PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಫೆ.: ಜನಗಣತಿ ಕಾರ್ಯಕ್ರಮವು ಫೆ. ೦೯ ರಿಂದ ೨೮ ರವರೆಗೆ ನಡೆಯಲಿದೆ. ಫೆ. ೨೮ ರಂದು ಮಧ್ಯರಾತ್ರಿಯಲ್ಲಿ ವಸತಿ ರಹಿತರ ಗಣತಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರ ಮಾಹಿತಿಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯದಲ್ಲಿ ಸಹಾಯವಾಣಿ ಕೇಂದ್ರ ಪ್ರಾರಂಭಿಸಲಾಗಿದೆ.
ಜನಗಣತಿ ಕಾರ್ಯಕ್ರಮದಲ್ಲಿ ಫೆ. ೨೮ ರಂದು ರಾತ್ರಿ ವಸತಿರಹಿತರ ಗಣತಿ ಕಾರ್ಯ ಕೈಗೊಳ್ಳಲು ಯೋಜಿಸಲಾಗಿದ್ದು, ನಗರದ ಯಾವುದೇ ಪ್ರದೇಶದಲ್ಲಿ ಅಂದರೆ ಬಯಲು ಜಾಗ, ದೇವಸ್ಥಾನದ ಆವರಣ, ಕಟ್ಟಡ ಕಟ್ಟುವ ಆವರಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಬೃಹತ್ ಸಿಮೆಂಟ್ ಪೈಪ್‌ಗಳಲ್ಲಿ, ಬ್ರಿಜ್ ಕೆಳಗಡೆ, ಧರ್ಮಶಾಲೆ, ಮಂಟಪಗಳಲ್ಲಿ, ಅಲೆಮಾರಿ ಜನಾಂಗದವರು ಹೀಗೆ ಹಲವಾರು ಸ್ಥಳಗಳಲಿ ವಸತಿ ರಹಿತರು ಇದ್ದಲ್ಲಿ ಅವರ ಗಣತಿ ಮಾಡಲಾಗುತ್ತದೆ. ಗಣತಿ ಸಮಯದಲ್ಲಿ ಸಾರ್ವಜನಿಕರು ಅಥವಾ ಗಣತಿದಾರರಲ್ಲಿ ಯಾವುದೇ ಸಮಸ್ಯೆ, ಪ್ರಶ್ನೆ ಉದ್ಭವಿಸಿದಲ್ಲಿ, ಸಹಾಯಕ್ಕಾಗಿ ನಗರಸಭೆ ಕಾರ್ಯಾಲಯದಲ್ಲಿ ಸಹಾಯವಾಣಿ, ದೂರವಾಣಿ ಸಂ: ೨೩೧೧೬೫ ಸ್ಥಾಪಿಸಲಾಗಿದ್ದು, ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Advertisement

0 comments:

Post a Comment

 
Top