PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-11- ಸ್ಥಳಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಸ್ವರ ಮಾಹಾಯಾಗ ಸಂಗೀತ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಡಾ|| ಕೆ.ಜಿ ಕುಲಕರ್ಣಿಯವರು ಸಂಗಿತವು ಮನುಷ್ಯನ ಆಯುರಾರೊಗೆವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸಂಗಿತದಿಂದ ಮಾನಸಿಕ ನೆಮ್ಮದಿ ಆತ್ಮತೃಪ್ತಿಯ ದೊರಕಬಲ್ಲದು. ಈ ನಿಟ್ಟಿನಲ್ಲಿ ಸ್ವರ ಮಹಾಯಾಗ ಸಂಗಿತ ಸಂಸ್ಥೆಯು ಕೊಪ್ಪಳದಲ್ಲಿ ಪ್ರಾರಂಭವಾಗುತ್ತಿದ್ದು ಜಿಲ್ಲೆಯ ಸಂಗೀತ ಪ್ರೀಯರಿಎ ಅತ್ಯಂತ ಹೆಮ್ಮೆಯ ಸಂಗತಿ. ಸ್ವರ ಸಂಗೀತ  ಸಂಸ್ಥೆಯು ಜಿಲ್ಲೆಯಲ್ಲಿ ಅತ್ಯುತಮವಾಗಿ ಕಾರ್ಯನಿರ್ವಹಿಸಲಿ, ಪಂ. ಪ್ರಸನ್ನಗುಡಿಯವರ ಪ್ರಯತ್ನವು ಯಶಸ್ವಿಯಾಗಲೆಂದು ಶುಭಹಾರೈಸಿದರು.
    ಶ್ರೀ ರಾಘವೇಂದ್ರ ಮಠದ ಆರ್ಚಕರಾದ. ಶ್ರೀ ರಘುಪ್ರಮಚಾರ್ಯ ಮುಳಗುಂದ ಅವರು ಮಾತನಾಡಿ, ಭಾರತದೇಶದ ಸಂಗಿತಕ್ಕೆ ಪ್ರಪಂಚದಲ್ಲೇಡೆ ಬಹುಬೇಡಿಕೆ ಇದೆ. ಸಂಗಿತವನ್ನು ಕೇಳುವುದರಿಂದ ಮನುಷ್ಯನಲ್ಲಿರುವ ರೊಗಧಿಗಳು ಕಡಿಮೆಯಾಗಿ ಮನುಷ್ಯನಲ್ಲಿ ನವಚೈತನ್ಯವನ್ನು ತಂದುಕೊಡುವ ಶಕ್ತಿ ಇದೆ. ಪಶು, ಪಕ್ಷಿ, ಹಾವುಗಳು, ಗಿಡ ಮರಗಳು, ಸಂಗೀತವೆಂದರೆ ಇಷ್ಟಪಡುತ್ತವೆ. ಸಂಗೀತವನ್ನು ಮನುಷ್ಯರು ಹೆಚ್ಚು ಹೆಚ್ಚು ಕೇಳುವುದರಿಂದ ಅವರನ್ನು ಹೆಚ್ಚು ಉತ್ಸಾಹಿಗಳನ್ನಾಗಿ  ರೂಪಗೊಳಿಸುವ ಶಕ್ತಿ ಸಂಗೀತದಲ್ಲಿದೆ. ಪ್ರತಿಯೊಬ್ಬರು ಸಂಗೀತದ ಕಡೆ ಆಸಕ್ತಿವಹಿಸಲೆಂದು ಕರೆ ನೀಡಿದರು.
    ಪತ್ರಕರ್ತ ಜಿ.ಎಸ್. ಗೋನಾಳವರು ಮಾತನಾಡಿ ಪಂಡಿತ ಪ್ರಸನ್ನಗುಡಿಯವರು ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶದಲ್ಲಿ ಸಂಗೀತ ಸೇವೆಯನ್ನು ಪ್ರತಿಯೊಬ್ಬರಿಗೆ ತಲುಪಿಸಲೆಂದು ಸ್ವರ ಮಹಾ ಯಾಗ ಸಂಸ್ಥೆಯನ್ನು ರಾಜ್ಯ ಮಟ್ಟದಲ್ಲಿ ಸ್ಥಾಪಿಸಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸಂಘಟಿಸಿ ತಾಲೂಕ ಕೇಂದ್ರಗಳಲ್ಲಿ ಹುಟ್ಟು ಹಾಕಿ ಇವುಗಳ ಮೂಲಕ ೨೦೧೬ ರಲ್ಲಿ ಡಿಸೆಂಬರಬನಲ್ಲಿ ೪೮ ಗಂಟೆಗಳ ಕಾಲ ಸಂಗೀತ ಹಾಡಿ ವಿಶ್ವದಾಖಲೆ ಮಾಡುವಲ್ಲಿ ದಾಪುಗಾಲು ಇಡುತ್ತಿರುವುದು ಈಡಿ ಕರ್ನಾಟಕ, ಭಾರತ ದೇಶವೇ ಹೆಮ್ಮೆ ಪಡುವ ವಿಷಯವಾಗಿದೆ.
    ಈ ನಿಟ್ಟಿನಲ್ಲಿ ಅವರು ಹೆಜ್ಜೆ ಇಟ್ಟಿರುವುದು ಸಂಗಿತ ಲೋಕವೇ ಅವರ ಕಾರ್ಯಕ್ರಮವನ್ನು ವೀಕ್ಷಿಸಲು ಬೆಂಗಳೂರಿಗೆ ಹೋಗಿ ಅವರಿಗೆ ಹಾರೈಸಬೇಕಾಗಿದೆ ಇಂತಹ ಪ್ರಸನ್ನ ಗುಡಿ ಅವರು ಕೊಪ್ಪಳದಲ್ಲಿ ಸಂಗೀತ ಪಾಠಶಾಲೆ, ಕಾಲೇಜು, ಯುನಿವರ್ಷಿಟಿ ತೆರೆಯುವ ಪ್ರಯತ್ನ ಮಾಡಲಿ, ಅವರ ಆಸೆ ಆಕಾಂಕ್ಷೆ ಯಶಸ್ವಿಯಾಗಲಿ ಎಂದು ಕೊಪ್ಪಳ ಜಿಲ್ಲೆಯಲ್ಲಿ ಸಂಗೀತ ಸಾರ್ಮ್ರಾಜ್ಯವನ್ನು ಸ್ಥಾಪಿಸಲೆಂದು ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆವಹಸಿದ್ದ  ಎನ್.ಆರ. ಕುಕನೂರ ಮಾತನಾಡಿ, ಪಂ. ಪ್ರಸನ್ನ ಗುಡಿ ಕೊಪ್ಪಳ ಜಿಲ್ಲೆಗೆ ಬಂದು ಸ್ವರ ಮಹಾಯಾಗ ಟ್ರಷ್ಟನ್ನು ಕಟ್ಟಿ ಬೆಳೆಸುವ ಅವರ ಯತ್ನ ಪ್ರಯತ್ನಕ್ಕೆ ನಾವೆಲ್ಲ ತನು ಮನ ಧನ ದಿಂದ ಅವರಿಗೆ ಪ್ರೋತ್ಸಾಹಿಸೋಣ ಅವರಿಂದ ನಮ್ಮ ಜಿಲ್ಲೆಯಲ್ಲಿ ಸಂಗೀತ ಪರಂಪರೆಯು ಹೆಚ್ಚು ಸಂಬೃಂದ್ದಿಯಾಗಿ ಕಟ್ಟಿ ಬೆಳೆಸುತ್ತಾ ನಮ್ಮ ಭಾಗದ ಮಹಿಳೆ ಮಕ್ಕಳು, ಯುವಕರಿಗೆ ಸಂಗೀತ ಪಾಠ ಶಾಲೆಯಾಗಲೆಂದು ಕರೆ ನೀಡಿದರು.
    ವೇದಿಕೆ ಮೇಲೆ ಕನ್ನಡ ಮತ್ತು ಸಂಸ್ಕೃತ ಇಲಾಖೇಯ ರಾಜೇಂದ್ರ ಬಾಬು ಉಪಸ್ಥಿತರಿದ್ದರು.
ಬೀಮಸೇನ ಜ್ಯೋಶಿ ಇಂದರಗಿ ಕಾರ್ಯಕ್ರಮ ನಿರೂಪಿಸಿದರು, ವಾದಿರಾಜ ಪಾಟಿಲ ವಂದಿಸಿದರು. ಸಭೆಯಲ್ಲಿ ಪಂ. ಪ್ರಸನ್ನ ಗುಡಿ ಸಂವಾದದದ ಮುಖಾಂತರ ಸಂಗೀತ ಸಂಸ್ಥೆ ಬೆಳೆಸಲು ಹವಾರು ಸಲಹೆ ಸೂಚನೆಯ ಚರ್ಚೆಗಳು ಜರುಗಿದವು.

Advertisement

0 comments:

Post a Comment

 
Top