ಲಂಡನ್ (ಐಎಎನ್‌ಎಸ್): ಲಲನೆಯರ ತೆರೆದೆದೆಯ ಪ್ರದರ್ಶನಕ್ಕೂ ಭೂಕಂಪಕ್ಕೂ ಸಂಬಂಧ ಇದೆಯೇ? ಇರಾನ್‌ನ ಮೌಲ್ವಿಯೊಬ್ಬರ ಪ್ರಕಾರ ಇವೆರಡರ ನಡುವೆ ಗಟ್ಟಿ ಸಂಬಂಧವೇ ಇದೆ. ಕಾಕತಾಳೀಯವೆಂಬಂತೆ ಈ ಮೌಲ್ವಿಯ ಪ್ರತಿಪಾದನೆ ನಿಜವೆನ್ನಿಸುವ ರೀತಿಯಲ್ಲಿ ಒಂದೆಡೆ ತೆರೆದೆದೆ ಪ್ರದರ್ಶನ ನಡೆದ ಸಂದರ್ಭದಲ್ಲೇ ಭೂಮಿಯೂ ನಡುಗಿಬಿಟ್ಟಿದೆ! ‘ಸಭ್ಯವಾದ ಉಡುಪು ಧರಿಸದ ಅನೇಕ ಹೆಂಗಳೆಯರು ಯುವಕರು ಅಡ್ಡದಾರಿ ಹಿಡಿಯಲು ಕಾರಣರಾಗುತ್ತಿದ್ದಾರೆ..... ಇದರಿಂದ ಯುವಕರ ಪಾವಿತ್ರ್ಯ ಹಾಳಾಗುವ ಜತೆಗೆ ಸಮಾಜದಲ್ಲಿ ವ್ಯಭಿಚಾರ ಹೆಚ್ಚಾಗುತ್ತಿದೆ. ಇವೆಲ್ಲದರ ಅಂತಿಮ ಪರಿಣಾಮವಾಗಿ ಭೂಕಂಪಗಳು ಹೆಚ್ಚಾಗುತ್ತಿವೆ’ ಎಂದು ಮೌಲ್ವಿ ಕಜೆಮ್ ಸೆಡಿಗಿ ಏ.12ರಂದು ಪ್ರತಿಪಾದಿಸಿದ್ದರು.ಆದರೆ ಮೌಲ್ವಿಯ ಈ ಹೇಳಿಕೆ ವಿರುದ್ಧ ಜಗತ್ತಿನ ನಾನಾ ಭಾಗಗಳ ಮಹಿಳೆಯರಿಂದ ಖಂಡನೆಯ ಮಹಾಪೂರವೇ ಹರಿದುಬಂತು ಅಷ್ಟೇ ಅಲ್ಲ, ಈ ಹೇಳಿಕೆಯನ್ನು ಧಿಕ್ಕರಿಸಿ ಏ.26ರ ಸೋಮವಾರ ‘ತೆರೆದೆದೆಯ ಪ್ರದರ್ಶನ’ (ಬೂಬ್‌ಕ್ವೇಕ್) ( boobquake ) ವನ್ನೂ ಆಯೋಜಿಸಿದ್ದರು.
ಇರಾನ್ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳ ಸುಮಾರು ಎರಡು ಲಕ್ಷ ಮಹಿಳೆಯರು ಇಂಟರ್‌ನೆಟ್‌ನ ಜಾಲತಾಣಗಳ ಮೂಲಕ ತಮ್ಮ ತೆರೆದೆದೆ ಪ್ರದರ್ಶಿಸಿ ಮೌಲ್ವಿಯ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಈ ಪ್ರದರ್ಶನದ ಸಂದರ್ಭದಲ್ಲೇ, ರಿಕ್ಟರ್ ಮಾಪಕದಲ್ಲಿ 6.5ರಷ್ಟು ತೀವ್ರತೆಯ ಭೂಕಂಪ ತೈವಾನ್‌ನ್ನು ನಡುಗಿಸಿತು.
ಇದರಿಂದ ದೊಡ್ಡ ಪ್ರಮಾಣದ ಹಾನಿ ಆಗಲಿಲ್ಲವಾದರೂ ಜನರು ಆತಂಕಕ್ಕೆ ಒಳಗಾಗುವುದು ತಪ್ಪಲಿಲ್ಲ. ಕಟ್ಟಡಗಳು ಇದ್ದಕ್ಕಿದ್ದಂತೆಯೇ ಅಲುಗಾಡಿದವು. ತ್ರಿಪಥ ಹೆದ್ದಾರಿಯ ಭಾಗವೊಂದು ನೆಲದಾಳಕ್ಕೆ ಕುಸಿದು ಮೂರು ಕಾರುಗಳು ಹೂತುಹೋದವು.
ತೆರೆದೆದೆಯ ಪ್ರದರ್ಶನ ಸಂಘಟಿಸಿದ್ದ ಅಮೆರಿಕದ ಇಂಡಿಯಾನಾ ವಿ.ವಿ.ಯ ವಿದ್ಯಾರ್ಥಿನಿ ಜೆನ್ನಿಫರ್ ಮ್ಯಾಕ್‌ಕ್ರೀತ್ ಮಾತ್ರ ‘ತೈವಾನ್‌ನಲ್ಲಿ ಸಂಭವಿಸಿದ ಭೂಕಂಪ ಲೆಕ್ಕಕ್ಕಿಲ್ಲ. ತೈವಾನ್ ತಾವು ನಿಗದಿಮಾಡಿದ್ದ ಸಮಯಪಟ್ಟಿಯ ವ್ಯಾಪ್ತಿಯ ಹೊರಕ್ಕೆ ಸೇರಿದ ಪ್ರದೇಶವಾಗಿದೆ’ ಎಂದಿ ದ್ದಾರೆ.
ಮೌಲ್ವಿಯ ಹೇಳಿಕೆಯ ಸತ್ಯಾಸತ್ಯವನ್ನು ಪರೀಕ್ಷಿಸಬೇಕು ಮತ್ತು ಎದೆಯ ಸೀಳು ತೋರಿಸುವು ದಕ್ಕೂ ಭೂಕಂಪ ಸಂಭವಿಸಿದಕ್ಕೂ ನಿಜವಾದ ಸಂಬಂಧವಿದೆಯೇ ಎಂಬುದನ್ನು ಖಚಿತಪಡಿಸಿ ಕೊಳ್ಳಲು ಇಂತಹ ಕಾರ್ಯಕ್ರಮ ಸಂಘಟಿಸಿದೆ.
ಇರಾನ್ ಸೇರಿದಂತೆ ವಿವಿಧ ರಾಷ್ಟ್ರಗಳ ಮಹಿಳೆಯರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಕೆಲವು ಮಹಿಳೆಯರು ಮಾತ್ರ ವಿರೋಧ ವ್ಯಕ್ತಪಡಿಸಿದರು ಎಂದು ವಿವರಿಸಿದ್ದಾರೆ.
ಕೃಪೆ; ಗಲ್ಫ್ ಕನ್ನಡಿಗ/ಮಿಡ್ ಡೇ
(
0 comments:
Post a Comment