ಕೊಪ್ಪಳ-04 ನಗರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ಶ್ರೀ ಶಾರದಾದೇವಿಯವರ ಆಧ್ಯಾತ್ಮಿಕ ಬಳಗದ ವತಿಯಿಂದ ನಡೆದ ಶ್ರೀ ಶಾರದಾದೇವಿಯವರ ೧೬೩ನೇ ಜನ್ಮದಿನೋತ್ಸವದ ಅಂಗವಾಗಿ ಜೀವಂತ ಶಾರದಾ ಪೂಜೆ ಹಾಗೂ ಲಲಿತಾ ಸಹಸ್ರನಾಮ ಕುಂಕಮಾರ್ಚನೆ ಕಾರ್ಯಕ್ರಮವನ್ನು ಗಡಿಯಾರ ಕಂಬದ ಮಾರ್ಗವಾಗಿ ಚುಕನಕಲ್ ಮಾರ್ಗ ಮಧ್ಯದಲ್ಲಿರುವ ನೂತನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ಥಳದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಪರಮ ಪೂಜ್ಯ ಶ್ರೀ ಚೈತನ್ಯಾನಂದಸ್ವಾಮೀಜಿ ಮಹಾರಾಜ ಹಾಗೂ ದದೇಗಲ್‌ನ ಶ್ರೀ ಸಿದ್ದಾರೂಢಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ
ಶ್ರೀ ಆತ್ಮಾನಂದ ಸ್ವಾಮೀಜಿಗಳು ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು. ಮುಖ್ಯ
ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ವಿನೂತಾ ಪ್ರವೀಣಕುಮಾರ, ಶ್ರೀ ಗಂಗಾದೇವಿ ಸಂಸ್ಥೆಯ
ಶ್ರೀಮತಿ ಪದ್ಮಾವತಿ, ಖ್ಯಾತ ವೈಧ್ಯರಾದ ಡಾ|| ಕೆ.ಜಿ.ಕುಲಕರ್ಣಿ, ಜಿಲ್ಲಾ ವಕೀಲರ ಸಂಘದ
ಅಧ್ಯಕ್ಷರಾದ ಶ್ರೀ ರಾಘವೇಂದ್ರ ಪಾನಘಂಟಿ, ವಾಣಿಜ್ಯೋಧ್ಯಮಿಗಳಾದ ಶ್ರೀ ಗುರನಗೌಡ್ರ
ಪಾಟೀಲ ಹಲಗೇರಿ, ಶ್ರೀ ಮಾಲತೇಶ ಖಾನಾವಳಿ ಮಾಲಕರಾದ ಶಿವನಗೌಡ ಶಾಂತಗಿರಿ, ಖ್ಯಾತ
ವಕೀಲರಾದ ಎಮ್.ವಿ.ಬುಸನೂರಮಠ, ಖ್ಯಾತ ವಕೀಲರಾದ ಶ್ರೀ ಶಶಿಕಾಂತ ಎ.ನಿಂಗೋಜಿ, ರಾಜ್ಯದ
ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಬಸನಗೌಡ ಪಾಟೀಲ್, ಶ್ರೀ ಶಾರದಾಮಾತಾ
ಆಧ್ಯಾತ್ಮಿಕ ಬಳಗದ ಅಧ್ಯಕ್ಷರಾದ ಶ್ರೀಮತಿ ಸರ್ವಮಂಗಳ ಪಾಟೀಲ ಹಲಗೇರಿ ಹಾಗೂ ಇನ್ನಿತರ
ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪೂಜೆಯೊಂದಿಗೆ ೧೦೮ ಮಹಿಳೆಯರಿಗೆ ಸಿರೆ
ವಿತರಿಸಲಾಯಿತು. ಹೋಮಹವನ, ಕುಂಕುಮಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಶಾರದಾದೇವಿಯ ಜನ್ಮ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಆಶ್ರಮದ ಕಾರ್ಯ
ಚಟುವಟಿಕೆ ಮತ್ತು ಸೇವಾ ಕಾರ್ಯಗಳನ್ನು ಗಮನಿಸಿದ ಗಣ್ಯರು ಮೆಚ್ಚಿಗೆ ವ್ಯಕ್ತಪಡಿಸಿದರು.
ಶ್ರೀ ಶರಣಪ್ಪ.ವಾಯ್.ಸಿಂದೋಗಿಯವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
Subscribe to:
Post Comments (Atom)
0 comments:
Post a Comment