PLEASE LOGIN TO KANNADANET.COM FOR REGULAR NEWS-UPDATES

ಸಂಕ್ರಾಂತಿ ಹಬ್ಬದ ಮುನ್ನ ದಿನ ಕೊಪ್ಪಳದ ಗಂಗಾವತಿ ತಾಲೂಕಿನ ಸೋಮನಾಳ ಕ್ಯಾಂಪ್‍ನಲ್ಲಿ ಶ್ವಾನಗಳಿಗೆ ಅನ್ನದಾನ ಮಾಡುವ ಮೂಲಕ ಸಂಕ್ರಮಣ ಹಬ್ಬವನ್ನು ಬರಮಾಡಿಕೊಳ್ಳುತ್ತಾರೆ. ಮಕ್ಕಳೆಲ್ಲ ಸಗಣಿ ಭರಣಿಗಳ ಹಾರ ಹಾಕಿಕೊಂಡು ಬಂದು ಮೊದಲು ಈ ಬೆಂಕಿ ಕುಂಡಕ್ಕೆ ನಮಸ್ಕರಿಸಿ, ನಂತರ ಮಕ್ಕಳು ತಮ್ಮ ಕೊರಳಿಲ್ಲಿನ ಸಗಣಿ ಮುತ್ತಿನ ಹಾರವನ್ನು ಬೆಂಕಿಗೆ ಅರ್ಪಿಸುತ್ತಾರೆ. ಬೀದಿ ಬೀದಿಗಳಲ್ಲಿರುವ ಶ್ವಾನಗಳಿಗೆ ತುಪ್ಪ ಹಾಗೂ ಹೆಸರು ಬೇಳೆಯಿಂದ ಮಾಡಿದ ಅನ್ನವನ್ನು ಬಡಿಸುತ್ತಾರೆ. ಕ್ಯಾಂಪ್ ಮಾತ್ರವಲ್ಲದೆ ಸುತ್ತಲಿನ ಗ್ರಾಮಗಳಲ್ಲಿ ನಡೆದಾಡಿ ಅನ್ನದಾನವನ್ನು ಮಾಡುತ್ತಾರೆ.

Advertisement

0 comments:

Post a Comment

 
Top