PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ -19- ಎನ್‌ಎಸ್‌ಎಸ್ ಶಿಬಿರದಿಂದ ಪ್ರತಿಯೊಬ್ಬ ಶಿಬಿರಾರ್ಥಿ  ಜೀವನದಲ್ಲಿ ಯಾವ ರೀತಿ ಬದಕುಬೇಕು ಎಂಬವದನ್ನು ನಾವು ಕಲಿಯುತ್ತೇವೆ ಆದ್ದರಿಂದ ನಾವು ಯಾವದೇ ವೃತ್ತಿಯನ್ನು ಮಾಡಲಿ ಅದನ್ನು ನಾವು ಪ್ರಿತೀಸಬೇಕು ಮತ್ತು ನಾವು ಯಾವುದೇ ರಂಗದಲ್ಲಿ ಇದ್ದರು ಅದನ್ನು ನಾವು ಯಾವತ್ತು ಕಲಿಯುವದನ್ನು ನಿಲ್ಲಿಸಬಾರದು ಎಂದು ಎಸ್,ಜಿ,ಕಾಲೇಜಿನ ಉಪನ್ಯಾಸಕರು ಮತ್ತು ಎನ್‌ಎಸ್ ಎಸ್ ಅಧಿಕಾರಿಯಾದ ಶರಣಬಸಪ್ಪ ಬಿಳೆಎಲೆ ಮಾತನಾಡಿದರು.
ಅವರು ಸಮೀಪದ ವದಗನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ೨೦೧೫-೧೬ ನೇ ಸಾಲಿನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಭಾಗವಹಿಸಿ ಮಾತನಾಡಿದ ಅವರು ರಾಷ್ಟ್ರೀಯ ಸೇವಾ ಯೋಜನೆಯಿಂದ ಪ್ರತಿಯೊಂದು ಗ್ರಾಮವು ಪ್ರಗತಿಯತ್ತ ಸಾಗಲು ಅದು ಸಹಾಯ ಮಾಡುತ್ತದೆ,ಜನರು ಇಂತಹ ಶಿಬಿರಗಳಿಂದ ಆಗುವ ಪ್ರಯೋಜನೆಯನ್ನು ಉಪಯೋಗಿಸಿಕೊಂಡು ಗಾಂಧಿಜಿ ಕನಸ್ಸಿನಂತೆ ಗ್ರಾಮಗಳನ್ನು ಅಭಿವೃದ್ದಿ ಮಾಡಲು ಕೈಜೋಡಿಸಬೇಕು ಎಂದರು.

Advertisement

0 comments:

Post a Comment

 
Top