PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಎಡಪಂಥಿಯ ಹೋರಾಟದಲ್ಲಿ ನಿರಂತರ ತನ್ನನ್ನು ತೊಡಗಿಸಿಕೊಂಡು ಕೊಪ್ಪಳದಲ್ಲಿ ಡಿವೈ ಎಫ್ ಐ ಹುಟ್ಟುಹಾಕುವಲ್ಲಿ ಪ್ರಮುಖರಾದ ರಾಜು ಬಾಗಲಿ ಆಕಸ್ಮಿಕ ಹೃದಯಾಘಾತದಿಂದ ನಿಧನರಾದರು. ಅವರು 45 ವರ್ಷ ವಯಸ್ಸಾಗಿತ್ತು.

ರಾಜು ಬಾಗಲಿ ನಿಧನಕ್ಕೆ ಸಂತಾಪ ಸೂಚಕ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ವಿವಿಧ ಪ್ರಗತಿಪರ ಮತ್ತು ಎಡಪಂಥೀಯ ಸಂಘಟನೆಗಳ ಮುಖಂಡರು ಭಾಗವಹಿಸಿ ಬಾಗಲಿ ಬದುಕಿನ ಹೋರಾಟದ ಘಟನೆಗಲನ್ನು ನೆನಪಿಸಿಕೊಂಡು ಕಂಬನಿ ಮಿಡಿದರು. ಗಂಗಾವತಿಯ ಸಿಪಿಐ ಎಂ ಎಲ್ ಲಿಬರೇಷನ್ ಮುಖಂಡ ಜೆ.ಭಾರದ್ವಾಜ್ ಮಾತನಾಡಿ ತಾವು ಜೈಲಿನಲ್ಲಿದ್ದಾಗ ಬಂದು ಮಾತನಾಡಿಸಿ ಬೆಂಬಲಿಸಿ ನಿರಂತರ ಹೋರಾಟದ ಬದುಕಿಗೆ ಸ್ಪೂರ್ತಿಯಾಗಿದ್ದರು ಎಂದರು. ಸಿಪಿಐಎಂಎಲ್ ನ ಡಿ.ಎಚ್.ಪೂಜಾರ ,ರಾಜು ದೇಹದಿಂದ ದೂರವಾದರೂ ಅವರ ಹೋರಾಟದ ಪರಂಪರೆ ಆಚಾರ ವಿಚಾರಗಳು ನಮ್ಮೊಂದಿಗೆ ಯಾವತ್ತು ಇರುತ್ತವೆ. ಸಾವನ್ನು ನಾವು ಸೋಲೆಂದು ಸ್ವೀಕರಿಸದೆ ಮೆಟ್ಟಿಲಾಗಿ ಭಾವಿಸಬೇಕೆಂದರು.

ಹೇಮರಾಜ ವೀರಾಪೂರವರು ತಮಗೆ ವಿದ್ಯಾರ್ಥಿದೆಸೆಯಿಂದಲೇ ಸಹಕರಿಸುತ್ತಾ ಹೋರಾಟದ ಶಕ್ತಿಯನ್ನು ತುಂಬಿದರೆಂದು ನುಡಿದರು. ದಲಿತ ಮುಖಂಡ ಶಿವಣ್ಣ ಹಟ್ಟಿ ರಾಜುರವರು ರಾಜೀರಹಿತ ಹೋರಾಟ ಎಂತಹ ಬಡತನದ ಸಮಸ್ಯೆಗೂ ಹಿಂಜರಿದವರ್ಲ, ವೈ.ಬಿ.ಜೂಡಿ ರಾಜುರವರ ಹೋರಾಟವನ್ನು ಮತ್ತು ಬಡಜನತೆಗೆ ಸ್ಪಂದಿಸುವ ಸ್ವಭಾವವನ್ನು ನೆನೆದು ಕಂಬನಿಗೆರೆದರು. ಕೆ.ಬಿ.ಗೋನಾಲರು ಎಡಪಂಥಿಯ ಚಳುವಳಿಗೆ ಕಾರ್ಯಕರ್ತ ಬರುವುದೇ ಅಪರೂಪವಾದಾಗ ಅಂಥವರನ್ನೆಲ್ಲ ಸಂಘಟಿಸಿ ಹೋರಾಡಿದ ರಾಜು ಬಾಗಲಿ ಅಗಲುವಿಕೆ ಚಳುವಳಿಗೆ ಹಿನ್ನಡೆ ಎಂದರು. ಕೊಪ್ಪಳದಲ್ಲಿ ವಿಷ್ಣುವರ್ಧ ನಅಭಿಮಾನಿಗ ಳಸಂಘ, ಎವಾಯ್ ಎಫ ್ಐ, ಡಿವಾಯ್ ಎಫ ್ಐ, ಮಂಡಾ ಳಬಟ್ಟಿ ಕಾರ್ಮಿಕರ ಸಂಘ, ಬೇಲ್ದಾರ ಸಂಘ, ಕಟ್ಟಿಗೆ ಹಮಾಲರ ಸಂ, ಗಬೀದಿ ಬದಿಯ ವ್ಯಾಪಾರಸ್ಥ ರಸಂಘ ಮುಂತಾದ ಸಂಘಟನೆಗಳ ಜೊತೆ ಜೊತೆಯಾಗಿ ಹುಟ್ಟುಹಾಕುವುದರಲ್ಲಿ ಶ್ರಮಿಸಿದ ಕೆ.ವಾಸುದೇ ವತಮ್ಮ ಹೋರಾ ಟದಬದುಕನ್ನೆಲ್ಲ ನೆನಪಿಸಿಕೊಂಡು ರಾಜು ಅವ ರಪತ್ನಿ, ;ಮಕ್ಕಳಿಗೆ ನೆರವು ಕಲ್ಪಿಸಲು ವಿನಂತಿಸಿದರು. ಬಸವರಾಜ ಶೀಲವಂತರ, ಗಾಳೆಪ್ಪ ಮುಂಗೋಲಿ, ಮುಜಾವರ ಪಾಷಾ, ಶರಣಪ್ಪ ಕೊತಬಾಳ,ರವಿಕಾಂತನವರ, ಹುಸೇನಪಾಷಾ ಮುಂತಾದವರು ಪಾಲ್ಗೊಂಡು ಬಾಗಲಿಯವರ ಹೋರಾಟದ ಬದುಕನ್ನು ನೆನಪ ಿಸಿಕೊಂಡರು. ಸಭೆಯ ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ ವಹಿಸಿದ್ದರು. ಸುಂಕಪ್ಪ ಗದಗ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು. ಅನೇಕ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top