ಕೊಪ್ಪಳ, ಫೆ.೦೩ ಶೈಕ್ಷಣಿಕ ಅಭಿವೃದ್ಧಿಯಿಂದ ಮಾತ್ರ ರಾಷ್ಟ್ರೀಯ ಉನ್ನತಿ ಹಾಗೂ ಪ್ರಗತಿ ಸಾಧ್ಯವೆಂದು ಕಲಬುರ್ಗಿ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಮಾಜಿ ಸದಸ್ಯೆ ಇಂದಿರಾ ಬಾವಿಕಟ್ಟಿ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಸಂಜೆ ಸಮೀಪದ ಭಾಗ್ಯನಗರದ ಜ್ಞಾನಭಾರತಿ ಶಾಲೆಯ ಶಾಲಾವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಆತಿಥ್ಯವಹಿಸಿ ಮಾತನಾಡಿ, ವಿದ್ಯೆ ಯಾರು ಖದಿಯದ ಸಂಪತ್ತು. ಆದ್ದರಿಂದಲ್ಲೇ ಅದಕ್ಕೆ ಅಪಾರ ಬೆಲೆ ಇದೆ ಅಷ್ಟೇ ಗೌರವವಿದೆ ಅದಕ್ಕಾಗಿ ಪಾಲಕರು ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿಸಿ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಮಾಜದ ರಾಷ್ಟ್ರದ ಸಂಪತ್ತಭರಿತ ಆಸ್ತಿಯನ್ನಾಗಿಸಿ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ನಂತರ ಸನ್ಮಾನ ಸ್ವೀಕರಿಸಿದ ರಾಜ್ಯ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಹೆಚ್.ಎಸ್. ಪಾಟೀಲ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇ ಆದ ಪ್ರತಿಭೆ ಹೊಂದಿರುತ್ತಾನೆ. ಅವನು ಅದನ್ನು ಸೂಕ್ತ ಸಮಯದಲ್ಲಿ ಸಾದರ ಪಡಿಸುವ ಮೂಲಕ ಅದಕ್ಕೆ ತಕ್ಕ ಗೌರವ ಪುರಸ್ಕಾರಗಳನ್ನು ಪಡೆದು ಸಮಾಜದಲ್ಲಿ ಕೀರ್ತಿವಂತನಾಗಬೇಕು. ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಂದು ನಿರಾಸೆಗೊಳ್ಳದೆ ತಮ್ಮ ಪ್ರತಿಭೆಗೆ ಪೂರಕವಾದ ಸಾಧನೆಯನ್ನು ನಿರಂತರಗೊಳಿಸಿ ಶ್ರಮವಹಿಸಿ ಶ್ರದ್ಧೆಯಿಂದ ಗುರಿಸಾಧಿಸಬೇಕೆಂದರು. ಹೊಸತನದ ಯೋಚನೆ, ಯೋಜನೆಗಳನ್ನು ಶಿಕ್ಷಕರು ಪಠ್ಯೇತರವಾಗಿ ಮಕ್ಕಳಲ್ಲಿ ತುಂಬುತ್ತಿರಬೇಕು. ಅವರಲ್ಲಿನ ಪ್ರತಿಭೆ ಗುರುತಿಸಿ ಅದಕ್ಕೆ ಪೂರಕ ವೇದಿಕೆ ವಾತಾವರಣ ಸೃಷ್ಠಿಸಿ ಪ್ರೋತ್ಸಾಹಿಸುವುದು ಪ್ರತಿ ಶಿಕ್ಷಕರ ಹಾಗೂ ಪಾಲಕರ ಆದ್ಯ ಕರ್ತವ್ಯವೆಂದು ತಿಳಿಸಿದರು.
ನಂತರ ಕೊಪ್ಪಳ ಗವಿಸಿದ್ಧೇಶ್ವರ ಕಾಲೇಜಿನ ಸ್ನಾತ್ತಕೋತ್ತರ ವಿಭಾಗದ ಉಪನ್ಯಾಸಕರಾದ ವಿ.ವಿ. ಬಂಡಿ ಶಿಕ್ಷಣದ ಮಹತ್ವ ಕುರಿತು ಉಪನ್ಯಾಸ ನೀಡುತ್ತಾ, ಪ್ರಾಥಮಿಕ ಶಿಕ್ಷಣವೇ ಪ್ರತಿಯೊಬ್ಬರ ಭದ್ರಬುನಾದಿಯಾಗಿದ್ದು ಈಗಿನಿಂದಲೇ ಮಕ್ಕಳಿಗೆ ಉನ್ನತ ಹಾಗೂ ಉತ್ತಮ ಶಿಕ್ಷಣ ಕೊಡಿಸಿ ಭದ್ರಬುನಾದಿಯನ್ನು ಹಾಕಿರಿ. ವಿದ್ಯೆ ಯಾರ ಸ್ವತ್ತಲ್ಲ ಅದನ್ನು ಅರಿತವನೇ ಬಲ್ಲ. ಅದುವೇ ಪ್ರತಿಯೊಬ್ಬರ ಮುಂದಿನ ಭವಿಷ್ಯ ರೂಪಿಸಬಲ್ಲದು ಅದೇ ರೀತಿ ಭವಿಷ್ಯ ರೂಪಿಸಿಕೊಳ್ಳವ ಶಕ್ತಿಯೂ ಅದು ಹೊಂದಿದೆ ಎಂದು ಹೇಳಿದರು. ಪ್ರಗತಿಪರ ರೈತ ವೆಂಕನಗೌಡ್ರ ವರತಟ್ನಾಳ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಭೋಗಪ್ಪ ನೇಮಣ್ಣ ಡಾಣಿ, ಸಿಆರ್‌ಸಿ ವೀರಭದ್ರಯ್ಯ ಹಿರೇಮಠ, ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಡೊಣ್ಣಿ, ಮುಖ್ಯೋಪಾಧ್ಯಾಯರಾದ ಕವಿತಾ ಸುರೇಶ ಡೊಣ್ಣಿ ಶಿಕ್ಷಕ ಪರಶುರಾಮ ಉಂಕಿ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿಗಳಾದ ರೀತು, ದರ್ಶನ, ವಿನೋದ, ಸಂಜನಾ ವಿವಿಧ ವೇಷಭೂಷಣಗಳಿಂದ ವೇದಿಕೆಯಲ್ಲಿ ಗಮನ ಸೆಳೆದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆ ಹಾಗೂ ಮನೋರಂಜನೆ ಕಾರ್ಯಕ್ರಮಗಳು ನೇರವೇರಿದವು. ಪಾರ್ವತಿ ಸ್ವಾಗತಿಸಿದರೆ, ಸುವರ್ಣ ವರದಿ ವಚನ ಮಾಡಿ ಕೊನೆಯಲ್ಲಿ ನೇತ್ರಾವತಿ ವಂದಿಸಿದರು.
॒॒॒

0 comments:
Post a Comment