PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ :ಗದಗ ಜಿಲ್ಲೆಯ ನರಗುಂದ ತಾಲೂಕಿನ ವೆಂಕಟಾಪುರ ವಾಸ್ರವ್ಯರಾದ ಸಂಗಮೇಶ ಹೂಗಾರ್ ತಂದೆ ಯಲ್ಲಪ್ಪ ತಾಯಿ ಸುವರ್ಣಮ್ಮ ಇವರು ಕೂಲಿ ಕೆಲಸ ಮಾಡುತ್ತಿದ್ದು, ಇವರು ೨ ವರ್ಷದಿಂದ ಮಹಾತ್ಮಗಾಂಧಿ ಅನಾಥಾಶ್ರಮ ಶಿರಸಯ್ಯನ ಮಠದಲ್ಲಿ ಇದ್ದರು. ಸಂಗಮೇಶ ಎಂಬ ಬಾಲಕನು ಶಿರಸಪ್ಪಯ್ಯನ ಮಠ ಶಾಲೆ, ಕೊಪ್ಪಳದಲ್ಲಿ ೬ ನೇ ತರಗತಿ ಓದುತ್ತಿದ್ದು, ಆರ್ಥಿಕ ತೊಂದರೆಯಲ್ಲಿದ್ದ ಮಗುವನ್ನು ಬಾಲನ್ಯಾಯ ಮಂಡಳಿ, ಕೊಪ್ಪಳ ಸದಸ್ಯರಾದ ಶ್ರೀಮತಿ ಸಾವಿತ್ರಿ ಮುಜುಂದಾರ್ ಇವರು ಪತ್ತೆಹಚ್ಚಿದರು.
ಜಿಲ್ಲಾ ಮಕ್ಕಳ ಸಂರಕ್ಷಣಾ ಯೋಜನೆಯವರು ಈ ಬಾಲಕನನ್ನು ಗವಿಸಿದ್ದೇಶ್ವರ ವಸತಿ ನಿಲಯ, ಗವಿ ಮಠ ಕೊಪ್ಪಳದಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ದಾಖಲು ಮಾಡಿದ್ದಾರೆ. ಈ ಒಂದು ಕಾರ್ಯಾಚರನೆಯಲ್ಲಿ ಕೊಪ್ಪಳ ಮಕ್ಕಳ ಸಂರಕ್ಷಣಾ ಯೋಜನೆಯ ಸಿಬ್ಬಂದಿಗಳಾದ ಶ್ರೀ. ಹರೀಶ್ ಜೋಗಿ, ಶಿವರಾಮ, ಶಂಕ್ರಪ್ಪ, ಕು.ಮಂಜುಳಾ ಮತ್ತು ಹುಸೇನ್ ಅವರು ಭಾಗವಹಿಸಿದ್ದರು.

Advertisement

0 comments:

Post a Comment

 
Top