ಗೆ,
ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ
ಮಾನ್ಯ ಗೌರವಾನ್ವಿತ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ-ಬೆಂಗಳೂರು,
ಮಾನ್ಯರೇ,
ವಿಷಯ : ಕೊಪ್ಪಳ ಹಾಗೂ ಗದಗ ಜಿಲ್ಲೆಗಳ ರೈತರು ಜಿಂಕೆ ಹಾವಳಿಂದ ಬೆಳೆಹಾನಿಯಾಗಿ ತೀವ್ರ ಕಂಗೆಟ್ಟಿದ್ದು, ಯಲಬುರ್ಗಾದಲ್ಲಿ "ಜಿಂಕೆಧಾಮ" ನಿರ್ಮಾಣಕ್ಕಾಗಿ ಅಧಿಕಾರಿಗಳ ದ್ವಂದ್ವ ಸಲಹೆಂದ ಏಕಪಕ್ಷೀಯ ನಿರ್ಧಾರಕ್ಕೆ ಬರುವ ಮುನ್ನ ಈ ಭಾಗದ ಜನಪ್ರತಿನಿಧಿಗಳು, ರೈತರ ಸಭೆ ಕರೆದು ತೀರ್ಮಾನಿಸುವ ಹಾಗೂ ರೈತರಿಗೆ ಬೆಳೆಹಾನಿ ಪರಿಹಾರಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವ ಬಗ್ಗೆ
ಮೇಲ್ಕಂಡ ವಿಷಯದಲ್ಲಿ ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಜಿಂಕೆ ಹಾವಳಿ ವಿಪರೀತವಾಗಿರುವ ವಿಷಯ ತಮ್ಮ ಗಮನಕ್ಕಿದ್ದು, ಇದೇ ಕಾರಣಕ್ಕೆ ಪ್ರಸಕ್ತ ಬಜೆಟ್‌ನಲ್ಲಿ ತಾವು ಯಲಬುಗಾದಲ್ಲಿ ಜಿಂಕೆ ಧಾಮ ನಿರ್ಮಾಣಕ್ಕೆ ರೂ. ೫೦ ಲಕ್ಷ ಅನುದಾನ ಘೋದ್ದೀರಿ.
ಆದರೆ ನಂತರದಲ್ಲಿ ಈ ಕುರಿತು ನಾನು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ಮಾಡಿದಾಗ ಸದರಿ "ಜಿಂಕೆಧಾಮ" ಯೋಜನೆ ಪ್ರಸ್ತಾಪವನ್ನು ಸರ್ಕಾರ ಕೈಬಿಟ್ಟಿದೆ ಎಂದು ಸರ್ಕಾರ ಅಪರ ಕಾರ್ಯದರ್ಶಿಗಳು ಹಾಗೂ ಅರಣ್ಯ ಇಲಾಖೆಯ ಕಛೇರಿಯ ಪಿ.ಆರ್ ಕಲಾವತಿ ಎಂಬವರು ಲಿಖಿತವಾಗಿ ತಿಳಿಸುವ ಮೂಲಕ ಈ ಜಿಂಕೆ ಸಮಸ್ಯೆಗೆ ಶಾಶ್ತತ ಪರಿಹಾರದ ಕನಸು ಕಾಣುತ್ತಿದ್ದ ರೈತರ ಜಂಗಾಬಲವನ್ನು ಉಡುಗಿಸಿದ್ದಾರೆ.
ಯಲಬುರ್ಗಾದಲ್ಲಿ "ಜಿಂಕೆಧಾಮ" ನಿರ್ಮಾಣದ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ ಜರಿಗಿದ ಸಭೆಯಲ್ಲಿ ಕೊಪ್ಪಳ ಜಿಲ್ಲಾಡಳಿತದ ಮೂಲಕ ಕೊಪ್ಪಳ ಅರಣ್ಯ ಇಲಾಖೆ ಅಧಿಕಾರಿಗಳು ಕಳಿಸಿರುವ ಪ್ರಸ್ತಾವನೆಗೆ ವಿರುದ್ಧವಾಗಿ ಸಲಹೆ ನೀಡಿದ್ದು ಕಂಡುಬಂದಿದೆ. ಹಾಗಾದರೆ "ಜಿಂಕೆಧಾಮ" ನಿರ್ಮಾಣದ ಕುರಿತಂತೆ ಕೊಪ್ಪಳ ಅರಣ್ಯ ಇಲಾಖೆ ಅಧಿಕಾರಿಗಳು ಕಳಿಸಿದ ಪ್ರಸ್ತಾವನೆ ತಪ್ಪೆ ? ಅಥವಾ ತಮ್ಮ ಅರ್ಧಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಅಧಿಕಾರಿಗಳು "ಜಿಂಕೆಧಾಮ" ಯೋಜನೆ ಕೈಬಿಡುವಂತೆ ನೀಡಿದ ಸಲಹೆಗಳು ತಪ್ಪೆ ? ತಿಳಿಯದಾಗಿದೆ. ಈ ಕುರಿತು ಸರ್ಕಾರಕ್ಕೆ ತಪ್ಪು ಮಾಹಿತಿ ಅಥವಾ ಅವಾಸ್ತವಿಕ ಸಲಹೆ ನೀಡಿದ ಅಧಿಕಾರಿಗಳ ವರ್ತನೆಗಳನ್ನು ಮಾನ್ಯರು ಗಂಭೀರವಾಗಿ ಪರಿಗಣಿಸಿ ನಮ್ಮ ಸಮಸ್ಯೆಗೆ ಅತೀತುರ್ತಾಗಿ ಶಾಶತ ಪರಿಹಾರ ಕಂಡುಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೆನೆ.
"ಜಿಂಕೆಧಾಮ" ಯೊಜನೆಯ ಕುರಿತು ನಿರ್ಧಾರ ಕೈಗೊಳ್ಳಬೇಕು, ಆದರೆ ಕೇವಲ ಅಧಿಕಾರಿಗಳು ನೀಡುವ ದ್ವಂದ ಸಲಹೆಗಳಿಂದ ಏಕಪಕ್ಷೀಯ ತೀರ್ಮಾನಕ್ಕೆ ಬಾರದೇ ಈ ಕುರಿತು ಶೀಘ್ರವೇ ಸಮಸ್ಯಾತ್ಮಕ ಜಿಲ್ಲೆಗಳ ಸಂಸದರು, ಸಚಿವರು, ಶಾಸಕರು, ಜಿ.ಪಂ. ತಾ.ಪಂ. ಅಧ್ಯಕ್ಷರು, ರೈತರು, ಸಮಸ್ಯೆಯ ಅನುಭವ ಇರುವ ತಜ್ಞರು ಸಭೆಯನ್ನು ಕರೆದು ಸಮಸ್ಯೆಯ ವಾಸ್ತವಿಕ ಪರಿಸ್ಥಿತಿ ಅರಿತು ಸರ್ವಸಮ್ಮತ ನಿರ್ಧಾರಕ್ಕೆ ಬರುವಂತೆ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ರೈತರು ಜಿಂಕೆಹಾವಳಿಂದ ಕಂಗೆಟ್ಟು ಹತಾಷರಾಗಿ ಆತ್ಮಾಹುತಿಯಂಥ ತೀರ್ಮಾನಕ್ಕೆ ಕೈ ಹಾಕುವ ಹಾಗೂ ಸರ್ಕಾರದ ವಿರುದ್ಧ ದಂಗೆ ಏಳುವ ಮುನ್ನವೇ ಸ್ಪಷ್ಟ ತೀರ್ಮಾನಕ್ಕೆ ಬರುವಂತೆ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಅಲ್ಲದೇ ಜಿಂಕೆ ಹಾವಳಿಂದ ಬೆಳೆಹಾನಿಯಾದ ರೈತರಿಗೆ ನೀಡುತ್ರಿರುವ ಪರಿಹಾರಕ್ಕಾಗಿ ಕೊಪ್ಪಳ ಜಿಲ್ಲೆಯಲ್ಲಿ ಅನುದಾನದ ಕೊರತೆ ಇದೆ ಎಂಬ ಕಾರಣಕ್ಕೆ ಹಿಂಗಾಗು ಹಂಗಾಮು ಬಿತ್ತನೆ ಮುಗಿದರೂ ಮುಂಗಾರು ಹಂಗಾ"ನ ಪರಹಾರ ನೀಡಿಲ್ಲ. ಅಲ್ಲದೇ ನೀಡುತ್ತಿರುವ ಪರಿಹಾರ ಸರ್ಕಾರ ಯಾವ ಯಾವ ಬೆಳೆಗೆ ಎಷ್ಟೆಷ್ಟು ಪರಿಹಾರ ನೀಡಬೇಕೆಂಬ ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಪಾಲನೆ ಮಾಡದೇ, ಬಿತ್ತನೆಗಾಗಿ ರೈತರು ಸಾವಿರಾರು ರೂಪಾ ಖರ್ಚುಮಾಡಿಕೊಂಡು ಆರ್ಥಿದ ಸಂಕಷ್ಟಕ್ಕೆ ಸಿಲುಕಿದರೂ ರೂ. ೧೦೦, ೨೦೦ ಪರಿಹಾರ ನೀಡುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ. ಆದ್ದರಿಂದ ಹೆಚ್ಚು ಪರಿಹಾರ ನೀಡಿಕೆಯತ್ತ ಗಮನ ಹರಿಸುವ ಜೊತೆಗೆ ಪರಿಹಾರ ನೀಡಿಕೆಗೆ ಕಾಲಕಾಲಕ್ಕೆ ಅಗತ್ಯ ಪ್ರಮಾಣದ ಅನುದಾನ ಬಿಡುಗಡೆ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೆನೆ. ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷೆಯಲ್ಲಿ ...
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
ಜಿ.ಎಸ್.ಕಮತರ ಹಾಗೂ ಸಂತ್ರಸ್ತ ರೈತರು ಕೊಪ್ಪಳ,ಗದಗ ಜಿಲ್ಲೆ
0 comments:
Post a Comment