post a Comment

 
Top