PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-26- ಸಂವಿಧಾನದಲ್ಲಿರುವ ಹಕ್ಕುಗಳನ್ನು ನಾವು ಹೇಗೆ ಪಡೆದುಕೊಳ್ಳತ್ತೇವೆ ಮತ್ತು ನಮ್ಮ ಹಕ್ಕುಗಳಿಗಾಗಿ ಹೇಗೆ ಹೋರಾಟ ಮಾಡಿ ಪಡೆಯುತ್ತೇವೆ ಅದೇ ರೀತಿ ನಾವು ದೇಶ ಪ್ರೇಮದ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು ನಮ್ಮ ಕರ್ತವ್ಯವನ್ನು  ಮಾಡಬೇಕಾಗಿರುವದು ನಮ್ಮ ಕರ್ತವ್ಯ ವಾಗಿದೆ ಎಂದು ಡಾ: ಕೆ.ಬಿ.ಬ್ಯಾಳಿ ಹೇಳಿದರು ಅವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯ ಹಾಗೂ ಹಿಂದಿ ಬಿ.ಎಡ್ ಕಾಲೇಜ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೇರವೆರಿಸಿ ಮಾತನಾಡಿದ ಅವರು ವಿಶ್ವದಲ್ಲಿಯೇ ಅತ್ಯಂತ ಶಕ್ತಿ ಶಾಲಿಯಾದ ಸಂವಿಧಾನವನ್ನು ಡಾ:ಬಿ.ಆರ್.ಅಂಬೇಡ್ಕರವರು ನಮಗೆ ಬರೆದು ನೀಡಿರುವ ಪರಿಣಾಮವಾಗಿ ನಾವು ಇಂದು ಸ್ವತಂತ್ರವಾಗಿ ಬದಕುತಿದ್ದೇವೆ ಅಂತಹ ಮಹಾ ಪುರಷರ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ನಂತರ ಮಾತನಾಡಿ ಹಿಂದಿ ಬಿ.ಎಡ್ ಕಾಲೇಜಿನ ಪ್ರಚಾರ್ಯರರು ಎ.ಎಚ್.ಬಳ್ಳಾರಿ ಮಾತನಾಡಿ  ಜನರಿಂದ ಜನರಿಗಾಗಿ ಜನರಿಗೊಸ್ಕರ ಎಂಬ ಅಬ್ರ್ಮಾಂಲಿಂಕನ್ ರವರು ಹೇಳಿದ ಮಾತು ಇಂದಿನ ದಿನಮಾನಗಳಲ್ಲಿ ವಿರುದ್ಧವಾಗಿ ಸಾಗಿದೆ ಇಂದು ನಮ್ಮನ್ನು ಆಳುವ ನಾಯಕರು ಹಣದ ಮೂಲಕ ಎಲ್ಲರನ್ನು ಕೊಂಡುಕೊಳ್ಳುತ್ತಿರುವದರಿಂದ ರಾಜಕೀಯ ರಂಗಕ್ಕೆ ಯುವ ಜನತೆ ಬರುವದಕ್ಕೆ ಹಿಂದೇಟು ಹಾಕುತಿದ್ದಾರೆ ಆದ್ದರಿಂದ ನಮ್ಮ ಸಂವಿಧಾನವನ್ನು ಗೌರವಿಸುವ ಪ್ರತಿಯೊಬ್ಬರು ಪ್ರಮಾಣಿಕತೆಯಿಂದ ನಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ: ಬಿ.ಎಸ್.ಹನಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮುಖ್ಯಾಧಿಕಾರಿಯಾದ ಬಸವರಾಜ.ಎಸ್.ಎಂ, ಮತ್ತು ಉಪನ್ಯಾಸಕಿಯರಾದ ಉಷಾದೇವಿ ಹಿರೇಮಠ, ಗೀತಾ ಕುಂಬಾರ,ಅಕೀಲಾ ಗಂಗಾವತಿ,ದೆವೇಂದ್ರಪ್ಪ ಸೇರಿದಂತೆ ಸಿಬ್ಬಂದಿ ವರ್ಗ ಮತ್ತು ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನೀಯರು ಉಪಸ್ಥಿತರಿದ್ದರು.                     

Advertisement

0 comments:

Post a Comment

 
Top