PLEASE LOGIN TO KANNADANET.COM FOR REGULAR NEWS-UPDATES

1-3-2010
ಕೊಪ್ಪಳ : ಗೋ ಹತ್ಯೆ ನಿಷೇದ ಕಾಯಿದೆ ಜಾರಿ ವಿರೋಧಿಸಿ ಪ್ರಗತಿಪರ ಸಂಘಟನೆಗಳು ಕೊಪ್ಪಳದಲ್ಲಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು. ಆಹಾರದ ಹಕ್ಕಿನ ಮೇಲೆ ಸರಕಾರದ ದಬ್ಬಾಳಿಕೆಯನ್ನು ದಿಕ್ಕರಿಸಿ ಪತ್ರಕರ್ತ,ಹೋರಾಟಗಾರ ಬಸವರಾಜ ಶೀಲವಂತರ, ಜ್ಞಾನಸುಂದರ,ಗಫಾರ್, ಹುಸೇನ್ ಪಾಷಾ ಸೇರಿದಂತೆ ಕೊಪ್ಪಳ ನಗರದ ವಿವಿದ ಪ್ರಗತಿಪರ ಸಂಘಟನೆಗಳವರು ಪ್ರತಿಭಟನೆಯಲ್ಲಿ ಜೊತೆಗೂಡಿದ್ದರು.
ಗಂಜ್ ಸರ್ಕಲ್ ನಿಂದ ಹೊರಟ ಮೆರವಣಿಗೆಯು ತಹಶೀಲ್ದಾರರ ಕಚೇರಿಗೆ ತೆರಳಿ ತಹಶೀಲ್ದಾರರಿಗೆ ಮನವಿ ಅರ್ಪಿಸಿತು.ಅವರ ಅನುಪಸ್ಥಿತಿಯಲ್ಲಿ ಶಿರಸ್ತೆದಾರರು ಮನವಿ ಸ್ವೀಕರಿಸದರು.

ಗೋಹತ್ಯೆ ನಿಷೇದ ಕಾನೂನು ಜಾರಿಗೆ ತರುವುದರ ಮೂಲಕ ದಲಿತರ,ಹಿಂದುಳಿದ ವರ್ಗದ ಮತ್ತು ಅಲ್ಪಸಂಖ್ಯಾತರ ಆಹಾರದ ಹಕ್ಕಿನ ಮೇಲೆ ಸವಾರಿ ಮಾಡಲು ಸರಕಾರ ಹೊರಟಿದೆ. ಇದನ್ನೆ ನೆಪವಾಗಿಟ್ಟುಕೊಂಡು ಅವರ ಮೇಲೆ ದಬ್ಬಾಳಿಕೆ ಮಾಡಲು ಕೋಮುವಾದಿ ಸಂಘಟನೆಗಳಿಗೆ ಸಹಾಯ ಮಾಡಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿ ಇದರ ವಿರುದ್ದ ರಾಜ್ಯಾದ್ಯಂತ ಹೋರಾಟ ಮಾಡಲಾ ಗುವುದು ಎಂದಿದ್ದಾರೆ.

Advertisement

0 comments:

Post a Comment

 
Top