ಕೊಪ್ಪಳ ನ. ೨೬: ಬಾಳಿಗೆ ಬೆಳಕು ನೀಡಬಲ್ಲ ಕಣ್ಣುಗಳ ಪರೀಕ್ಞೆ ನಡೆಸಿ ಅಗತ್ಯ ವಿದ್ದಲ್ಲಿ ಶಸ್ತ್ರ ಚಿಕಿತ್ಸೆಗೆ ಸಹಾಯ ನೀಡಿ ಸಹಕರಿಸುವ ಕೆಲಸ ಪವಿತ್ರವಾದ್ದು ಎಂದು ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಎನ್.ಬಿ ಅಬೂಬಕರ ಅವರು ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜೀವಗಾಂಧಿ ಯುವಶಕ್ತಿ ಸಂಘ ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಮತ್ತು ಬೆಂಗಳೂರು ಸೋಳಂಕಿ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಹಿರೇಸಿಂದೋಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಬೃಹತ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಭಿರದ ಉದ್ಘಾಟನೆ ನೆರೆವೆರಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮಾಂತರ ಪ್ರದೇಶದ ಬಡತನ ರೇಖೆಂದ ಕೆಳಗಿರುವ ಜನರಿಗೆ ಆರೋಗ್ಯ ಸೌಲಭ್ಯಗಳು ಸೂಕ್ತವಾಗಿ ದೊರಕದೇ ತೊಂದರೇ ಪಡುತ್ತಿದ್ದಾರೆ. ಕಣ್ಣು ಒಂದು ಸೂಷ್ಮವಾದ ಅಂಗವಾಗಿದ್ದು ಅಧು ತನ್ನ ದ್ಠೃ ಕಳೆದು ಕೋಂಡರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಗುಣ ಪಡಿಸುವ ವೈದ್ಯರ ಕೊರತೆ ಹೆಚ್ಚಾಗಿದೆ ಇದನ್ನು ಸರಿಪಡಿಸುವ ಸಲುವಾಗಿ ಗ್ರಾಮಾಂತರ ಪ್ರದೇಶದ ಯುವ ಸಂಘಟನೆಗಳು ಒಗ್ಗೂಡಿ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ನೆರವು ನೀಡುವುದು ಅಗಥ್ಯವಾಗಿದೆ, ಉಚಿತವಾಗಿ ನೇತ್ರ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಸಂಘಟನೆಗಳು ಶ್ರಮಿಸಿರಬೇಕು ಕಣ್ಣಿನ ದ್ಠೃ ಕಳೆದುಕೊಂಡು ಕತ್ತಲೆ ಜೀವನ ನಡೆಸುವವರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಶಿಭಿರಗಳು ಬಾಳಿಗೆ ಬೆಳಕು ನೀಡುವಲ್ಲಿ ವರದಾನವಾಗಲಿದೆ, ಮಧ್ಯವರ್ತಿಗಳ ಹಾವಳಿ ಇಲ್ಲದೇ ಸರ್ಕಾರದ ಸೌಲಭ್ಯ ಪಡೆದು ಕೊಳ್ಳುವಲ್ಲಿ ಎಲ್ಲರೂ ಮುಂದಾಗಬೇಕು. ಅಲ್ಪ ಸಂಖ್ಯಾತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಲ್ಪ ವಯಸ್ಸಿನಲ್ಲಿಯೆ ಅವರಿಗೆ ಬೀದಿ ಬದಿ ಕೆಲಸ ಮಾಡುವದಕ್ಕೆ ಹಚ್ಚುವುದನ್ನು ತಪ್ಪಿಸಿ ಅವರಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಮುಂದಾಗಬೇಂದು ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕರ ಅವರು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ: ಸಿ.ಬಿ ಬಸವರಾಜ ಅವರು ಮಾತನಾಡಿ ಜನಸಂಖ್ಯೆಯ ಪ್ರತಿ ಸೂರಕ್ಕೆ ಒಬ್ಬರು ಕುರುಡರು ಇರುತ್ತಾರೆ. ದೃಷ್ಟಿ ದೋಷ ನಿವಾರಿಸಿದರೆ ಕುರುಡುತನ ಬರದಂತೆ ನೋಡಿಕೊಳಬಹುದು. ಇಂತಹ ನೇತ್ರ ಚಿಕಿತ್ಸೆ ಶಿಭಿರಗಳಿಂದ ಕುರುಡುತನ ನಿವಾಹರಣೆ ಸಾದ್ಯ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿ.ಪಂ ಸದ್ಯಸ ಈಶಪ್ಪ ಮಾದಿನೂರ ತಾ.ಪಂ ಅಧ್ಯಕ್ಷ ವೆಂಕನಗೌಡ ಹಿರೇಗೌಡರ, ತಾ.ಪಂ ಸದ್ಯಸರಾದ ಮಾಂತೇಶ ಪಾಟೀಲ್, ಹಾಗೂ ನಿಂಗಪ್ಪ ಯತ್ನಟ್ಟಿ, ವಕೀಲರಾದ ಪೀರಾ ಹುಸೇನ್ ಹೊಸಳ್ಳಿ ಇವುರುಗಳು ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ವೇದಿಕೆಯಲ್ಲಿ ಹನಮರೆಡ್ಡಿ ಅಂಗನಕಟ್ಟಿ, ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಅಕಳವಾಡಿ, ಹಿಂದೂಳಿದ ವರ್ಗಗಳ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ದಾಪಕ ಎ.ಟಿ ಸುಲ್ತಾನಪುರ ಡಾಟ್ಟರಗಳಾದ ನರಪತ್ತ ಸೋಳಂಕಿ. ಎಸ್.ಕೆ ದೇಸಾ. ರಮೇಶ ಮೂಲಿಮನಿ ದಾನರೆಡ್ಡಿ ಎಸ್.ಬಿ,ವಿಶ್ವಾನಾಥ ರೆಡ್ಡಿ, ಸರ್ವಮಂಗಳ ಮಠದ,ಹಾಗೂ ಹಸನಸಾಬ ನಿಂಗಪೂರ,ಅಲ್ಲದೇ ಶಾಂತಯ್ಯ ಹಿರೇಮಠ, ಗ್ರಾ.ಪಂ ಸದ್ಯಸರುಗಳಾದ ಕೇಶವರೆಡ್ಡಿ ಮಾದನೂರು, ಗವಿಸಿದ್ದಗೌಡ ದ್ಯಾಮನಗೌಡ, ದಯಾನಂದ ಕೋಳ್ಳಿ, ರಾಮಣ್ಣ ಚನ್ನಾಳ, ಸಣ್ಣ ಹನಮಪ್ಪ ವಡ್ಡರ್, ಮತ್ತು ಶಿವರೆಡ್ಡಿ ಮೈನಳ್ಳಿ ಚನ್ನನಗೌಡ ಮಾಲೀಪಾಟೀಲ, ಭೀಮನಗೌಡ ಮಾಲೀಪಾಟೀಲ,ಬಸವರಾಜ ಪೋಲಿಸ್ ಪಾಟೀಲ್ ಮುಂತಾದವರು ಉಪಸ್ತಿತರಿದ್ದರು. ಗ್ರಾ.ಪಂ ಅಧ್ಯಕ್ಷ ಕಾಶವ್ವ ಗೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾರಂಭದಲ್ಲಿ ಪ್ರಭು ಮೈನಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರೇವಪ್ಪ ಬಾರಿಕೇರ ವಂದಿಸಿದರು.
0 comments:
Post a Comment