PLEASE LOGIN TO KANNADANET.COM FOR REGULAR NEWS-UPDATES

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಾತೃಸ್ಥಾನದಲ್ಲಿರುವ ಅಬುಧಾಬಿ ಕರ್ನಾಟಕ ಸಂಘ ತನ್ನ 30ನೇ ವರ್ಷದಲ್ಲಿ 54 ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಅದ್ದೂರಿಯಿಂದ ಆಚರಿಸಿ, ಕೊಲ್ಲಿ ರಾಷ್ಟ್ರದಲ್ಲಿ ಕನ್ನಡದ ಕಂಪನ್ನು ಹಸಿರಾಗಿಯೇ ಉಳಿಸಿಕೊಂಡಿತು.

ನವಂಬರ್ 5 ನೇ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಅಬುಧಾಬಿ ಇಂಡಿಯನ್ ಸೋಶಿಯಲ್ ಸೆಂಟರಿನ ಭವ್ಯ ಸಭಾಂಗಣ ಅಭಿಮಾನಿ ಕನ್ನಡಿಗರಿಂದ ಭರ್ತಿಯಾಗಿತ್ತು. ಸಂಪ್ರದಾಯ ಉಡುಗೆ ತೊಡುಗೆಗಳಿಂದ ಉಲ್ಲಾಸ ಭರಿತರಾದ ಕಾರ್ಯಕಾರಿ ಸಮಿತಿಯ ಸದಸ್ಯರು ನಗುಮೊಗದಿಂದಲೆ ಆಹ್ವಾನಿತ ಅತಿಥಿಗಳನ್ನು ಬರಮಾಡಿಕೊಳ್ಳುತ್ತಿದ್ದು ಕನ್ನಡ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು.ಅಬುದಾಭಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿಯ ಶುಭಾಶಯಗಳನ್ನು ನೀಡಿದರು. ಯು. ಎ. ಏಕ್ಸ್ ಚೇಂಜ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿರುವ ಶ್ರೀ ಸುಧೀರ್ ಕುಮಾರ್ ಶೆಟ್ಟಿಯವರು ಸಭೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯು. ಎ. ಇ. ಗೆ ಭಾರತದ ರಾಯಬಾರಿಯಾಗಿರುವ ಎಂ. ಕೆ. ಲೋಕೇಶ್ ರವರ ಪೂರ್ಣ ಪರಿಚಯವನ್ನು ಮಾಡಿದರು.ನಂತರ ಪದ್ಮಶ್ರೀ ಪುರಸ್ಕೃತ ಡಾ. ಬಿ.ಆರ್. ಶೆಟ್ಟಿಯವರು ಸಮಾರಂಭದ ಮುಖ್ಯ ಅತಿಥಿ ಗಳಾದ ಎಂ. ಕೆ. ಲೋಕೇಶ್ ರವರನ್ನು ಶಾಲು ಹೊದಿಸಿ ಸ್ಮರಣಿಕೆ ಫಲಕ ನೀಡಿ ಸನ್ಮಾನಿಸಿ ಗೌರವಿಸಿದರು. ಸನ್ಮಾನಕ್ಕೆ ಉತ್ತರವಾಗಿ ಮುಖ್ಯ ಅತಿಥಿಗಳು ಅಬುಧಾಬಿ ಕರ್ನಾಟಕ ಸಂಘದ ಅತ್ಯುತ್ತಮ ಕಾರ್ಯಕ್ರಮವನ್ನು ಶ್ಲಾಘಿಸಿ ಶುಭವನ್ನು ಹಾರೈಸಿದರು. ಇದೇ ಸಂದರ್ಭದಲ್ಲಿ ಮಣಿಪಾಲ್ ಟಿ.ಎ.ಪೈ. ಮ್ಯಾನೆಜ್ ಮೆಂಟ್ ಇನಿಸ್ಟಿಟ್ಯೂಟ್ ನ ನಿರ್ದೇಶಕರಾದ ಡಾ. ಶಾಜಿ ಗೋಕುಲ್ ನಾಥ್, ಸಂಗೀತ ವಿಧಾಷಿ ಎಂ.ಆರ್. ಮಂಜುಳಾ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಪ್ರಾಯೋಜಕರುಗಳನ್ನು ವೇದಿಕೆಯಲ್ಲಿ ಶಾಲು ಹೊದಿಸಿ ಗೌರವಿಸ ಲಾಯಿತು. ನಂತರ ಡಾ. ಚಂದ್ರಕುಮಾರಿ ಆರ್. ಶೆಟ್ಟಿಯವರು, ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆಸಲಾದ ಕೂಸಮ್ಮ ಶಂಭುಶೆಟ್ಟಿ ಥ್ರೋಬಾಲ್ ಪಂದ್ಯಾಟದ ವಿಜೇತ ತಂಡ ಅಬುಧಾಬಿ ಕರ್ನಾಟಕ ಸಂಘದ ಆಟಗಾರರನ್ನು ಮಧಕ ನೀಡಿ ಗೌರವಿಸಿದರು.

ಕೃಪೆ: ಗಲ್ಪ್ ಕನ್ನಡಿಗ

Advertisement

0 comments:

Post a Comment

 
Top