ಕೊಪ್ಪಳ ಫೆ. : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅತ್ಯಮೂಲ್ಯ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಕೊಪ್ಪಳ ಜಿಲ್ಲಾಡಳಿತ ಭವನದ ಮೊದಲನೆ ಮಹಡಿಯಲ್ಲಿರುವ ಕಚೇರಿಯಲ್ಲಿ ವ್ಯವಸ್ಥೆಗೊಳಿಸಿದೆ.
ಅಂಬೇಡ್ಕರ್ ಸಮಗ್ರ ಸಂಪುಟಗಳು, ಶ್ರೀರಂಗ ಸಾರಸ್ವತ, ಡಿವಿಜಿ ಸಂಪುಟ, ಶಿವರಾಮ ಕಾರಂತರ ಸಂಪುಟಗಳು ಅಲ್ಲದೆ ಜನಪದ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ, ಲಲಿತಕಲಾ ಅಕಾಡೆಮಿಯ ಪ್ರಕಟಣೆಗಳು ಸೇರಿದಂತೆ ಹಲವಾರು ಅತ್ಯಮೂಲ್ಯ ಪುಸ್ತಕಗಳ ಮಾರಾಟಕ್ಕೆ ವ್ಯವಸ್ಥೆಗೊಳಿಸಿದೆ. ೧೦ ವರ್ಷ ಮೇಲ್ಪಟ್ಟ ಅವಧಿಯ ಪುಸ್ತಕಗಳಿಗೆ ಶೇ. ೫೦ ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ೧೦ ವರ್ಷ ಒಳಗಿನ ಅವಧಿಯ ಪುಸ್ತಕಗಳಿಗೆ ಶೇ. ೩೦ ರಷ್ಟು, ೦೫ ವರ್ಷದೊಳಗಿನ ಅವಧಿಯ ಪುಸ್ತಕಗಳಿಗೆ ಶೇ. ೨೦ ರಷ್ಟು ಹಾಗೂ ೦೨ ವರ್ಷದೊಳಗಿನ ಅವಧಿಯ ಪುಸ್ತಕಗಳಿಗೆ ಶೇ. ೧೫ ರಷ್ಟು ರಿಯಾಯಿತಿ ನೀಡಲಾಗುವುದು. ಆಸಕ್ತ ಸಾಹಿತ್ಯ ಪ್ರೇಮಿಗಳು, ಹವ್ಯಾಸಿ ಓದುಗರು, ಶಾಲಾ ಕಾಲೇಜುಗಳ ಮುಖ್ಯಸ್ಥರು ಈ ಯೋಜನೆಯ ಲಾಭ ಪಡೆಯುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
0 comments:
Post a Comment