PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ನ : ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಿಗೆ ನಡೆಸಲಾಗುವ ಚುನಾವಣೆ ದಿನಾಂಕವನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಸಿ.ಆರ್. ಚಿಕ್ಕಮಠ ಅವರು ಹೇಳಿದ್ದಾರೆ.
ತಾಲೂಕಿನ ಟಿ.ಬಿ. ಡ್ಯಾಂ ನಲ್ಲಿರುವ ಇಂಧ್ರಭವನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ಬಾಗಲಕೋಟೆ ಸೇರಿದಂತೆ ನಾಲ್ಕು ಜಿಲ್ಲೆಗಳ ಚುನಾವಣಾ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವ"ಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಆಯೋಗ ಸದ್ಯದಲ್ಲಿಯೇ ಪ್ರಕಟಿಸಲಿದ್ದು, ಎಲ್ಲ ಜಿಲ್ಲಾಡಳಿತ ಚುನಾವಣಾ ಪೂರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು. ಈಗಾಗಲೆ ಮತದಾರರ ಪಟ್ಟಿ, ಮತದಾನ ಕೇಂದ್ರ "ವರಗಳನ್ನು ಅಂತಿಮಗೊಳಿಸಲಾಗಿದ್ದು, ಚುನಾವಣೆ ನಡೆಸಲು ಬೇಕಾಗುವ ಎಲ್ಲ ಪೂರ್ವ ತಯಾರಿ ವಿಧಿ ವಿಧಾನಗಳನ್ನು ನ. ೧೦ ರೊಳಗಾಗಿ ಪೂರ್ಣಗೊಳಿಸಬೇಕು. ಚುನಾವಣೆ ದಿನಾಂಕ ಪ್ರಕಟವಾದ ನಂತರ, ರಾಜ್ಯಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಆ ಸಂದರ್ಭದಲ್ಲಿ ಸರ್ಕಾರದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಉದ್ಥಾಟನಾ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ. ಈಗಾಗಲೆ ಮಂಜೂರಾದ, ಮುಂದುವರಿದ ಕಾಮಗಾರಿಗಳನ್ನು ತೆಗೆದುಕೊಳ್ಳಬಹುದಾಗಿದೆ. ನೀತಿ ಸಂಹಿತೆ ಜಾರಿಗೆ ಬಂದ ನಂತರ ಸರ್ಕಾರದ ಯೋಜನೆಗಳ ಪ್ರಚಾರಕ್ಕಾಗಿ ಅಳವಡಿಸಲಾಗಿರುವ ಬ್ಯಾನರ್‍ಸ್, ಬಂಟಿಂಗ್ಸ್, ಭಿತ್ತಿ ಪತ್ರ, ಹೆದ್ದಾರಿ ಫಲಕಗಳನ್ನು ತೆಗೆದುಹಾಕುವುದು, ಚುನಾವಣೆ ಸಂದರ್ಭದಲ್ಲಿ ಸಾಮೂಹಿಕ ಮದುವೆ, ಸಹಭೋಜನ ನಿಷೇಧಿಸಲಾಗಿದ್ದು, ಇವುಗಳಿಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡುವಂತಿಲ್ಲ. ಚುನಾವಣೆ ಸಂದರ್ಭದಲ್ಲಿ ಮದ್ಯಪಾನ, ಚಿಲ್ಲರೆ ಮದ್ಯಮಾರಾಟ ಮಾಡುವುದನ್ನು ನಿರ್ಬಂಧಿಸಬೇಕು. ಚುನಾವಣೆ ಸುಸೂತ್ರವಾಗಿ ನಡೆಸಲು ೧೭೦೦೦ ಗೃಹರಕ್ಷಕ ದಳದವರನ್ನು ನೇಮಿಸಲಾಗುವುದು, ಎಲ್ಲ ಬಂದೋಬಸ್ತ್‌ಗಳು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೇರಿದ್ದು, ಪ್ಯಾರಾ ಮಿಲಿಟರಿ ಪಡೆ ಇದಕ್ಕೆ ಅಗತ್ಯವಿರುವುದಿಲ್ಲ. ಒಂದು ವೇಳೆ ರಾಯಚೂರು ಜಿಲ್ಲೆಯಲ್ಲಿ ನಕ್ಸಲೀಯರ ಬಗ್ಗೆ ಮಾಹಿತಿ ನೀಡಿದಲ್ಲಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಚುನಾವಣೆ ಸಂದರ್ಭದಲ್ಲಿ ಯಾವುದೇ ಪಕ್ಷಗಳು ಮಾಡುವ ದೂರು ದೋಷಗಳು ಲಿಖಿತವಾಗಿರಬೇಕು. ಚುನಾವಣೆ ಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳಿಗೆ ಚುನಾವಣೆ ಸಂದರ್ಭದಲ್ಲಿ ಒಂದು ತಿಂಗಳ ಸಂಬಳವನ್ನು ಹೆಚ್ಚುವರಿಯಾಗಿ ನೀಡುತ್ತಿದ್ದು, ಅದನ್ನು ಪೊಲೀಸ್ ಸಿಬ್ಬಂದಿಗೆ ವಿಸ್ತರಿಸಲು ಸಾಧ್ಯವಿಲ್ಲ. ಅದು ಮುಗಿದ ಅಧ್ಯಾಯವಾಗಿದೆ. ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. ೫೦ ಮೀಸಲಾತಿ ಕಲ್ಪಿಸಲಾಗಿದ್ದು, ಸ್ಥಾನ ಮೀಸಲಾತಿಗಳನ್ನು ಈ ಕೂಡಲೆ ಪ್ರಕಟಿಸಲಾಗುವುದು. ಆಯಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮೀಸಲಾತಿ ವಿವರಗಳನ್ನು ಅಂತರ್ಜಾಲದಲ್ಲಿ ಪ್ರದರ್ಶಿಸುವಂತಾಗಬೇಕು. ಚುನಾವಣಾ ಕಾರ್ಯಕ್ಕೆ ನೇಮಿಸಲಾದ ಅಧಿಕಾರಿ, ಸಿಬ್ಬಂದಿಯವರು ಆ ತಾಲೂಕಿನವರಾಗಿದ್ದರೆ, ಅವರನ್ನು ಬೇರೆ ತಾಲೂಕಿಗೆ ನಿಯೋಜಿಸಬೇಕು. ಅಧಿಕಾರಿ, ಸಿಬ್ಬಂದಿವರ್ಗದವರು ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿ ಹಾಗೂ ಪಕ್ಷಕ್ಕೆ ಸಂಬಂಧಿಸಿದಂತೆ ಪ್ರಚಾರ ಮಾಡುವುದು ಗಮನಕ್ಕೆ ಬಂದರೆ, ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಸಿ.ಆರ್. ಚಿಕ್ಕಮಠ ಅವರು ವಿವರಿಸಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ರಾಯಚೂರು- ". ಅನ್ಬುಕುಮಾರ್, ಬಾಗಲಕೋಟೆ- ಮನೋಜ್ "ನಾ, ಬಳ್ಳಾರಿ- ಬಿ. ಶಿವಪ್ಪ ಮತ್ತು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಈಶ್ವರಚಂದ್ರ "ದ್ಯಾಸಾಗರ್, ರಾಯಚೂರು- ಟಿ.ಆರ್. ಸುರೇಶ್, ಬಾಗಲಕೋಟೆ- ಅಭಿಷೇಕ್ ಗೋಯೆಲ್, ಬಳ್ಳಾರಿ- ಎಂ.ಎನ್. ನಾಗರಾಜ್, ಬಳ್ಳಾರಿ ಜಿಲ್ಲೆ ಅಪರ ಜಿಲ್ಲಾಧಿಕಾರಿ ಶಿವಮೂರ್ತಿ, ಕೊಪ್ಪಳ ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ಸಹಾಯಕ ಆಯುಕ್ತ ಶರಣಬಸಪ್ಪ ಮುಂತಾದ ಅಧಿಕಾರಿಗಳು ಸಭೆಯಲ್ಲಿ ಭಾಗವ"ಸಿ, ಚುನಾವಣಾ "ವರಗಳನ್ನು ಒದಗಿಸಿದರು

Advertisement

0 comments:

Post a Comment

 
Top