PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಅ. ೨೯. ಸಮಾಜ ಕಾರ್ಯ ಎಂಬುದು ನಿಸ್ವಾರ್ಥ ಸೇವೆಯ ಕೇಂದ್ರ ಎಂದು ಇಸ್ಸಾರ್ ಕಾಲೇಜು ಸಮಾಜ ಕಾರ್ಯ ವಿಭಾಗ ನಿರ್ದೇಶಕ . ಐ. ನಾಡಗೌಡ್ರು ಅಭಿಪ್ರಾಯಪಟ್ಟರು.ಅವರು ತಾಲೂಕಿನ ಹಿರೇಸಿಂದೋಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲ್ಲಿ ಹಮ್ಮಿಕೊಂ ಡಿರುವ ಇಸ್ಸಾರ್ ಕಾಲೇಜಿನ ಎಂ ಎಸ್ ಡಬ್ಲ್ಯೂ ವಿಧ್ಯಾರ್ಥಿಗಳ ಹತ್ತು ದಿನಗಳ ವಿಶೇಷ ಸಮಾಜ ಕಾರ್ಯ ಶಿಬಿರವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು.

ಸಮಾಜ ಕಾರ್ಯ ಶಿಬಿರ ಸಾಮಾಜಿಕ ಜವಾಬ್ದಾರಿ ಜೊತೆಗೆ, ಎಂ ಎಸ್ ಡಬ್ಲ್ಯೂ ವಿಧ್ಯಾರ್ಥಿ ಸಮಗ್ರ ಭಾರತ ನಿರ್ಮಾಣಕ್ಕೆ ಪ್ರೇರಣೆಯಾಗಲು ಹೇಗೆ ಸಾಧ್ಯ ಎಂಬುದನ್ನು ತೋರಿಸಿಕೊಡುತ್ತದೆ. ಸಮಾಜ ಕಾರ್ಯಕರ್ತರು ಒಳ್ಳೆಯ ಕೆಲಸಗಳನ್ನು ಮಾಡಿ ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವ"ಸಿದ್ದ ಗ್ರಾಮ ಪಂಚಾಯತ ಅಧ್ಯಕ್ಷೆ ಕಾಶವ್ವ ಗೋಡಿ ಮಾತನಾಡಿ ಗ್ರಾಮದಲ್ಲಿ ಎಲ್ಲರೂ ಶಿಬಿರಕ್ಕೆ ಹಾಗೂ "ಧ್ಯಾರ್ಥಿಗಳಿಗೆ ಸಹಾಯ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಗ್ರಾ. ಪಂ. ಸದಸ್ಯರಾದ ಸಣ್ಣ ಹನುಮಪ್ಪ, ಗ"ಸಿದ್ದನಗೌಡ, ಗಂಗಮ್ಮ ಯಂಕಪ್ಪ ಹೊಸಳ್ಳಿ, ನೀಲವ್ವ ನಿಂಗಪ್ಪ ಯತ್ನಟ್ಟಿ, ರಾಮಣ್ಣ ಚಿನ್ನಾಳ, ಈರಪ್ಪ ಕುಂಬಾರ, ರಘೋತ್ತಮ ಪಾಟೀಲ, ಇಸ್ಸಾರ್ ಕಾಲೇಜು ಉಪನ್ಯಾಸಕ ಕಿಲಾರಿ ಉಮೇಶ ಬಾಬು, ಇಸ್ಸಾರ್ ಕಾಲೇಜು ಉಪನ್ಯಾಸಕ ಕಿರಣ್ ಕುಮಾರ್ ಎಂ.ಕೆ, ಇಸ್ಸಾರ್ ಕಾಲೇಜು ಉಪನ್ಯಾಸಕ ನಾಗಯ್ಯ ಸ್ವಾಮಿ ಇತರರು ಇದ್ದರು.

ಶಿಬಿರ ಸಂಯೋಜಕ ರಘು ವೈ. ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಜುನಾಥ ಪಾಟೀಲ್ ಸ್ವಾಗತಿಸಿದರು, ಅನುರಾಧಾ ಕಾರ್ಯಕ್ರಮ ನಿರೂಪಿಸಿದರು ಕೊನೆಯಲ್ಲಿ ಮಹೇಶ ವಂದಿಸಿದರು. ಇಸ್ಸಾರ್ ಕಾಲೇಜಿನ ಎಂ ಎಸ್ ಡಬ್ಲ್ಯೂ ವಿಧ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Advertisement

0 comments:

Post a Comment

 
Top