PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-15- ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ಜನೆವರಿ ೨೬ ರಂದು ಮಂಗಳವಾರ ಜರುಗುವ ಪ್ರಯುಕ್ತ   ಗವಿಮಠದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಲಿವೆ. ವರ್ಷದಿಂದ ವರ್ಷಕ್ಕೆ ವಿಬಿನ್ನತೆಯನ್ನು ಪಡೆದುಕೊಳ್ಳುತ್ತಾ  ನಾಡಿನಾಧ್ಯಂತ ಪ್ರಸಿದ್ಧಿ ಪಡೆದುಕೊಳ್ಳುತ್ತಿರುವ ಈ ಜಾತ್ರೆಗೆ  ಈ ವರ್ಷ ೫-೬ ಲಕ್ಷ ಜನ ಭಕ್ತರು ಬರುತ್ತಿರುವದರಿಂದ ಬಹುದೂರದಿಂದ ಬರುವ ವಿವಿಧ ನಗರಗಳ ಹಾಗೂ ಹಳ್ಳಿಗಳ ಭಕ್ತಾಧಿಗಳಿಗೆ ಉಳಿದುಕೊಳ್ಳುವ ಸಲುವಾಗಿ ಎಸ್.ಜಿ.ಟ್ಟಸ್ಟ ಅಡಿಯಲ್ಲಿ ಬರುವ  ೨೦೦೦ ವಿದ್ಯಾರ್ಥಿಗಳ ಶ್ರೀಗವಿಸಿದ್ಧೇಶ್ವರ ಉಚಿತ ವಸತಿ ನಿಲಯ, ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ, ಶ್ರೀಗವಿಸಿದ್ಧೇಶ್ವರ ಡಿ.ಇ.ಡಿ ಮತ್ತು ಬಿ.ಇಡಿ ಕಾಲೇಜು, ಶ್ರೀಗವಿಸಿದ್ಧೇಶ್ವರ ಪ್ರೌಡಶಾಲೆ, ಶ್ರೀಗವಿಸಿದ್ಧೇಶ್ವರ ಕಾಲೇಜಿನ ಮಹಿಳಾ ವಸತಿ ನಿಲಯದ  ಹೊಸ ಕಟ್ಟಡ, ಗವಿಮಠದ ಯಾತ್ರಿ ನಿವಾಸ,  ಶಾರದಮ್ಮ ಕೊತಬಾಳ ಬಿ.ಬಿ.ಎಂ ಮತ್ತು ಬಿ.ಸಿ.ಎ ಕಾಲೇಜು, ಅಲ್ಲದೇ ಮಾಸ್ತಿ ಪಬ್ಲಿಕ್ ಶಾಲೆ, ನಿವೇದಿತಾ ಪಬ್ಲಿಕ್ ಶಾಲೆ, ಕುವೆಂಪು ಶಾಲೆ ಹಾಗೂ ಕೊಪ್ಪಳ ನಗರದಲ್ಲಿರುವ ಪಾಂಡುರಂಗ ಕಲ್ಯಾಣ ಮಂಟಪ, ಮೇದಾರ ಕಲ್ಯಾಣ ಮಂಟಪ, ಮಹಾಂತಯ್ಯನ ಮಠ ಕಲ್ಯಾಣ ಮಂಟಪ, ಪಾನಗಂಟಿ ಕಲ್ಯಾಣ ಮಂಟಪ, ತೇರಾ ಪಂತಿ ಭವನ, ಶ್ರೀಗವಿಸಿದ್ಧೇಶ್ವರ ಎ.ಸಿ ಹಾಲ್ಖಾನಾವಳಿ, ಜೈನ್ ಸ್ಥಾನಕ ಗಡಿಯಾರ ಕಂಬ ಹೀಗೆ ಕೊಪ್ಪಳ ನಗರದ  ವಿವಿಧ ಕಡೆ  ಒಟ್ಟು ೧೮ ಕೇಂದ್ರಗಳಲ್ಲಿ  ಸುಮಾರು ೮೦೦೦ ಕ್ಕಿಂತಲೂ ಹೆಚ್ಚಿನ ಭಕ್ರರು ತಂಗಲು  ಉಚಿತ ವಸತಿ ಸೌಲಭ್ಯ ಮಾಡಲಾಗಿದೆ. ಪ್ರತಿಯೊಂದು ಕೇಂದ್ರಗಳಲ್ಲಿ ಸ್ನಾನ ಗ್ರಹ, ಶೌಚಾಲಯಗಳನ್ನು ತೆರೆಯಲಾಗಿದೆ. ಅಲ್ಲದೇ ಈ  ಎಲ್ಲ ಕೇಂದ್ರಗಳಲ್ಲಿ ವಸತಿ ಇರುವ  ಭಕ್ತರಿಗಾಗಿ ಜಮಖಾನಾ, ಬಕೆಟ್, ಮಗ್ಗು, ಸೊಳ್ಳೆ ಬತ್ತಿ, ಮೊಂಬತ್ತಿ, ಫಿನಾಯಿಲ್, ಸಾಬೂನು, ಪೌಡರು, ಶುದ್ದ ಕುಡಿಯುವ ನೀರಿನ ಕ್ಯಾನ, ನೀರಿನ ಬಾಟಲಿಗಳ ಇವೆಲ್ಲವುಗಳನ್ನು ಒದಗಿಸಲಾಗುವದು. ಬೆಳಗಿನ ಜಾವ ಭಕ್ತರು ತಂಗುವ ಪ್ರತಿ ವಸತಿ ಕೇಂದ್ರಗಳಿಗೂ ಬೆಳಗಿನ ಜಾವ ದಿನಪತ್ರಿಕೆಯನ್ನು ಒದಗಿಸುವ ಸೌಲಭ್ಯ ಸಹ ಇರುತ್ತದೆ. ಜೊತೆಗೆ  ಪ್ರತಿ ಕೇಂದ್ರದಲ್ಲಿ ೧೦ ಜನ ಸಿಬ್ಭಂಧಿ ಭಕ್ತರ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಾರೆ. ವಿಶೇಷವಾಗಿ ಪ್ರತಿ ಕೇಂದ್ರಗಳಲ್ಲಿರುವ ಭಕ್ತರ  ಹಾಗೂ ಚಿಕ್ಕ ಮಕ್ಕಳ ಆರೋಗ್ಯದ ಮೇಲ್ವಿಚಾರಣೆಗಾಗಿ ವ್ಯೈದ್ಯರನ್ನು ಸಹ ನಿಯೋಜನೆ ಮಾಡಲಾಗಿರುವದು ಜಾತ್ರಾ ವಸತಿಯ ವ್ಯಶಿಷ್ಟ್ಯತೆಯಾಗಿದೆ.  ಕಳೆದ ವರ್ಷಕ್ಕಿಂತಲೂ ಈ ವರ್ಷ ೮೦೦೦ ಕ್ಕಿಂತಲೂ  ಅತಿ ಹೆಚ್ಚು ಜನ ಭಕ್ತರಿಗಾಗಿ ಅದ್ದೂರಿಯಾದ ವಸತಿ ವ್ಯವಸ್ಥೆ ಮಾಡಲಾಗಿರುತ್ತದೆ.  ವಸತಿ ಮೇಲ್ವಿಚಾರಣಾ ಕೇಂದ್ರದ ಮುಖ್ಯಸ್ಥರಾದ ಡಾ.ಬಿ.ಎಸ್. ಸವಡಿ ಹಾಗೂ ಸರ್ವಸದಸ್ಯರು ಕಾರ್ಯನಿರ್ವಹಿಸಲಿದ್ದಾರೆ. ಭಕ್ತಾಧಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀಗವಿಮಠದ ತಿಳಿಸಿದೆ.

Advertisement

0 comments:

Post a Comment

 
Top