ಕೊಪ್ಪಳ ನಗರದಲ್ಲಿ 'ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು' ಎಂದು ಹಾಡುತ್ತ, ತಮ್ಮಟೆಯನ್ನು ಬಾರಿಸುತ್ತ
ಓಣಿ ತುಂಬ ಓಡಾಡಿ, ಜನರಿಂದ ವಂತಿಗೆ ವಸೂಲಿ ಮಾಡಿ, ಕೈಗೆ ಸಿಕ್ಕ ಕಟ್ಟಿಗೆ ಕುಳ್ಳನ್ನು
ಪೇರಿಸಿ, ಒಂದು ಪುರಾಣ ಕಥೆಯ ಪ್ರಕಾರ ಹಿರಣ್ಯಕಶಿಪುವಿನ ತಂಗಿ 'ಹೋಲಿಕಾ'ನ
ಪ್ರತಿಕೃತಿಯನ್ನು ಅಥವಾ ಕಾಮನ ಪ್ರತಿಕೃತಿಯನ್ನು ದಹಿಸಿ, ನಂತರ ಇಡೀದಿನ ಓಕುಳಿ ಆಡುವ
ಸಂಪ್ರದಾಯ ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿದೆ. ಶಿಶಿರ ಋತು, ಫಾಲ್ಗುಣ ಮಾಸದ ಹುಣ್ಣಿಮೆಯಂದು ಕಾಮನಹಬ್ಬವನ್ನು ದೇಶ ಮತ್ತು ವಿದೇಶಗಳಲ್ಲಿ ಆಚರಿಸಲಾಗುತ್ತದೆ.
Subscribe to:
Post Comments (Atom)
0 comments:
Post a Comment