ಕೊಪ್ಪಳ ಜ. : ಪ್ರಸಕ್ತ ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆ ಅಂಗವಾಗಿ ಡಿ. ೩೧ ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ ಒಟ್ಟು ಶೇ. ೬೬. ೨೮ ರಷ್ಟು ಮತದಾನವಾಗಿದೆ.
ಕೊಪ್ಪಳ ಜಿಲ್ಲೆಯ ಒಟ್ಟು ೭೩೨೪೭೯ ಮತದಾರರ ಪೈಕಿ ೪೮೫೪೭೬ ಮತದಾರರು ತಮ್ಮ ಸಂವಿಧಾನಿಕ ಹಕ್ಕು ಚಲಾಸಿದ್ದಾರೆ. ಮತ ಚಲಾಯಿಸಿದವರಲ್ಲಿ ೨೫೦೮೫೭-ಪುರುಷ ಹಾಗೂ ೨೩೪೬೧೯ ಮಹಿಳಾ ಮತದಾರು. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸರಾಸರಿ ಶೇ. ೬೬. ೨೮ ರಷ್ಟು ಮತದಾನವಾದಂತಾಗಿದೆ. ಕೊಪ್ಪಳ ತಾಲೂಕಿನಲ್ಲಿ ಅತಿ ಹೆಚ್ಚು ಶೇ. ೬೯. ೫೩, ಯಲಬುರ್ಗಾ- ಶೇ. ೬೪. ೭೫, ಗಂಗಾವತಿ- ೬೬. ೬೦ ಹಾಗೂ ಕುಷ್ಟಗಿ ತಾಲೂಕಿನಲ್ಲಿ ಕಡಿಮೆ ಶೇ. ೬೩. ೫೪ ರಷ್ಟು ಮತದಾನವಾಗಿದೆ.
ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಪುರುಷ- ೯೪೬೧೭, ಮಹಿಳೆ- ೯೩೩೩೧, ಒಟ್ಟು- ೧೮೭೯೪೮ ಮತದಾರರಿದ್ದು, ಆ ಪೈಕಿ ಪುರುಷ- ೬೭೫೩೮, ಮ"ಳೆ- ೬೩೧೫೦, ಒಟ್ಟು- ೧೩೦೬೮೮ ಮತದಾರರು ತಮ್ಮ ಹಕ್ಕು ಚಲಾಸಿದ್ದಾರೆ. ಈ ವ್ಯಾಪ್ತಿಯಲ್ಲಿ ಶೇ. ೬೯. ೫೩ ರಷ್ಟು ಮತದಾನವಾಗಿದ್ದು, ಹಾಲಹಳ್ಳಿಯ ಮತಗಟ್ಟೆ ಸಂ : ೧೨೫ ರಲ್ಲಿ ಅತಿ ಹೆಚ್ಚು ಶೇ. ೯೧. ೩೨ ಹಾಗೂ ಮುನಿರಾಬಾದ್‌ನ ಮತಗಟ್ಟೆ ಸಂ : ೧೬೫ ರಲ್ಲಿ ಅತಿ ಕಡಿಮೆ ಶೇ. ೩೫. ೬೦ ರಷ್ಟು ಮತದಾನವಾಗಿದೆ.
ಯಲಬುರ್ಗಾ ತಾಲೂಕು ವ್ಯಾಪ್ತಿಯಲ್ಲಿ ಪುರುಷ- ೮೧೧೯೩, ಮ"ಳೆ- ೭೭೯೭೩, ಒಟ್ಟು- ೧೫೯೧೬೬ ಮತದಾರರಿದ್ದು, ಆ ಪೈಕಿ ಪುರುಷ- ೫೩೯೫೬, ಮ"ಳೆ- ೪೯೧೦೯, ಒಟ್ಟು- ೧೦೩೦೬೫ ಮತದಾರರು ಮತ ಚಲಾಸಿದ್ದಾರೆ. ಈ ವ್ಯಾಪ್ತಿಯಲ್ಲಿ ಶೇ. ೬೪. ೭೫ ರಷ್ಟು ಮತದಾನವಾಗಿದ್ದು, ಹೆಚ್. ಸೋಂಪುರದ ಮತಗಟ್ಟೆ ಸಂ : ೧೫ ರಲ್ಲಿ ಅತಿ ಹೆಚ್ಚು ಶೇ. ೮೪. ೧೧ ಹಾಗೂ ಕುಕನೂರಿನ ಮತಗಟ್ಟೆ ಸಂ : ೧೯೩ ರಲ್ಲಿ ಅತಿ ಕಡಿಮೆ ಶೇ. ೩೯. ೫೭ ರಷ್ಟು ಮತದಾನವಾಗಿದೆ.
ಗಂಗಾವತಿ ತಾಲೂಕಿನ ಪುರುಷ- ೧೧೧೨೨೫, ಮ"ಳೆ- ೧೧೨೯೩೫, ಒಟ್ಟು- ೨೨೪೧೬೦ ಮತದಾರರ ಪೈಕಿ ಪುರುಷ- ೭೬೩೫೧, ಮಹಿಳೆ- ೭೨೯೫೦, ಒಟ್ಟು- ೧೪೯೩೦೧ ಮತದಾರರು ತಮ್ಮ ಮತ ಚಲಾಸಿರುವುದರಿಂದ ಶೇ. ೬೬. ೬೦ ರಷ್ಟು ಮತದಾನವಾದಂತಾಗಿದೆ. ಈ ವ್ಯಾಪ್ತಿಯ ಭಟ್ಟರ ಹಂಚಿನಾಳದ ಮತಗಟ್ಟೆ ಸಂ : ೧೩೩ ರಲ್ಲಿ ಅತಿ ಹೆಚ್ಚು ಶೇ. ೯೫. ೧೯ ಮತದಾನವಾಗಿದ್ದರೆ, ಅತಿ ಕಡಿಮೆ ಬಸಾಪಟ್ಟಣದ ಮತಗಟ್ಟೆ ಸಂಖ್ಯೆ ೮೩ ರಲ್ಲಿ ಶೇ. ೩೬. ೨೪ ರಷ್ಟು ಮತದಾನವಾಗಿದೆ.
ಕುಷ್ಟಗಿ ತಾಲೂಕು ವ್ಯಾಪ್ತಿಯಲ್ಲಿ ಪುರುಷ- ೮೧೩೧೬, ಮ"ಳೆ- ೭೯೮೮೯, ಒಟ್ಟು- ೧೬೧೨೦೫ ಮತದಾರರ ಪೈಕಿ ಪುರುಷ- ೫೩೦೧೨, ಮಹಿಳೆ- ೪೯೪೧೦, ಒಟ್ಟು- ೧೦೨೪೨೨ ಜನ ಮತ ಚಲಾಸಿದ್ದು, ಶೇ. ೬೩. ೫೪ ರಷ್ಟು ಮತದಾನವಾಗಿದೆ. ಈ ವ್ಯಾಪ್ತಿಯಲ್ಲಿ ಬರುವ ಗಡಚಿಂತಿ ಗ್ರಾಮದ ಮತಗಟ್ಟೆ ಸಂ : ೨೩ ರಲ್ಲಿ ಅತಿ ಹೆಚ್ಚು ಶೇ. ೮೭. ೭೯ ರಷ್ಟು ಮತದಾನವಾಗಿದ್ದರೆ, ಕೇಸೂರು ಗ್ರಾಮದ ಮತಗಟ್ಟೆ ಸಂ : ೧೧೬ ರಲ್ಲಿ ಅತಿ ಕಡಿಮೆ ಶೇ. ೪೩. ೭೨ ರಷ್ಟು ಮತ ಚಲಾವಣೆಯಾಗಿದೆ.
ಒಟ್ಟಾರೆ ಜಿಲ್ಲೆಯಾದ್ಯಂತ ಸುಗಮ ಹಾಗೂ ಶಾಂತಿಯುತ ಮತದಾನವಾಗಿದ್ದು, ಮರು ಚುನಾವಣೆಯಾಗುವಂತಹ ಯಾವುದೇ ಅಹಿತಕರ ಘಟನೆ ಜರುಗಿಲ್ಲ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಮತ ಎಣಿಕೆ ಕಾರ್ಯ ಜ. ೦೪ ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಕೊಪ್ಪಳ ತಾಲೂಕು ವ್ಯಾಪ್ತಿಯ ಮತಗಳ ಎಣಿಕೆ ನಗರದ ಶ್ರೀ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯದಲ್ಲಿ, ಯಲಬುರ್ಗಾ ತಾಲೂಕಿನ ಮತಗಳ ಎಣಿಕೆ- ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿ ತಾಲೂಕು- ಗಂಗಾವತಿಯ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜ್ (ಹೊಸ ಮತ್ತು ಹಳೆ ಕಟ್ಟಡ) ನಲ್ಲಿ ಹಾಗೂ ಕುಷ್ಟಗಿ ತಾಲೂಕಿಗೆ ಸಂಬಂಧಿಸಿದಂತೆ ಕುಷ್ಟಗಿಯ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಜಿಲ್ಲಾಡಳಿತ ಮತ ಎಣಿಕೆ ಕಾರ್ಯ ಸುಗಮವಾಗಿ ಸಾಗಲು ಅನುಕೂಲವಾಗುವಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಈ ಬಾರಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರವನ್ನು ಉಪಯೋಗಿಸಿರುವುದರಿಂದ ಜ. ೦೪ ರಂದು ಮಧ್ಯಾಹ್ನ ೧೨ ಗಂಟೆಯ ಹೊತ್ತಿಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
0 comments:
Post a Comment