ಕೊಪ್ಪಳ : ಕುಕನೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಓದುತ್ತಿರುವ ಕು.ಗಾಯತ್ರಿ ೨೦೧೫ನೇ ಸಾಲಿನ ಎನ್‌ವಿಎಸ್ ಇನ್ಸೆಂಟಿವ್ ಆವಾರ್ಡಗೆ ಆಯ್ಕೆಯಾಗಿದ್ದಾಳೆ. ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಧನೆ ತೋರಿದ ನವೋದಯದ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಈ ಪುರಸ್ಕಾರ ನೀಡಲಾಗುತ್ತದೆ. ಕು.ಗಾಯತ್ರಿ ೨೦೧೪-೧೫ನೇ ಸಾಲಿನಲ್ಲಿ ಕಾಮರ್ಸ ವಿಭಾಗದಲ್ಲಿ ಎಐಎಸ್‌ಎಸ್‌ಸಿಇ(೧೨) ತರಗತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಅಗ್ರಗಣ್ಯರಾಗಿ ಆಯ್ಕೆಯಾಗಿದ್ದಳು. ಕು.ಗಾಯತ್ರಿ ಕೊಪ್ಪಳ ಬನ್ನಿಕಟ್ಟಿಯ ನಿವಾಸಿ ರಮೇಶ ಕುಲಕರ್ಣಿಯವರ ಪುತ್ರಿಯಾಗಿದ್ದು ಪ್ರತಿವರ್ಷವೂ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ತೋರುತ್ತಾ ಬಂದಿದ್ದಾಳೆ. ಕಾಮರ್ಸ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಟಾಪರ್ ಎಂದು ಸಾಧನೆ ಮಾಡಿದ್ದಾಳೆ. ಇದೇ ತಿಂಗಳ ೨೪ರಂದು ಹೈದ್ರಾಬಾದ ವಿಶ್ವವಿದ್ಯಾಲಯದ ಡಿಎಸ್ ಟಿ ಅಡಿಟೋರಿಯಂನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಹುಮಾನ ವಿತರಣೆ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಿಕ್ಷಕರು, ಪಾಲಕರು ಮತ್ತು ಗುರಯ್ಯ ಹಿರೇಮಠ, ವಿಶ್ವನಾಥ ಹಿರೇಮಠ, ರಾಜಶೇಖರ, ರಾಜಾಬಕ್ಷಿ ಎಚ್.ವಿ. ಸೇರಿದಂತೆ ಇತರರು ಅಭಿನಂದಿಸಿದ್ದಾರೆ.
Home
»
Koppal News
»
koppal organisations
»
school college koppal district
» ಕು.ಗಾಯತ್ರಿಗೆ ೨೦೧೫ನೇ ಸಾಲಿನ ಎನ್‌ವಿಎಸ್ ಇನ್ಸೆಂಟಿವ್ ಆವಾರ್ಡ.
Subscribe to:
Post Comments (Atom)

0 comments:
Post a Comment