ಲಿಂ. ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ೭ನೇ ಪುಣ್ಯ ಸ್ಮರಣೋತ್ಸವ :ಸಾಲುಮರದ ತಿಮ್ಮಕ್ಕಗೆ ಸನ್ಮಾನ
ಕೊಪ್ಪಳ : ಬಡತನದ ಬೇಗೆ ಒಂದೆಡೆ ಮತ್ತೊಂದೆಡೆ ಮಕ್ಕಳಿಲ್ಲದ ನೋವು ಸಂಕಷ್ಟದ ನಡುವೆಯೂ ರಸ್ತೆಯ ಬದಿ ಸಹಸ್ರ ಸಸಿ ಬೆಳೆಸಿದ ತಿಮ್ಮಕ್ಕ 'ಸಾಲುಮರದ ತಿಮ್ಮಕ್ಕ' ಎಂದೇ ಖ್ಯಾತಿ ಪಡೆದಳು. ಪರಿಸರ ಕುರಿತ ತಿಮ್ಮಕ್ಕಳ ನಿಜವಾದ ಕಾಳಜಿ ಹಲವು ಗೌರವ ಪುರಸ್ಕಾರಗಳು ಹುಡುಕಿಕೊಂಡು ಬರುವಂತೆ ಮಾಡಿತು.
ನಾಡೋಜ ಗೌರವಕ್ಕೆ ಪಾತ್ರಾರಾದ ಸಾಲುಮರದ ತಿಮ್ಮಕ್ಕ ಪರಮಪೂಜ್ಯ ಶ್ರೀ ಮ.ನಿ.ಪ್ರ. ಜಗದ್ಗುರು ಲಿಂ. ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ೭ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಕೊಪ್ಪಳದ ಶ್ರೀ ಗವಿಮಠವು ಹಮ್ಮಿಕೊಂಡಿರುವ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸುತ್ತಿದ್ದಾರೆ.
ಶಾಲೆಯ ಅನೇಕ ವಿದ್ಯಾರ್ಥಿಗಳು ಪರಿಸರ ಬೆಳೆಸುವಲ್ಲಿ ರಾಜ್ಯದಿಂದ ಗುರುತಿಸಲ್ಪಟ್ಟ ಹಿರಿಯ ಚೇತನ ಸಾಲುಮರದ ತಿಮ್ಮಕ್ಕಳನ್ನು ಮನದಲ್ಲೆ ಆದರ್ಶವಾಗಿಟ್ಟುಕೊಂಡು ಆರಾಧಿಸುತ್ತಿದ್ದಾರೆ. ನೈಸರ್ಗಿಕ ವಿಕೋಪ ಹೆಚ್ಚಾಗುತ್ತಿರುವ ಈ ಸಂಧರ್ಭದಲ್ಲಿ ಸಾಲುಮರದ ತಿಮ್ಮಕ್ಕನಂತಹ ಪರಿಸರ ಪ್ರೇಮಿಗಳು ಗಿಡಮರ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ. ಸುಂದರಲಾಲ್ ಬಹುಗುಣರ ಮತ್ತೊಂದು ಚಿಪ್ಕೋ ಚಳುವಳಿಯು ಈ ದಿನಗಳಲ್ಲಿ ನಡೆದರೆ ಪ್ರಪಂಚದಲ್ಲಿ ಮುಂದಾಗುವ ವಿಕೋಪಗಳನ್ನು ತಡೆಗಟ್ಟಲು ಸಾಧ್ಯ.
ಈ ಎಲ್ಲಾ ಉದ್ದೇಶಗಳಿಂದ ಕೊಪ್ಪಳದ ಶ್ರೀ ಗಮಠವು ಮಾರ್ಚ ೯ ರಂದು ಬೆಳಿಗ್ಗೆ ೧೧:೦೦ಕ್ಕೆ ವನಮಹೋತ್ಸವ ಸಮಾರಂಭ ಆಯೋಜಿಸಿದೆ. ನಾಡೋಜ ಶ್ರೀಮತಿ ಸಾಲುಮರದ ತಿಮ್ಮಕ್ಕ ಚಾಲನೆ ನೀಡುವ ವನಮಹೋತ್ಸವದಲ್ಲಿ ಶಾಲಾ ಮಕ್ಕಳು ಪರಿಸರ ಪ್ರೀತಿ ಮೆರೆಯಲಿದ್ದಾರೆ. ಅಂದು ಸಂಜೆ ಈ ಹಿರಿಯ ಚೇತನವನ್ನು ಶ್ರೀಮಠವು ಗೌರವ ಸೂಚಕವಾಗಿ ಸನ್ಮಾನಿಸುತ್ತದೆ.
Home
»
»Unlabelled
» ಲಿಂ. ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ೭ನೇ ಪುಣ್ಯ ಸ್ಮರಣೋತ್ಸವ :ಸಾಲುಮರದ ತಿಮ್ಮಕ್ಕಗೆ ಸನ್ಮಾನ
Subscribe to:
Post Comments (Atom)
0 comments:
Post a Comment