PLEASE LOGIN TO KANNADANET.COM FOR REGULAR NEWS-UPDATES

ಶ್ರೀಗವಿಮಠದಲ್ಲಿ ಜರುಗಲಿರುವ ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ  ಅಂಗವಾಗಿ  ಇಂದು ರಂದು ಶನಿವಾರ ಬೆಳಿಗ್ಗೆ ೧೦ ಕ್ಕೆ ಶ್ರೀಗವಿಮಠದ ಆವರಣದಲ್ಲಿ ದಿ.ಶ್ರೀ ನೆಕ್ಕಂಟಿ ರಾಮರಾವ್ ಸಾ.ಗಂಗಾವತಿ ಇವರ ಸ್ಮರಣಾರ್ಥವಾಗಿ ನಿರ್ಮಿಸಿದ ನೂತನ ಮಹಾದಾಸೋಹ ಭವನ ಕಟ್ಟಡವು ಕಲಬುರ್ಗಿಯ ಶರಣಬಸವ ಸಂಸ್ಥಾನದ ಪೀಠಾಧಿಪತಿಗಳಾದ ಡಾ.ಶರಣಬಸಪ್ಪ ಅಪ್ಪ ಇವರು ರಿಬ್ಬನ್ ಕತ್ತರಿಸುವದರ ಮೂಲಕ ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದರು.ಕೊಪ್ಪಳಕ್ಕೆ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ಕಲಬುರ್ಗಿ ಶ್ರೀಶರಣಬಸವೇಶ್ವರರ ರೂಪದಲ್ಲಿ ಬಂದಿದ್ದಾರೆ. ಅಂತೆಯೇ ಇಲ್ಲಿ ಅನ್ನ,ಅಕ್ಷರ,ಅರಿವು ಹಾಗೂ ದಾಸೋಹ ಸೇವೆ ನಿರಂತರವಾಗಿ ಸಾಗುತ್ತಿದೆ. ಶ್ರೀಗಳ ಸಂಕಲ್ಪ ಶಕ್ತಿ ಅತ್ಯದ್ಬುತ. ಸಣ್ಣ ವಯಸ್ಸಿನಲ್ಲಿ ಅವರ ಸೇವೆ ಅಪಾರ.. ಇಂತಹ ಶ್ರೀಗಳನ್ನು ಪಡೆದ ಕೊಪ್ಪಳದವರು ಧನ್ಯರೆಂದರು.ಶ್ರೀ ಷ.ಬ್ರ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಹೆಬ್ಬಾಳ, ಶ್ರೀ ಹಿರಿಶಾಂತವೀರ ಸ್ವಾಮಿಗಳು ಹೂವಿನ ಹಡಗಲಿ , ಚನ್ನಮಲ್ಲದೇವರು ಕುಕುನೂರು , ದಿ.ಶ್ರೀ ನೆಕ್ಕಂಟಿ ರಾಮರಾವ್ ಸಾ.ಗಂಗಾವತಿ ಇವರ ಕುಟುಂಬ ವರ್ಗ, ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲುಖಾದರ ಖಾದ್ರಿ, ಶಾಂತಣ್ಣ ಮುದಗಲ್, ಮಲ್ಲಿಕಾರ್ಜುನ ಬಳ್ಳೊಳ್ಳಿ, ಎಸ್.ಮಲ್ಲಿಕಾರ್ಜುನ,ಪ್ರಭು ಹೆಬ್ಬಾಳ, ಸಂಜಯ ಕೊತಬಾಳ, ಬಸವರಾಜ ಪುರದ,ಬಸವರಾಜ ಗೌರಾ, ರಾಜು ಶೆಟ್ಟರ್ ಮೊದಲಾದವರು ಭಾಗವಹಿಸಿದ್ದರು. ಗವಿಸಿದ್ದಪ್ಪ ಕೊಪ್ಪಳ ನಿರೂಪಿಸಿದರು.

Advertisement

0 comments:

Post a Comment

 
Top