PLEASE LOGIN TO KANNADANET.COM FOR REGULAR NEWS-UPDATES

ಭಾಗ್ಯನಗರ : ಜನರಲ್ಲಿ ಹೋರಾಟದ ಬೀಜ ಬಿತ್ತಿದ , ಅರಿವು ಮೂಡಿಸಿದ ನಾಟಕಗಳು ಈಗ ಬರುತ್ತಿಲ್ಲ. ರಂಗಭೂಮಿ ಉಳಿಸಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಲಿಂಗಣ್ಣ ಪಲ್ಲೇದ್ ಹೇಳಿದರು.

ಭಾಗ್ಯನಗರದಲ್ಲಿ ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ ಜಿಲ್ಲಾ ಘಟಕ, ಅಪ್ಪಳಿಸು ಪಾಕ್ಷಿಕ, ಬಾಗ್ಯನಗರ ವಿಶ್ವಭಾರತಿ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಭಾಗ್ಯನಗರದ ಸದಾನಂದಯೋಗಾಶ್ರಮದಲ್ಲಿ ಬುದವಾರ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಸ್.ವಿ.ಪಾಟೀಲ್ ಮಾತನಾಡಿದರು. ಹನುಮಂತಪ್ಪ ಅಂಡಗಿ, ಶಿವಾನಂದ ಹೊದ್ಲೂರ, ರಾಧಾ ಕುಲಕರ್ಣಿ, ನಿರ್ಮಲಾ ಬಳ್ಳೊಳ್ಳಿ, ಅಮರೇಶ್ ಪಲ್ಲೇದ್, ಗಿರೀಶ ಪಾನಘಂಟಿ, ವಿಠ್ಠಪ್ಪ ಗೋರಂಟ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


Advertisement

0 comments:

Post a Comment

 
Top