೧೦-೩-2010
ಕೊಪ್ಪಳ : ಗವಿಸಿದ್ಧೇಶ್ವರ ಸಂಸ್ಥಾನ ಶ್ರೀ ಗವಿಮಠದ ೧೭ನೇಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಮ. ನಿ. ಪ್ರ. ಜ. ಲಿಂ. ಶಿವಶಾಂತವೀರ ಮಹಾಶಿವಯೋಗಿಗಳ ೭ನೇ ಪುಣ್ಯಸ್ಮರಣೆ ಅದ್ಧೂರಿಯಾಗಿ ನೆರವೇರಿತು. ಇಂದು ಬೆಳಿಗ್ಗೆ ೫.೩೦ಕ್ಕೆ ಲಿಂ. ಶಿವಶಾಂತವೀರ ಶಿವಯೋಗಿಗಳ ಗದ್ದುಗೆಗೆ ಮಹಾರುದ್ರಾಭಿಷೇಕ ನೆರವೇರಿಸುವದರೊಂದಿಗೆ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಆರಂಭವಾತು. ಇದರ ಅಂಗವಾಗಿ ಪರಮಪೂಜ್ಯ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಳೆಮಲ್ಲೇಶ್ವರ ದೇವಸ್ಥಾನದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ ನಡೆತು. ಈ ಪಾದಯಾತ್ರೆಯಲ್ಲಿ ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು, ಹೆಬ್ಬಾಳ ಶ್ರೀಗಳು, ಹಿರೇಸಿಂದೋಗಿ ಶ್ರೀಗಳು, ತಮದಡ್ಡಿ ಶ್ರೀಗಳು, ಕೊತ್ಬಾಳ್ ಶ್ರೀಗಳು, ಮಹಾಂತದೇವರು, ಪಂಪಯ್ಯದೇವರು ಮೊದಲಾದ ಪೂಜ್ಯರು ಭಾಗವಹಿಸಿದ್ದರು. ಮಳೆಮಲ್ಲೇಶ್ವರದಿಂದ ಶ್ರೀಗವಿಮಠದವರೆಗಿನ ಈ ಪಾದಯಾತ್ರೆಯಲ್ಲಿ ಪುರ ಪ್ರಮುಖರು, ರಾಜಕೀಯ ಗಣ್ಯರು ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನಡಿಯಲ್ಲಿ ಬರುವ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು, ಹೆಣ್ಣು ಮಕ್ಕಳು ಬಿಸಿಲನ್ನು ಲೆಕ್ಕಿಸದೇ ಶ್ರೀಗಳೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾದರು. ಪಾದಯಾತ್ರೆ ಶ್ರೀಮಠಕ್ಕೆ ತಲುಪಿದ ನಂತರ ವನಮಹೋತ್ಸವ ಕಾರ್ಯಕ್ರಮಕ್ಕೆ ನಾಡೋಜ ಪ್ರಶಸ್ತಿ ವಿಜೇತೆ ಸಾಲುಮರದ ತಿಮ್ಮಕ್ಕ ಶ್ರೀ ಗವಿಮಠದ ಆವರಣದಲ್ಲಿ ಸಸಿ ನೆಡುವದರೊಂದಿಗೆ ಚಾಲನೆ ನೀಡಿದರು. ಇವರ ಜೊತೆ ಪೂಜ್ಯ ಶ್ರೀ ಜ. ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಜಿಲ್ಲಾಧಿಕಾರಿಗಳಾದ ಸತ್ಯಮೂರ್ತಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಈಶ್ವರಚಂದ್ರ ವಿದ್ಯಾಸಾಗರರವರು, ಅರಣ್ಯ ಇಲಾಖೆ ಅಧಿಕಾರಿಗಳು ಮೊದಲಾದ ಗಣ್ಯರು ಭಾಗವಹಿಸಿದ್ದರು. ಬೆಳಿಗ್ಗೆ ೧೦.೦೦ ಗಂಟೆಂದ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಾಡಿನ ಹೆಸರಾಂತ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದ ಯಶಸ್ವಿಯಾಗಿ ಪ್ರಾರಂಭಗೊಂಡಿತು. ಹಲವಾರು ರೋಗಿಗಳು ಸಾಲುಸಾಲಾಗಿ ನಿಂತು ತಪಾಸಣೆ ಮಾಡಿಸಿಕೊಂಡರು.

0 comments:
Post a Comment