PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಗವಿಸಿದ್ಧೇಶ್ವರ ಮಹಾಜಾತ್ರೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಮಯದಲ್ಲಿ ಶ್ರೀಮಠಕ್ಕೆ ಜಿಲ್ಲೆಯ ನಾನಾ ಗ್ರಾಮಗಳಿಂದ ಭಕ್ತರು ದಾಸೋಹಕ್ಕೆ ದವಸ ಧಾನ್ಯಗಳನ್ನು, ರೊಟ್ಟಿಗಳನ್ನು, ತರಕಾರಿಗಳನ್ನು ಸಮರ್ಪಿಸುತ್ತಿದ್ದಾರೆ. ಚಿಲಕಮುಕ್ಕಿ ಗ್ರಾಮದಿಂz ೪೦ ಚೀಲಭತ್ತ, ೩ ಚೀಲ ಜೋಳ, ೧ ಟ್ರ್ಯಾಕ್ಟರ್ ಕಟ್ಟಿಗೆ ಹಾಗೂ ವಡ್ಡರಹಟ್ಟಿ ಗ್ರಾಮದಿಂದ ೨ ಚೀಲ ಮೆಕ್ಕಿಜೋಳ, ೧ ಚೀಲ ಸಜ್ಜಿ, ೧ ಪಾಕೇಟ್ ಭತ್ತ, ಇತರ ತರಕಾರಿ ಹಾಗೂ ಜೀರ್‍ಹಾಳ-ಕಲ್ಗುಡಿ ಗ್ರಾಮ ಮತ್ತು ಕಲ್ಗುಡಿ ಕ್ಯಾಂಪ್‌ಗಳಿಂದ ೫೦ ಕೆ.ಜಿಯ ೪೮ ಪಾಕೇಟ್ ಅಕ್ಕಿ, ಗೋಸಲದಟ್ಟಿ ಗ್ರಾಮದಿಂದ ೧೫ ಚೀಲಭತ್ತ, ೪ ಚೀಲ ಸಜ್ಜಿ, ೧ ಚೀಲ ಜೋಳ, ಶ್ರೀಮಠದ ದಾಸೋಹಕ್ಕೆ ಅರ್ಪಿತವಾದವು. ಈ ಎಲ್ಲಾ ಗ್ರಾಮಗಳ ಸದ್ಬಕ್ತರಿಗೆ ಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಜೀಗಳು ಆಶೀರ್ವದಿಸಿದ್ದಾರೆ.

ಭರದಿಂದ ಸಿದ್ದತೆ: ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಜಾತ್ರೆಗೆ ಭರದಿಂದ ಸಿದ್ದತೆಗಳು ಸಾಗುತ್ತಿವೆ. ಈಗಾಗಲೇ ಮಹಾದಾಸೋಹ ಮಂಟಪ ಅಂತಿಮ ಸಿದ್ದತೆಯಲ್ಲಿದೆ. ಶ್ರೀಮಠದ ಸುತ್ತ ರಸ್ತೆಗಳ ಸ್ವಚ್ಚತೆ ಹಾಗೂ ದುರಸ್ತಿ ಕೆಲಸ ವೇಗವಾಗಿ ಸಾಗುತ್ತಲಿದೆ. ಜಾತ್ರೆಯ ಆವರಣದಲ್ಲಿ ವ್ಯಾಪಾರಿ ಮಳಿಗೆಗಳು ಸಿದ್ದಗೊಳ್ಳುತ್ತಿವೆ. ಭಕ್ತರನ್ನು ಸ್ವಾಗತಿಸುವ ಬಣ್ಣಬಣ್ಣದ ಪ್ಲೆಕ್ಸಗಳು ರಾರಾಜಿಸುತ್ತಲಿವೆ. ಪುರ ಪ್ರಮುಖರು, ಯುವಕರು. ತಂಡೋಪತಂಡವಾಗಿ ನಿಂತುಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ. ಈಗಿನಿಂದಲೇ ಭಕ್ತರು ಭಜನೆಗಳೊಂದಿಗೆ ದವಸ ಧಾನ್ಯಗಳನ್ನು ಅರ್ಪಿಸಲು ಶ್ರೀಮಠಕ್ಕೆ ಬರುತ್ತಿರುವದು ವಿಶೇಷವಾಗಿದೆ.

ದಾಸೋಹದ ಮೂಲಕ ಹಸಿರು ಪ್ರಜ್ಞೆ
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಸಕಲ ಸಿದ್ಧತೆಗಳು ಭರದಿಂದ ಜರುಗುತ್ತಲಿವೆ. ಜಾತ್ರೆಯಲ್ಲಿ ಮಹಾದಾಸೋಹ ಕಾರ್ಯವು ವರ್ಷದಿಂದ ವರ್ಷಕ್ಕೆ ವಿಭಿನ್ನ, ವಿಶಿಷ್ಟ ಹಾಗೂ ವಿಸ್ತಾರಗೊಳ್ಳುತ್ತಾದ ನಡೆಯುತ್ತಲಿದೆ. ಈ ವರ್ಷದ ಜಾತ್ರೆಯ ಮಹಾದಾಸೋಹದ ಪ್ರಸಾದದ ಸವಿಯನ್ನು ಸವಿಯುತ್ತಾ ಭಕ್ತಕೋಟಿ ಮತ್ತೊಂದು ಅರಿವನ್ನು ಹಾಗೂ ವಾಸ್ತವ ಜಾಗೃತಿಯನ್ನು ಪಡೆಯಲಿದ್ದಾರೆ. ಆದೇನೆಂದರೆ ದಾಸೋಹ ಮಂಟಪದೊಳಗೆ ಹಸಿರು ವನವು ರಾರಾಜಿಸಲಿದೆ. ಬಾಲದೋಟ ಎಂಬ ಹೆಸರಿನ ಸಸ್ಯಗಳು ಭಕ್ತಕೋಟಿಯನ್ನು ತನ್ನತ್ತ ಸೆಳೆಯುವದರಲ್ಲಿ ಅನುಮಾನವಿಲ್ಲ. ಭಕ್ತರಿಗೆ ವಾಸ್ತವ ಜಾಗೃತಿಯ ಅರಿವನ್ನು ಗವಿಮಠದ ಶ್ರೀಗಳು ಈ ರೀತಿಯಾಗಿ ಮೂಡಿಸುತ್ತಿರುವದು ಅಭಿನಂಧನೀಯವಾಗಿದೆ.

Advertisement

0 comments:

Post a Comment

 
Top