PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಬೆಲೆ ಏರಿಕೆ ವಿರೋಧಿಸಿ ಎಡಪಕ್ಷಗಳು ನೀಡಿದ್ದ ಭಾರತ್ ಬಂದ್ ಕರೆಗೆ ಕೊಪ್ಪಳದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಎಲ್ಲ ಅಂಗಡಿಗಳು ವ್ಯಾಪಾರಿ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಬಂದ್ ಆಚರಿಸಿದರು. ಕೆಲವೆಡೆ ಬಂದ್ ಗೆ ಕರೆಕೊಟ್ಟ ಸಂಘಟನೆಯವರು ಜೋರು ಮಾಡಿದ್ದರಿಂದ ಅಂಗಡಿಗಳನ್ನು ಮುಚ್ಚಲಾಯಿತು. ಬಸ್ ಸಂಚಾರ್ ಸ್ಥಗಿತಗೊಂಡರೂ ಜನರ ಓಡಾಟ ಎಂದಿನಂತಿತ್ತು. ರಿಕ್ಷಾಗಳು ,ವಾಹನಗಳು ಸಂಚರಿಸುತ್ತಿದ್ದವು. ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಬೆಲೆಗಳನ್ನು ಇಳಿಸುವಂತೆ ಆಹ್ರಹಿಸಿದರು. ಬನ್ನಿಕಟ್ಟೆಯಿಂದ ಹೊರ ಮೆರವಣಿಗೆಯು ಅಶೋಕ ಸರ್ಕಲ್ ನಿಂದ ಗಡಿಯಾರ ಕಂಬದತನಕ ತೆರಳಿ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು. ಜಿಲ್ಲೆಯ ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾಗಳಲ್ಲಿಯೂ ಮಿಶ್ರಪ್ರತಿಕ್ರಿಯೆ ಕಂಡು ಬಂತು.

Advertisement

0 comments:

Post a Comment

 
Top