PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಕನ್ನಡನೆಟ್.ಕಾಂ ಕನ್ನಡ ಇ ಪತ್ರಿಕೆ ಸ್ವಾತಂತ್ರೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್‍ಯಕ್ರಮದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ನಗರದ ಪ್ರವಾಸಿ ಮಂದಿರದಲ್ಲಿ ವಿಜೇತರಿಗೆ ಬಸವರಾಜ್ ಸೂಳಿಬಾವಿ, ಡಾ.ಮಹಾಂತೇಶ ಮಲ್ಲನಗೌಡರ, ಬಸವರಾಜ ಶೀಲವಂತರ, ಶಿ.ಕಾ.ಬಡಿಗೇರ ಹಾಗೂ ಸಂಪಾದಕ ಸಿರಾಜ್ ಬಿಸರಳ್ಳಿ ಬಹುಮಾನ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಕನ್ನಡನೆಟ್.ಕಾಂ ಸಂಪಾದಕ ಸಿರಾಜ್ ಬಿಸರಳ್ಳಿ ಮಾತನಾಡಿ -ಗೆಲ್ಲುವುದಕ್ಕಿಂತ ಭಾಗವಹಿಸುವ ಮನೋಭಾವ ಬಹಳ ಮುಖ್ಯ. ಜಿಲ್ಲೆಯ ವಿವಿದೆಡೆಯಿಂದ ಬಂದು ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದು ಹೇಳಿದರು. ಬಹುಮಾನ ವಿತರಿಸಿದ ಅತಿಥಿಗಳು ಎಲ್ಲ ವಿಜೇತರನ್ನು ಅಭಿನಂದಿಸಿದರು.ಕಾರ್‍ಯಕ್ರಮದಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು, ಹಿರೇಬೀಡನಾಳ ಪ್ರೌಢ ಶಾಲೆಯ ಮುಖ್ಯೊಪಾಧ್ಯರು, ಮಹೇಶ ಬಳ್ಳಾರಿ, ಶಿವಪ್ರಸಾದ ಹಾದಿಮನಿ,ವೀರಣ್ಣ ಹುರಕಡ್ಲಿ ಸೇರಿದಂತೆ ಕವಿಸಮೂಹದ ಕವಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top