PLEASE LOGIN TO KANNADANET.COM FOR REGULAR NEWS-UPDATES

ಕಾರಟಗಿ-02- ಮಗುಮಾರಾಟವಾಗಿದೆ ಎನ್ನುವ ಶಂಕೆ ಹಿನ್ನೆಲಯಲ್ಲಿ ಯುನಿಸೆಫ್ ಸಿಬ್ಬಂದಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗು ಮತ್ತು ಮಗಿವಿನ ತಾಯಿಯನ್ನು ಪತ್ತೆ ಹಚ್ಚಿದ್ದು, ಹೆಚ್ಚಿನ ವಿಚಾರಣಗೆಗಾಗಿ ಶನಿವಾರ ಕೊಪ್ಪಳಕ್ಕೆ ಕರೆದೊಯ್ದಿದ್ದಾರೆ. ಸಮೀಪದ ಯರಡೋಣಾ ಗ್ರಾಮದ ಮಹಿಳೆಯೊಬ್ಬರು ೮ತಿಂಗಳ ಮಗುವನ್ನು ಮಾರಾಟ ಮಾಡಿದ್ದಾಳೆಂದು ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಯುನಿಸೆಫ್ ತಾಲ್ಲೂಕಾ ಸಂಯೋಜಕ ಯಮನೂರಪ್ಪ, ಅಂಗನವಾಡಿ ಮೆಲ್ವೀಚಾರಕಿ ಮಹೆಬೂಬಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಮನಮ್ಮ, ಸಮುದಾಯ ಸಂಘಟಕರಾದ ಮಹಾಂತೇಶ, ನಾಗರಾಜ, ಹನುಮಂತಪ್ಪ ನೇತೃತ್ವದತಂಡ ಮಗುವಿನ ತಾಯಿ ಬಸಮ್ಮಳನ್ನು ಪತ್ತೆ ಹಚ್ಚಿ ವಿಚಾರಿಸಿದರು. ಅಧಿಕಾರಿಗಳ ಮುಂದೆ ತಾನು ಮಗುವನ್ನು ಮಾರಾಟಮಾಡಿಲ್ಲ, ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾಳೆ. ಇದರಿಂದ ಅನುಮಾನಗೊಂಡ ತಂಡ ಬಸಮ್ಮಳೊಂದಿಗೆ ಬೆಂಗಳೂರಿಗೆ ತೆರಳಿ ೮ತಿಂಗಳ ಮಗುವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ತನಿಖೆ : ಯುನಿಸೆಫ್ ತಾಲ್ಲೂಕಾ ಸಂಯೋಜಕ ಯಮನೂರಪ್ಪ ಪ್ರತಿಕ್ರಿಯಿಸಿ, ಪ್ರಸ್ತುತ ಮಗುವನ್ನು ಪತ್ತೆ ಹಚ್ಚಿ ಕರೆತಂದಿದ್ದೇವೆ. ಹೆಚ್ಚಿನ ವಿಚಾರಣೆಗಾಗಿ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕಕ್ಕೆ ಕರೆದೊಯುತ್ತಿದ್ದೇವೆ. ಅಲ್ಲಿ ತನಿಖೆ ನಡೆಸಲಾಗುವುದು. ನಂತರವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ ಎಂದರು.
ನಂತರ ತಾಯಿ, ಮಗುವನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆತಂದ ತಂಡ ಹೆಚ್ಚಿನ ವಿಚಾರಣೆಗಾಗಿ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ್ಕೆ ಕರೆದೊಯ್ದಿದ್ದಾರೆ.
ಈ ವೇಳೆ ಎಎಸ್‌ಐಗಳಾದ ಮಲ್ಲಪ್ಪ, ಮೌನಯ್ಯ ಬಡಿಗೇರ, ಸಿಬ್ಬಂದಿಗಳಾದ ವೆಂಕಾರೆಡ್ಡಿ, ಕಾಶಿನಾಥ, ಮಾರುತಿ ಸೇರಿದಂತೆ ಇತರರಿದ್ದರು.

Advertisement

0 comments:

Post a Comment

 
Top