ಕೊಪ್ಪಳ ಫೆ. ೦೨ (ಕ ವಾ) ಈಕರಸಾ ಸಂಸ್ಥೆ
ಕೊಪ್ಪಳ ವಿಭಾಗ ಗಂಗಾವತಿ ಘಟಕಕ್ಕೆ ಸಂಬಂಧಿಸಿದ ಸಾರಿಗೆ ಬಸ್ ಅಪಘಾತ ಪ್ರಕರಣಕ್ಕೆ
ಸಂಬಂಧಿಸಿದಂತೆ ೪. ೭೦ ಲಕ್ಷ ರೂ. ಗಳ ಪರಿಹಾರ ಚೆಕ್ ಅನ್ನು ಕೊಪ್ಪಳ ವಿಭಾಗೀಯ
ನಿಯಂತ್ರಣಾಧಿಕಾರಿ ಜೆ. ಮಹಮ್ಮದ್ ಫಯಾಜ್ ಅವರು ಮೃತರ ಅವಲಂಬಿತರಿಗೆ ವಿತರಿಸಿದರು.
ಗಂಗಾವತಿ ಘಟಕದ ಕಾರಟಗಿ-ಬೆಂಗಳೂರು ಮಾರ್ಗದ ಬಸ್ ನೆಲಮಂಗಲ ಬಳಿ ಕಳೆದ ಐದು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಾಗನಕಲ್ ಗ್ರಾಮದ ಶರಣಪ್ಪ ಸಂಕದಾಳ ಹಾಗೂ ಆತನ ಪತ್ನಿ ಶಾಂತಮ್ಮ ಸಂಕದಾಳ ದಂಪತಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಪಘಾತ ಪರಿಹಾರ ನಿಧಿಯಿಂದ ೪. ೭೦ ಲಕ್ಷ ರೂ. ಗಳ ಚೆಕ್ ಅನ್ನು ಮೃತರ ಅವಲಂಬಿತರಾದ ಶರಣಪ್ಪ ಸಂಕದಾಳ ಅವರ ತಂದೆ ದುರಗಪ್ಪ ಸಂಕದಾಳ ಅವರಿಗೆ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಜೆ. ಮಹಮ್ಮದ್ ಫಯಾಜ್ ಅವರು ವಿತರಿಸಿದರು. ವಿಭಾಗೀಯ ಸಂಚಾರ ಅಧಿಕಾರಿ ದೇವಾನಂದ ಬಿರಾದಾರ, ಕಾರ್ಮಿಕ ಕಲ್ಯಾಣಾಧಿಕಾರಿ ಕರೇಗೌಡ, ಸಹಾಯಕ ಲೆಕ್ಕಾಧಿಕಾರಿ ಚಿತ್ತವಾಡೆಗೆಪ್ಪ, ಸಹಾಯಕ ಸಂಚಾರ ವ್ಯವಸ್ಥಾಪಕಿ ಪುಷ್ಪಲತಾ ಕೋರಿಶೆಟ್ಟರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

0 comments:
Post a Comment