ಕೊಪ್ಪಳ : ಎಸ್ಎಫ್ ಸಿ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳನ್ನು ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ದಿ ಯೋಜನೆಯಲ್ಲಿ ಟೆಂಡರ್ ಕರೆದ ವಿವಾದ ಈಗ ಮತ್ತೊಂದು ಹಂತ ತಲುಪಿದ್ದು ಸ್ವತಃ ನಗರಸಭೆ ಆಯುಕ್ತ ಹೆಚ್.ಬಿ.ಬೆಳ್ಳಿಕಟ್ಟಿ ಪುನರಾವರ್ತನೆಯಾದ ಕಾಮಗಾರಿಗಳನ್ನು ಕೈಬಿಟ್ಟಿರುವ ಬಗ್ಗೆ ಪೌರಾಡಳಿತದ ನಿರ್ದೇಶನಲಾಯದ ಆಯುಕ್ತರಿಗೆ ವಿವರವವಾಗಿ ಪತ್ರ ಬರೆದಿದ್ದಾರೆ.
ನಗರಸಭೆ ಅಧ್ಯಕ್ಷ ಚಂದ್ರು ಕವಲೂರು ಕಾಮಗಾರಿ ಹೆಸರಲ್ಲಿ ವ್ಯಾಪಕ ಹಣ ಲೂಟಿ ಮಾಡುತ್ತಿದ್ದಾರೆಂದು ಬಿಜೆಪಿ ಸದಸ್ಯರ ಆರೋಪ ಹಾಗೂ ಅವ್ಯವಹಾರ ಸಾಭೀತುಪಡಿಸಿಸುವಂತೆ ಕವಲೂರು ಹಾಕಿದ ಸವಾಲು ಅದಕ್ಕೆ ಬಹಿರಂಗ ಉತ್ತರಿಸಲು ಸಿದ್ದವಾದ ವೇದಿಕೆ ಕೊನೆ ಘಳಿಗೆಯಲ್ಲಿ ರದ್ಧಾದ ನಂತರ ಕಮೀಷನರ್ ಬೆಳ್ಳಿಕಟ್ಟಿ ಈ ಬಗ್ಗೆ ವಿವರ ನೀಡಿರುವುದು ಕುತೂಹಲಕಾರಿಯಾಗಿದೆ.
ಒಂದೆ ಕಾಮಗಾರಿ ಎರಡು ಯೋಜನೆಯಡಿ ಟೆಂಡರ್ ಕರೆದು 1 ಕೋಟಿ 98 ಲಕ್ಷ ಹಣ ದುರ್ಬಳಕೆ ಯಾಗುವುದನ್ನು ಪತ್ತೆ ಹಚ್ಚಿ ಒಟ್ಟು 15 ಕಾಮಗಾರಿಗಳನ್ನು ಕೈಬಿಟ್ಟಿದ್ದಾಗಿ ಅವರು ತಿಳಿಸಿದ್ದಾರೆ. ಅದೇ ರೀತಿ ಏಷಿಯನ್ ಡೆವಲಪಮ್ ಮೆಂಟ್ ಬ್ಯಾಂಕ್ ನ ಎನ್ ಕೆಯುಐಡಿಎಫ್ ಸಿ ಯೋಜನೆಯಡಿಯಲ್ಲಿ ಕೊಳಚೆ ಪ್ರದೇಶದ ಅಭಿವೃದ್ದಿ ಯ 1ಕೋಟಿ 20 ಲಕ್ಷ ವೆಚ್ಚದ 4 ಕಾಮಗಾರಿಗಳನ್ನು ಮುಖ್ಯಮಂತ್ರಿ ಅನುದಾನದಲ್ಲಿ ಟೆಂಡರ್ ಕರೆದದದ್ದನ್ನು ಪತ್ತೆ ಹಚ್ಚಿರುವ ಬೆಳ್ಳಿಕಟ್ಟಿ ಈ ಬಗ್ಗೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.ಈ ಮಲಕ 3 ಕೋಟಿ 18 ಲಕ್ಷ ಸರಕಾರಿ ಹಣ ಅವ್ಯವಹಾರವಾಗುವುದು ಪತ್ತೆಯಾಗಿದೆ.
ಸದರಿ ಕಾಮಗಾರಿಗಳಿಗೆ ಈ ಹಿಂದಿನ ಕಮೀಷನರ್ ಪಿ.ಎಸ್.ಅಣ್ಣಿಗೇರಿ ಎಂಬುವವರ ಅವಧಿಯಲ್ಲಿ ಟೆಂಡರ್ ಕರೆಯಲಾಗಿತ್ತು. 2009-10ನೇ ಸಾಲಿನ ಎಸ್ ಎಫ್ ಸಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಪುನಃ ಸಿಎಂ ಎಸ್ಎಂಟಿಡಿಪಿ ಯೋಜನೆಯಲ್ಲಿ ಸೇರಿಸಿದ್ದು ಗಮನಕ್ಕೆ ಬಂದ ಕೂಡಲೇ ಸದರಿ ಕಾಮಗಾರಿಗಳನ್ನು ಕೈವಿಡುವ ಬಗ್ಗೆ ನಗರಸಭೆ ಅಭಿಯಂತರರಿಗೆ ಸೂಚಿಸಲಾಗಿದೆ ಎಂದು ಬೆಳ್ಳಿಕಟ್ಟಿ ತಿಳಿಸಿದ್ದಾರೆ.
0 comments:
Post a Comment