PLEASE LOGIN TO KANNADANET.COM FOR REGULAR NEWS-UPDATES


ಕಲ್ಬುರ್ಗಿಯ ಉದಯೋನ್ಮುಖ ಬರಹಗಾರರ ಬಳಗ ಪ್ರತಿ ವರ್ಷ ನೀಡುವ ಕಾಯಕ ಸಮ್ಮಾನ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಆಯ್ಕೆಯಾಗಿದ್ದಾರೆ.ಸಾಹಿತ್ಯ, ಪತ್ರಿಕೋಧ್ಯಮ, ರಂಗಭೂಮಿ ಸೇವೆ, ಸಂಘಟನೆ, ಸಮಾಜ ಸೇವೆಗಳಲ್ಲಿ ವಿಠ್ಠಪ್ಪ ಗೋರಂಟ್ಲಿಯವರ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ೧೨-೧೨-೨೦೧೦ ರಂದು ಕನ್ನಡ ಭವನ, ಸರದಾರ ವಲ್ಲಭಬಾಯಿ ಪಟೇಲ್ ವೃತ್ತ , ಕಲ್ಬುರ್‍ಗಿಯಲ್ಲಿ ನಡೆಯುವ ಕಾರ್‍ಯಕ್ರಮದಲ್ಲಿ ಡಾ.ಲತಾ ರಾಜಶೇಖರನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾನಿಧ್ಯವನ್ನು ಪೂಜ್ಯಶ್ರಿ ತೋಟೇಂದ್ರ ಶಿವಾಚಾರ್‍ಯರು ಪೀಠಾಧಿಪತಿಗಳು ಸುಕ್ಷೇತ್ರ ಕೋರಿ ಸಿದ್ದೇಶ್ವರ ಮಠ , ನಾಲವಾರ ಇವರ ವಹಿಸಿಕೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಕವಿ ಜರಗನಹಳ್ಳಿ ಶಿವಶಂಕರ ವಹಿಸಿಕೊಳ್ಳಲಿದ್ದಾರೆ.
ಈ ವರೆಗೆ ಕಾಯಕ ಸಮ್ಮಾನ ಪ್ರಶಸ್ತಿಯನ್ನು ಶಾಂತರಸ, ಕೆರಳ್ಳಿ ಗುರುನಾಥ ರೆಡ್ಡಿ,ಜಂಬಣ್ಣ ಅಮರಚಿಂತ, ಗವಿಸಿದ್ದ ಎನ್.ಬಳ್ಳಾರಿ, ವಿರೇಂದ್ರ ಸಿಂಪಿ, ಚನ್ನಬಸವ ಬೆಟ್ಟದೂರು, ಚಂದ್ರಕಾಂತ ಕುಸನೂರ, ಬಿ.ಟಿ.ಲಲಿತಾನಾಯಕ, ಲಿಂಗಣ್ಣ ಸತ್ಯಂಪೇಟ್, ಡಿ.ಎನ್.ಅಕ್ಕಿ, ರವೀಂದ್ರ ಪ್ರಹ್ಲಾದ ಕರ್ಜಗಿ ಸೇರಿದಂತೆ ಹಲವಾರು ಗಣ್ಯ ಮಹನೀಯರಿಗೆ ನೀಡಲಾಗಿದೆ. ಈ ಸಲ ಈ ಪ್ರಶಸ್ತಿಗೆ ಡಾ.ಮಾಣಿಕರಾವ್ ಧನಶ್ರೀ ಹಾಗೂ ನಮ್ಮ ಕೊಪ್ಪಳ ಜಿಲ್ಲೆಯ ಹಿರಿಯ ಸಾಹಿತಿ , ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿಯವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಗೆ ಆಯ್ಕೆಯಾದ ವಿಠ್ಠಪ್ಪ ಗೋರಂಟ್ಲಿಯವರಿಗೆ ಡಾ.ಮಹಾಂತೇಶ ಮಲ್ಲನಗೌಡರ,ಡಾ.ವಿ.ಬಿ.ರಡ್ಡೇರ, ಬಸವರಾಜ ಶೀಲವಂತರ, ವೀರಣ್ಣ ಹುರಕಡ್ಲಿ, ವೀರಣ್ಣ ವಾಲಿ, ಸಿರಾಜ್ ಬಿಸರಳ್ಳಿ, ಹುಸೇನ್ ಪಾಷಾ, ಮಹೇಶ ಬಳ್ಳಾರಿ , ರಾಜಾಬಕ್ಷಿ, ಕವಿಸಮೂಹದ ಕವಿಗಳು, ಕಸಾಪ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ್,ರಾಜಶೇಖರ ಅಂಗಡಿ,ಜಿ.ಎಸ್.ಗೋನಾಳ ಸೇರಿದಂತೆ ಕಸಾಪದ ಪದಾಧಿಕಾರಿಗಳು ಹಾಗೂ ಇತರರು ಹರ್ಷ ವ್ಯಕ್ತಪಡಿಸಿ ವಿಠ್ಠಪ್ಪ ಗೋರಂಟ್ಲಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Advertisement

0 comments:

Post a Comment

 
Top