PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ,ಜ.೧೬ ಕಳೆದ ಸಭೆಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ನಡೆದಿರುವ ಬಗ್ಗೆ ಖರ್ಚು-ವೆಚ್ಚದ ಪೂರ್ಣ ಮಾಹಿತಿಯನ್ನು  ಕಳೆದ ೩ ತಿಂಗಳ ನಿಂದಲು ಕೆಳುತ್ತ ಬಂದರು ಇದುವರೆಗೂ  ಮಾಹಿತಿಯನ್ನು ನೀಡಲು ಪಪಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲಾ. ಅಭಿವೃದ್ದಿಯ ಕೆಲಸದ ಮಾಹಿತಿ ನೀಡಲು ವಿಳಂಬಮಾಡುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪಪಂ ಅಧ್ಯಕ್ಷೆ ಭಾಗಿರಥೀ ಜೋಗಿನ್ ಅವರಿಗೆ ಬಿಜೆಪಿ ಸದಸ್ಯ ಸಿದ್ದರಾಮೇಶ ಬೇಲೇರಿ ಒತ್ತಾಯಿಸಿದರು.
ಇಲ್ಲಿನ ಪಪಂ ಕಾರ್ಯಲಯದಲ್ಲಿ ಶನಿವಾರ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಭಾಗಿರಥೀ ಜೋಗಿನ್ ಅಧ್ಯಕ್ಷತೆಯಲ್ಲಿ ನಡೆಯಿತು.
೧೦ನೇ ವಾರ್ಡಿನಲ್ಲಿ ವಿವಿಧ ಚರಂಡಿ,ರಸ್ತೆ, ಕಾಮಗಾರಿಗಳು ಪೂರ್ವ ಪ್ರಮಾಣದಲ್ಲಿ ಕೆಲಸ ಪ್ರಾರಂಭವಾಗಿಲ್ಲ ಆದರೂ ಇಂಜನಿಯರ್ ಓಂಕಾರ ಮೂರ್ತಿ ಅವರು ಗುತ್ತಿಗೆದಾರರಿಗೆ ಕಾಮಗಾರಿ ಬಿಲ್ಲ ಪಾವತಿ ಮಾಡಿದ್ದಾರೆ.ವಾರ್ಡಿನಲ್ಲಿ ಕೆಲಸಗಳು ಅಪೂರ್ಣವಿದ್ದರು ಸದಸ್ಯರ ಗಮನಕ್ಕೆ ಮಾಹಿತಿ ನೀಡದೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಭೆಯಲ್ಲಿ ಆರೋಪಿಸಿದರು.
ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ವಾರ್ಡಿನಿಂದ ೨೦ ಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ ಉದ್ದೇಶ ಪೂರ್ವಕವಾಗಿ ಒಬ್ಬರನ್ನ ಆಯ್ಕೆ ಮಾಡಿದ್ದಾರೆ ಉಳಿದ ಜನರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ನೀಡಿಲ್ಲ. ವಾರ್ಡಿನ ಅಭಿವೃದ್ಧಿಗೆ ಬಂದಿರುವ ಅನುದಾನ ನೀಡಲು ತಾರತಮ್ಯ ಮಾಡಲಾಗಿದೆ. ಇತರ ಸದಸ್ಯರ ಗಮನಕ್ಕೆ ತರದೆ ಕಾಂಗ್ರೇಸ್ ನ ಸದಸ್ಯರು ಏಕಾಎಕಿ ಕ್ರೀಯಾ ಯೋಜನೆಯನ್ನು ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು.

Advertisement

 
Top