ಕೊಪ್ಪಳ-11- ಕೊಪ್ಪಳ ನಗರದೆ ಶ್ರೀಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟನ ಅಡಿಯಲ್ಲಿ ಬರುವ ಶ್ರೀಮತಿ ಶಾರದಮ್ಮ ವಿ.ಕೊತಬಾಳ ಬಿ.ಬಿ.ಎ, ಬಿ.ಸಿ.ಎ ಹಾಗೂ ಬಿ.ಕಾಂ ಪದವಿ ಮಹಾ ವಿದ್ಯಾಲಯದ ಬಿ.ಸಿ.ಎ ವಿಭಾಗದಲ್ಲಿ ೩ ನೇ ರ್‍ಯಾಂಕ್ ಪಡೆದ ಕುಮಾರಿ ಶ್ವೇತಾ ಎನ್.ಎಂ, ೫ ನೇ ರ್‍ಯಾಂಕ್ ಪಡೆದ ಕುಮಾರಿ ದೀಪ್ತಿ ಎಸ್ ನಾಗರಾಜ ಹಾಗೂ ೮ ನೇ ರ್‍ಯಾಂಕ್ ಪಡೆದ ಕುಮಾರ ಆಶೀಷ್ ಲುಂಕದ ಇವರುಗಳಿಗೆ ಗವಿಮಠದಲ್ಲಿ ಇತ್ತೀಚಿಗೆ ಜರುಗಿದ ೭೭ ನೇ ಬೆಳಕಿನೆಡೆಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿನ ಮುಖ್ಯ ಅತಿಥಿಗಳಾದ ಪಂಡಿತ ಪಂಚಾಕ್ಷರ ಶಾಸ್ತ್ರಿ ಹಿರೇಮಠ, ಬಾಳನಗೌಡ್ರ ಸಿದ್ಧನಗೌಡ್ರ ಪೋಲೀಸ ಪಾಟೀಲ , ಶ್ರೀಮತಿ ಪರಿಮಳ ರಮೇಶ ವೈದ್ಯ ಇವರುಗಳು ರ್‍ಯಾಂಕ್ ವಿಜೇತರರನ್ನು ಶ್ರೀಗವಿಮಠದ ಪರವಾಗಿ ಸನ್ಮಾನಿಸಿದರು. ಈ ಸಮಾರಂಭದಲ್ಲಿ ಪೂಜ್ಯ ಶ್ರೀಗವಿಸಿದ್ಧೇಶ್ವರ ಸ್ವಾಮಿಗಳು, ಶ್ರೀಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟನ ಕಾರ್ಯದರ್ಶಿ ಶ್ರೀ ಎಸ್ ಮಲ್ಲಿಕಾರ್ಜುನ , ಕಾಲೇಜಿನ ಅಧ್ಯಕ್ಷರು ಆದ ಶ್ರೀ ಸಂಜಯ ಕೊತಬಾಳ, ನಿರ್ದೇಶಕರಾದ ಮಹೇಶ ಮುದಗಲ್, ಆಡಳಿತಾಧಿಕಾರಿ ಡಾ.ಮರೆಗೌಡರ್, ಪ್ರಾಚಾರ್ಯ ರಾಜರಾಜೇಶ್ವರ ರಾವ್ ಹಾಗೂ ಶಿಕ್ಷಕ/ಶಿಕ್ಷಕೇತರ ಸಿಬ್ಬಂಧಿ ಹಾಗೂ ಅಪಾರ ಸಂಖ್ಯೆಯಲ್ಲಿನ ಭಕ್ತಾಧಿಗಳು ಭಾಗವಹಿಸಿದ್ದರು.
Home
»
Koppal News
»
koppal organisations
» ಹ್ಯಾಟ್ರಿಕ್ ರ್‍ಯಾಂಕ್ ವಿಜೇತರರಿಗೆ ಶ್ರೀಗವಿಮಠದ ಪರವಾಗಿ ಸನ್ಮಾನ.
Subscribe to:
Post Comments (Atom)
0 comments:
Post a Comment