PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ನ. : ಭಕ್ತ ಕನಕದಾಸರ ಜಯಂತಿ ಉತ್ಸವವನ್ನು ಅಂತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಎಸ್.ಸತ್ಯಮೂರ್ತಿ ಹೇಳಿದ್ದಾರೆ.
ಭಕ್ತ ಕನಕದಾಸ ಜಯಂತಿ ಆಚರಣೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಭಕ್ತ ಕನಕದಾಸ ಜಯಂತಿ ಉತ್ಸವವನ್ನು ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ವಿಜೃಂಭಣೆಂದ ಆಚರಿಸಲು ಸರ್ಕಾರ ಸೂಚನೆ ನೀಡಿದೆ ನವೆಂಬರ್ ೨೪ ರಂದು ಕನಕದಾಸ ಜಯಂತಿಯನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು. ಉದ್ದೆಶಿಸಲಾಗಿದೆ. ಕನಕದಾಸರ ಭಾವಚಿತ್ರ ಹೊತ್ತ ಮೆರವಣಿಗೆಯು ಗವಿಮಠದಿಂತ ಬೆಳಗ್ಗೆ ೮-೩೦ ಗಂಟೆಗೆ ಹೊರಟು ಗಡಿಯಾರ ಕಂಬದ ಅಶೋಕ ಸರ್ಕಲ್ ಮೂಲಕ ಸಾ"ತ್ಯ ಭವನ ತಲುಪಲಿದೆ. ಜಾಂಝ್ ಮೇಳ, ಮಹಿಳಾ ವೀರಾಗಸೆ. ನೂರಕ್ಕೂ ಹೆಚ್ಚು .ಡೊಳ್ಳುಗಳ ಮಜಲು. ಕರಡಿ ಮಜಲುಗಳು. ಮುಂತಾದ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ ನವಂಬರ್ ೨೪ ರಂದು ಕನಕದಾಸ ಜಯಂತಿಯನ್ನು ಶಾಲಾ ಕಾಲೇಜುಗಳಲ್ಲಿ ಆಚರಿಸಲು ಸಂಬಂಧ ಪಟ್ಟ ಇಲಾಖೆ ಉಪನಿರ್ದೇಶಕರುಗಳು ಕ್ರಮಕೈಗೊಳ್ಳಬೇಕು ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸುವಂತೆ ನೋಡಿಕೊಳ್ಳಬೇಕು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯ ವಸತಿ ಶಾಲೆಯಲ್ಲಿ ಕೂಡ ಜಯಂತಿ ಉತ್ಸವವನ್ನು ತಪ್ಪದೆ ಆಚರಿಸುವಂತಾಗಬೇಕು ಸಾಹಿತ್ಯ ಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲು ನಂದಿಹಳ್ಳಿ ಸ್ನಾತಕೊತ್ತರ ಕೇಂದ್ರದ ವಿಬಾಗ ಮುಖ್ಯಸ್ಧರಾದ ಡಾ: ಮಲ್ಲಕಾ ಘಂಟಿ ಅಥವಾ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಧರಾದ ಡಾ: ಕೆ.ಎಂ.ಮೇತ್ರಿ ಅವರನ್ನು ಆಹ್ವಾನಿಸಲಾಗುವದು ನಗರದ ಪ್ರಮುಖ ರಸ್ತೆ ವೃತ್ತ ಮತ್ತು ಸಾರ್ವಜನಿಕ ಕಟ್ಟಡಗಳಿಗೆ ವಿದ್ಯುತ್ ದ್ವೀಪಲಂಕಾರ ವ್ಯವಸ್ಥೆ ಮಾಡಬೇಕು ಮೇರವಣಿಗೆ ಹಾಗೂ ಸಭಾ ಕಾರ್ಯಕ್ರದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಅಧಿಕಾರಿಗಳು ಕಾರ್ಯಕ್ರದಲ್ಲಿ ಗೈರು ಹಾಜರಾದರೆ ಅಂತಹವರ ವಿರುದ್ದ ಶಿಸ್ತು ಕ್ರಮ ಕೈಗೊಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಅವರು ಎಚ್ಚರಿಸಿದಾರೆ.
ಸಭೆಯಲ್ಲಿ ಶಾಸಕರಾದ ಸಂಗಣ್ಣ ಕರಡಿ. ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಸಹಾಯಕ ಆಯುಕ್ತ ಶರಣಬಸಪ್ಪ ಇಂದ್ರಾ ಬಾವಿಕಟ್ಟಿ ನಗರ ಸಭೆಯ ಆಯುಕ್ತ ಎಚ್.ಬಿ.ಬೆಳ್ಳಿಕಟ್ಟಿ ಸಮಾಜದ ಮುಖಂಡರಾದ ಹನುಮಂತಪ್ಪ ಅಂಗಡಿ ಅಂದಪ್ಪ ಮರೆಬಾಲ ರಾಮಣ್ಣ ಹಳ್ಳಿಗುಡಿ ವಿರುಪಾಕ್ಷಿ ಮೋರನಾಳ್. ಸಿದ್ದಪ್ಪ ನೀರಲೂಟಿ. ಶಿವಾನಂದ ಹೊದ್ಲೂರು ಗವಿಸಿದ್ದಪ್ಪ ಕನ್ನಡ ಸಂಸ್ಕ್ರತಿಯ ಇಲಾಖೆಯ ಸಹಾಯಕ ನಿರ್ದೇಶಕರು ಶ್ರೀಶೈಲ್ ಕರಿಶಂಕರ ತಹಸಿಲ್ದಾರ್ ವಿಜಯ್ ಕುಮಾರ್ ಮುಂತಾದ ಗಣ್ಯರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.

Advertisement

0 comments:

Post a Comment

 
Top