PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಭಾರತೀಯ ಶೈಕ್ಷಣಿಕ ಪದ್ಧತಿಯ ಅಮೂಲಾಗ್ರ ಬದಲಾವಣೆಯಲ್ಲಿ ಗಾಂಧೀಜಿಯವರ ಪಾತ್ರ ಬಹು ದೊಡ್ಡದು. ಭಾರತೀಯ ಶಿಕ್ಷಣ ಪದ್ಧತಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಅವರು ಹೇಳಿದ್ದಾರೆ. ವಾರ್ತಾ ಇಲಾಖೆಯು ಸರ್ಕಾರಿ ಪ್ರೌಢಶಾಲೆ ಹಾಗೂ ಗ್ರಾಮ ಪಂಚಾಯತ್ ಹಲಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ಹಲಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ "ಗಾಂಧೀಜಿಯವರ ಶೈಕ್ಷಣಿಕ ವಿಚಾರಧಾರೆಗಳು" ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬ್ರಿಟೀಷರು ಭಾರತವನ್ನು ತಮ್ಮ ವ್ಯಾಪ್ತಿಗೆ ತೆಗೆದುಕೊಂಡು ಆಡಳಿತ ನಡೆಸುವ ಸಂದರ್ಭದಲ್ಲಿ ಇಂಗ್ಲೀಷ್ ಭಾಷೆಯನ್ನು ಭಾರತೀಯರ ಮೇಲೆ ಒತ್ತಾಯಪೂರ್ವಕವಾಗಿ ಹೇರತೊಡಗಿದರು. ಇದನ್ನು ಪ್ರತಿಭಟಿಸಿದ ಮಹಾತ್ಮಾ ಗಾಂಧೀಜಿಯವರು ಮಕ್ಕಳಿಗೆ ಶಿಕ್ಷಣವನ್ನು ಮಾತೃ ಭಾಷೆಯಲ್ಲಿಯೇ ನೀಡುವುದರಿಂದ ಪರಿಣಾಮಕಾರಿ ಕಲಿಕೆಗೆ ಸಹಾಯಕವಾಗುತ್ತದೆ. ಇಂಗ್ಲೀಷ್ ಭಾಷೆಯನ್ನು ಭಾರತೀಯರ ಮೇಲೆ ಒತ್ತಾಯಪೂರ್ವಕವಾಗಿ ಹೇರುವುದು ಸರಿಯಲ್ಲ ಎಂದು ಪ್ರತಿಭಟಿಸಿದರು. ಇದರ ಪರಿಣಾಮವಾಗಿಯೇ ಆಯಾ ರಾಜ್ಯಗಳಲ್ಲಿ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದು ಪ್ರಾರಂಭವಾತು. ಗಾಂಧೀಜಿಯವರ ಸತ್ಯ, ಅಹಿಂಸೆ, ಪ್ರೇಮ ಹಾಗೂ ಸತ್ಯಾಗ್ರಹ ಈ ನಾಲ್ಕು ಗುಣಗಳು ಅವರನ್ನು ಮಹಾತ್ಮರನ್ನಾಗಿ ಮಾಡಲು ಕಾರಣವಾತು. ಶೈಕ್ಷಣಿಕ "ಚಾರಗಳಲ್ಲದೆ, ರಾಜಕೀಯ, ಸಾಮಾಜಿಕ ಅಲ್ಲದೆ ಶ್ರಮ ಸಂಸ್ಕೃತಿಯನ್ನು ಈ ಜಗತ್ತಿಗೆ ಪರಿಚುಸಿಕೊಟ್ಟವರು. ಗಾಂಧೀಜಿಯವರ ಸರಳ ವ್ಯಕ್ತಿತ್ವ ಹಾಗೂ ವೈಚಾರಿಕತೆ ಪ್ರತಿಯೊಬ್ಬರಿಗೂ ಅನುಕರಣೀಯವಾಗಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಕೊಪ್ಪಳ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಅಧ್ಯಾಪಕ ಎನ್. ಎಂ. ಪವಾಡಿಗೌಡರ ಅವರು ಮಾತನಾಡಿ, ಸರಳ ವ್ಯಕ್ತಿತ್ವ, ಉದಾತ್ತ ನೆಲೆಯ ವಿಚಾರವಾದ ಮಹಾತ್ಮಾ ಗಾಂಧೀಜಿಯವರು ವರ್ಣ ಸಂಘರ್ಷದ ಮೂಲಕ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಭಾರತೀಯರಲ್ಲಿ ಮನೆ ಮಾಡಿರುವ ಬಡತನ ಹೋಗಲಾಡಿಸಲು ಕಂಕಣ ಬದ್ಧರಾಗಿ ಜೀವನದುದ್ದಕ್ಕೂ ನೇಯ್ದ ಉಡುಪು ಧರಿಸಿ ತ್ಯಾಗಮು ಎನಿಸಿಕೊಂಡರು. ತಮ್ಮ ವಯಕ್ತಿಕ ಬದುಕಿನ ಭೋಗ ಲಾಲಸೆಗಳನ್ನು ದೇಶಕ್ಕಾಗಿ ತ್ಯಾಗ ಮಾಡಿದ ಕರುಣಾಮು, ಇಡೀ ಭಾರತದ ಭವಿಷ್ಯ ಯುವಜನರ ಮೇಲೆ ನಿಂತುಕೊಂಡಿದೆ. ಅವರು ಅಡ್ಡದಾರಿ ಹಿಡಿಯದೇ, ಸನ್ಮಾರ್ಗದಲ್ಲಿ ನಡೆದುಕೊಂಡು ಬರಲು, ಭಾರತೀಯ ಶೈಕ್ಷಣಿಕ ಪದ್ಧತಿ ಅಮೂಲಾಗ್ರ ಬದಲಾವಣೆ ತರುವಲ್ಲಿ ಶ್ರ"ಸಿದರು. ಇಂಗ್ಲೀಷ್ ಭಾಷೆ ಭಾರತೀಯರ ಅಂತಃ ಶಕ್ತಿಯನ್ನು ಕಸಿದುಕೊಳ್ಳುತ್ತಿದೆ. ಮಗು"ಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಪ್ರತಿಪಾದಿಸಿದರು. ಇಂಗ್ಲೀಷ್ ಕಲಿರಿ, ಆದರೆ ಇಂಗ್ಲೀಷರ ಮಾದರಿಯ ಜೀವನ ಬೇಡ, ಗಾಂಧಿ ಪ್ರೇರಿತ ಕೃ ಪದ್ಧತಿ ಇಂದು ಸಾವಯವ ಕೃಗೆ ಪೂರಕವಾಗಿದೆ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರುಗಳಾದ ಕುಬೇರಪ್ಪ ಗೊರವರ, ಸೋಮಪ್ಪ ಮ್ಯಾಗಳಮನಿ ಹಾಗೂ ಮುದಕಪ್ಪ ಹುಲ್ಲಾನವರ, ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಸುಮಂಗಲ ಶಾಸ್ತ್ರಿ, ಗ್ರಾ.ಪಂ. ಉಪಾಧ್ಯಕ್ಷೆ ಬಸಮ್ಮ ವದಗನಾಳ, ಗ್ರಾ.ಪಂ. ಸದಸ್ಯರುಗಳಾದ ರೇಣುಕಾ ಮಡಿವಾಳರ, ಶರಣಪ್ಪ ಚಿಂತಾಮಣಿ, ರೇಣುಕಾ "ರನಗೌಡ, ರೇಣುಕಾ ಪೊಲೀಸ್ ಪಾಟೀಲ್, ಸಿದ್ದಮ್ಮ ನಾಗನಗೌಡ, ಯಮನೂರಪ್ಪ ಹಳ್ಳಿಕೇರಿ, ಸುಜಾತ ತಳವಾರ, ಜಗದೀಶ ಓಜನಹಳ್ಳಿ, ಕರಿಯಪ್ಪ ಹಳ್ಳಿಕೇರಿ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಗ್ರಾ.ಪಂ. ಅಧ್ಯಕ್ಷ ಗಂಗಮ್ಮ ಮ್ಯಾಗಳಮನಿ ಕಾರ್ಯಕ್ರಮದ ಅಧ್ಯಕ್ಷತೆ ವ"ಸಿದ್ದರು. ಪ್ರಾರಂಭದಲ್ಲಿ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ಎಲ್.". ಜೋ ಸ್ವಾಗತಿಸಿದರು, ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಪ್ರಾಸ್ತಾ"ಕವಾಗಿ ಮಾತನಾಡಿದರು, ಇದೇ ಸಂದರ್ಭದಲ್ಲಿ ಈಶಪ್ಪ ಹಡಪದ ಸಂಗಡಿಗರಿಂದ ಜನಪದ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

Advertisement

0 comments:

Post a Comment

 
Top