PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಫೆ. ೧೯ (ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕು ದೋಟಿಹಾಳ-ಮುದೆನೂರ ರಸ್ತೆಯಲ್ಲಿ ಬರುವ ಮೇಗೂರು ಗ್ರಾಮದ ಬಳಿಯ ಹೊಲದಲ್ಲಿ ವಿತರಣೆಗಾಗಿ ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಸುಮಾರು ೧೨. ೨೫ ಲೀ. ಮದ್ಯವನ್ನು ಚುನಾವಣಾ ಎಂಸಿಸಿ ತಂಡ ವಶಪಡಿಸಿ, ಅಬಕಾರಿ ಇಲಾಖೆ ವಶಕ್ಕೆ ಒಪ್ಪಿಸಿದ ಘಟನೆ ಶುಕ್ರವಾರದಂದು ನಡೆದಿದೆ.
      ದೋಟಿಹಾಳ-ಮುದೆನೂರ ರಸ್ತೆಯಲ್ಲಿ ಬರುವ ಮೇಗೂರು ಗ್ರಾಮದ ಬಳಿಯ ಹೊಲದಲ್ಲಿ ಮದ್ಯದ ಬಾಟಲಿಯ ಬಾಕ್ಸ್‌ಗಳನ್ನು ಅನಧಿಕೃತವಾಗಿ ದಾಸ್ತಾನು ಇರಿಸಿಕೊಂಡು, ವ್ಯಕ್ತಿಗಳಿಗೆ ವಿತರಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಅವರ ನೇತೃತ್ವದ ಕುಷ್ಟಗಿ ತಾಲೂಕು ಎಂಸಿಸಿ ತಂಡ, ಸ್ಥಳಕ್ಕೆ ಭೇಟಿ ನೀಡಿ, ೧೨. ೨೫ ಲೀ. ಮದ್ಯವನ್ನು ವಶಪಡಿಸಿಕೊಂಡಿದ್ದು, ಎಂಸಿಸಿ ತಂಡ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ, ಆರೋಪಿ ಪರಾರಿಯಾಗಿದ್ದಾನೆ.  ವಶಪಡಿಸಿಕೊಂಡ ಮದ್ಯವನ್ನು ಅಬಕಾರಿ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ.  ಎಂಸಿಸಿ ತಂಡದ ಸೆಕ್ಟರ್ ಅಧಿಕಾರಿ ರಾಘವೇಂದ್ರ, ಅಬಕಾರಿ ನಿರೀಕ್ಷಕ ಗುರುಪಾದಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಬಿ. ಕಲ್ಲೇಶ್ ತಿಳಿಸಿದ್ದಾರೆ.

Advertisement

0 comments:

Post a Comment

 
Top