PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- ೧೮, ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ನೂತನ ಕೊಠಡಿಗಳಿಗೆ ಆರ್.ಡಿ.ಈ.ಎಫ್. ೨೦ನೇ ಯೋಜನೆಯಡಿಯಲ್ಲಿ ರೂ.೫೦ ಲಕ್ಷದ ಕೊಠಡಿ ಕಾಮಗಾರಿಗಳಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಹೆಣ್ಣುಮಕ್ಕಳು ಯಾರೂ ಶಿಕ್ಷಣದಿಂದ ವಂಚಿತರಾಗಬಾರದು. ನಮ್ಮ ಭಾಗವು ೩೭೧ಜೆ ಕಲಂ ಯೋಜನೆಯಡಿಯಲ್ಲಿ ಬರುವದರಿಂದ ನಮ್ಮ ಮಕ್ಕಳಿಗೆ ಹೆಚ್ಚಿನ ಸೌಲಭ್ಯಗಳು ಲಭ್ಯವಾಗಲಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕು. ನಮ್ಮ ರಾಜ್ಯ ಸರ್ಕಾರವು ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆನೀಡಿ ಗುಣಮಟ್ಟದ ಶಿಕ್ಷಣಪಡೆಯಲು ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ವಿಧ್ಯಾಶ್ರೀ ಯೋಜನೆ, ಕ್ಷೀರಭಾಗ್ಯ ಯೋಜನೆ, ಹಾಗೂ ಬರು ಆರ್ಥಿಕ ವರ್ಷದಿಂದ ಶೋ-ಭಾಗ್ಯ ಲಬಿಸಲಿದ್ದು, ಇದು ಸರ್ಕಾರವು ವಿದ್ಯಾಥಿ-ವಿದ್ಯಾರ್ಥಿಗಳ ಉಜ್ವಲಭವಿಷ್ಯಕ್ಕಾಗಿ ಹೆಚ್ಚಿನ ಮುತವರ್ಜಿವಹಿಸಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ನೈತಿಕಹ್ರೆಣೆಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಸನ್ನ ಗಡಾದ, ಯಮನೂರಪ್ಪ ನಾಯಕ್, ಹುಸ್ಸೇನಪೀರಾ ಮುಜೇವಾರ, ಕೃಷ್ಣ ಗಲಬಿ, ಪ್ರಾಚಾರ್ಯರಾರದ ವಿ.ಬಿ.ರೆಡ್ಡೇರ, ಭೂಸೇನೆ ನಿಗಮದ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Advertisement

0 comments:

Post a Comment

 
Top