PLEASE LOGIN TO KANNADANET.COM FOR REGULAR NEWS-UPDATES

ಮುನಿರಾಬಾದ-15-  ಕೊಪ್ಪಳ ತಾಲೂಕಿನ ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಸುರಭಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ), ಮುನಿರಾಬಾದ(ಆರ್.ಎಸ್) ಇದರ ೨೦೧೪-೧೫ನೇ ಸಾಲಿನ ಬಿಜಾಪೂರ ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆ ಹೊಂದಿದ ಈ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಫಲಿತಾಂಶ ಪ್ರಕಟಗೊಂಡಿದ್ದು ಶೇ೧೦೦ಕ್ಕೆ ೧೦೦ರಷ್ಟು ಫಲಿತಾಂಶವನ್ನು ಪಡೆಯುವುದರೊಂದಿಗೆ ತನ್ನ ಹಿರಿಮೆ ಮೆರೆದಿದೆ. ಪರೀಕ್ಷೆಗೆ ಹಾಜರಾದ ೧೦೦ ಪ್ರಶಿಕ್ಷಣಾರ್ಥಿಗಳಲ್ಲಿ ೧೫ ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿಗಿಂತ ಹೆಚ್ಚಿನ ಅಂಕಗಳನ್ನು ಮತ್ತು ೭೫ ಪ್ರಶಿಕ್ಷಣಾರ್ಥಿಗಳು ಡಿಸ್ಟಿಕ್ಷನ್, ೧೦ ಪ್ರಶಿಕ್ಷಣಾರ್ಥಿಗಳು ಪ್ರಥಮ ಧರ್ಜೆಯಲ್ಲಿ ಉತ್ತೀರ್ಣರಾಗಿದ್ದು ಇದರಲ್ಲಿ ಕುಮಾರಿ. ನಾಗಲಕ್ಷ್ಮಿ.ಟಿ (ಶೇ.೮೫.೨), ನಂದಿನಿ.ಎಂ (೮೫.೧), ಬಸಮ್ಮ ಯಂಕಣ್ಣ (೮೩.೯), ವಸಂತಕುಮಾರಿ (೮೩.೯), ಶ್ರಾವಣಿ ವಿಭೂತಿ (೮೧.೯) ಅಂಕಗಳನ್ನು ಪಡೆದು ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಯ ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿರುವುದಕ್ಕೆ ಸಂಸ್ಥೆಯ ಅಧ್ಯಕ್ಷರಾದ ಸಿದ್ದಲಿಂಗಯ್ಯ ಹಿರೇಮಠ, ಪ್ರಧಾನಕಾರ್ಯದರ್ಶಿಗಳಾದ ಶ್ರೀಮತಿ ವಿಜಯಾ.ಎಸ್.ಹಿರೇಮಠ, ಪ್ರಾಚಾರ್ಯರಾದ ಸಿದ್ದಲಿಂಗಸ್ವಾಮಿ ಚಕ್ಕಡಿ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.





Advertisement

0 comments:

Post a Comment

 
Top