PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ 2016 ಜ.26 ರಂದು ಗವಿಸಿದ್ಧೇಶ್ವರ ಮಹಾರಥೋತ್ಸವ, ಇಲ್ಲಿನ ಇತಿಹಾಸ ಪ್ರಸಿದ್ಧ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ದೇಶ ಗಡಿ ದಾಟಿ ಎಲ್ಲರನ್ನು ಆಕರ್ಷಿಸಿರುವುದಷ್ಟೇ ಅಲ್ಲದೆ, ಇಂಟರ್ನೆಟ್ ನಲ್ಲೂ ಸದ್ದು ಮಾಡುತ್ತಿದೆ. ಗವಿಮಠದ ಪರಂಪರೆಯಲ್ಲಿ ಜ.ಗವಿಸಿದ್ಧೇಶ್ವರರು ಗುರು ಪರಂಪರೆ ಯಲ್ಲಿ ಹನ್ನೊಂದನೆಯವರು, ಪರಮ ಪೂಜ್ಯ ಸ್ವಾಮೀಜಿಗಳು 1816ರ ಶ್ರೀಮುಖ ಸಂವತ್ಸರದ ಶುದ್ಧ ಬಿದಿಗೆಯಂದು ಪ್ರಾಣವನ್ನು ಬ್ರಹ್ಮಸ್ಥಾನಕ್ಕೇರಿಸಿ ಸಜೀವ ಸಮಾಧಿಯಾದರು. ಅಂದಿನಿಂದ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಅಮೋಘವರ್ಷ ನೃಪತುಂಗನು ಕೊಪ್ಪಳ ನಗರವನ್ನು 'ವಿದಿತ ಮಹಾ ಕೋಪಣ ನಗರ' ಎಂದು ಬಣ್ಣಿಸಿದ್ದಾನೆ. ಕೊಪ್ಪಳ ಜಿಲ್ಲೆ ೧-೪-೧೯೯೮ ರಂದು ಆರಂಭವಾದ ಕರ್ನಾಟಕ ರಾಜ್ಯದ ಹೊಸ ಜಿಲ್ಲೆಗಳಲ್ಲಿ ಒಂದಾಗಿದೆ.  ಗಂಗಾವತಿ, ಕೊಪ್ಪಳ,ಯಲಬುರ್ಗಾ ಮತ್ತು ಕುಷ್ಟಗಿ ಈ ಜಿಲ್ಲೆಯಲ್ಲಿರುವ ತಾಲೂಕುಗಳು. ಐತಿಹಾಸಿಕವಾಗಿ, ಸಾಂಸ್ಕ್ರತಿಕವಾಗಿ ಕೊಪ್ಪಳ ಪ್ರಸಿದ್ಧವಾಗಿದೆ. ಕವಿರಾಜ ಮಾರ್ಗದಲ್ಲಿ "ವಿದಿತ ಮಹಾ ಕೋಪಣ ನಗರ" ವೆಂದು ಕೊಪ್ಪಳದ ಬಗ್ಗೆ ಉಲ್ಲೇಖವಿದೆ. ಅಶೋಕ ಚಕ್ರವರ್ತಿಯ ಶಿಲಾ ಶಾಸನಗಳು, ಶಿಲಾಯುಗದ ಜನರು ವಾಸಿಸುತ್ತಿದ್ದ ಗವಿಗಳು, ವಿಜಯನಗರ ಸಾಮ್ರಾಜ್ಯದ ಪ್ರಥಮ ರಾಜಧಾನಿ ಆನೆಗೊಂದಿ, ಫ್ರೆಂಚರ ಸಹಾಯ ಪಡೆದು ಟಿಪ್ಪು ಸುಲ್ತಾನ ನಿರ್ಮಿಸಿದ ಕೊಪ್ಪಳ ಕೋಟೆ, ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮರ್ದಾನ ದರ್ಗಾ, ಹಲವು ನೂರು ವರ್ಷಗಳಿಂದ ಕೋಮು ಸಾಮರಸ್ಯ, ಶಿಕ್ಷಣ ಮತ್ತು ಧರ್ಮ ಪ್ರಚಾರಕ್ಕಾಗಿ ಹೆಸರುವಾಸಿಯಾಗಿರುವ ಕೊಪ್ಪಳದ ಗವಿಮಠ, ಸುಪ್ರಸಿದ್ಧ ಕಿನ್ನಾಳ ಕಲೆ, ಇಟಗಿಯ ಮಹದೇವ ದೇವಸ್ಥಾನ ಹೀಗೆ ಹಲವಾರು ಕಾರಣಗಳಿಗಾಗಿ ಕೊಪ್ಪಳ ಜಿಲ್ಲೆ ಹೆಸರುವಾಸಿಯಾಗಿದೆ. ತುಂಗಭದ್ರಾ ನದಿಯ ತೀರದಲ್ಲಿರುವ ಆನೆಗೊಂದಿ ರಾಮಾಯಣ ಕಾಲದ ವಾಲಿ, ಸುಗ್ರೀವರಿದ್ದ ಕಿಷ್ಕಿಂಧೆಯ ಭಾಗವಾಗಿತ್ತೆಂದು ಹೇಳಲಾಗುತ್ತದೆ. ವಿಜಯನಗರ ಸಾಮ್ರಾಜ್ಯದಲ್ಲಿ ಆನೆಗಳನ್ನು ಆನೆಗೊಂದಿಯಲ್ಲಿ ಇರಿಸಲಾಗುತ್ತಿದ್ದರಿಂದ ಈ ಸ್ಥಳಕ್ಕೆ ಆನೆಗೊಂದಿಯೆಂಬ ಹೆಸರು ಬಂದಿತೆಂದೂ ಹೇಳಲಾಗುತ್ತದೆ. ೧೫೬೫ ವರ್ಷದಲ್ಲಿ ರಕ್ಕಸ-ತಂಗಡಿ ಯುದ್ಧದಲ್ಲಿ ಸೋಲಾಗಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹಂಪಿ ಮತ್ತು ಆನೆಗೊಂದಿಯನ್ನು ವಿಜಯಿ ಮುಸ್ಲಿಂ ಯೋಧರು ಹಾಳುಗೆಡವಿದರು.೧೭೭೬ ವರ್ಷದಲ್ಲಿ ಟಿಪ್ಪೂ ಸುಲ್ತಾನ್ ಸೇನೆ ಆನೆಗೊಂದಿಯನ್ನು ಹಾಳುಗೆಡವಿತು.
ಪ್ರೇಕ್ಷಣೀಯ ಸ್ಥಳಗಳು ಇಂದಿನ ಆನೆಗೊಂದಿ, ಗಂಗಾವತಿ ತಾಲ್ಲೂಕಿನಲ್ಲಿದೆ. ಆನೆಗೊಂದಿಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳೆಂದರೆ ಗಗನ ಅರೆಮನೆ, ಆನೆಗೊಂದಿ ಕೋಟೆ,ಪಂಪ ಸರೋವರ, 64 ಕಂಭಗಳಿರುವ ಕೃಷ್ಣದೇವರಾಯನ ಸಮಾಧಿ,ನವ ಬೃಂದಾವನ,ಮರದ ಮೇಲೆ ಮಾಡಿರುವ ಸೂಕ್ಷ್ಮ ಕೆತ್ತೆನೆಯಂತೆ, ಕಲ್ಲಿನ ಮೇಲೆ ಕೆತ್ತನೆ ಮಾಡಿರುವ ಗರ್ಭಗುಡಿಯಿರುವ ಶ್ರೀ ಗಣಪತಿ ದೇವಸ್ಥಾನ, ಶ್ರೀ ಗವಿ ರಂಗನಾಥ ದೇವಸ್ಥಾನ, ಶಿಲೆಯಲ್ಲಿ ಕೆತ್ತಿರುವ ಸಂಪೂರ್ಣ ರಾಮಾಯಣ ಮೊದಲಾದ ಅಪೂರ್ವ ಶಿಲ್ಪಕಲಾ ಕೆತ್ತನೆಯ ಬೀಡಾಗಿರುವ ಹುಚ್ಚಪ್ಪಯ್ಯನ ಮಠ ಮತ್ತು ಚಿಂತಾಮಣಿ ಶಿವನ ದೇವಸ್ಥಾನ.
13 Jan 2016

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top