PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-15- ತಾಲೂಕಿನ ಕುಣಿಕೆರಿ ಗ್ರಾಮದ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮ ಆಚರಿಸಲಯಿತು. ಮುಖ್ಯೋಪಾಧ್ಯಾಯರಾದ ಫಕೀರಪ್ಪ ಎನ್ ಅಜ್ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಲಿಂಗಾಂಗ ಯೋಗಿ, ಬಸವಯೋಗಿ, ಗುರು ಸಿದ್ಧರಾಮೇಶ್ವರು ಭ್ರಹ್ಮರಂದ್ರದಲ್ಲಿ ನೆಲೆನಿಂತ ಮನವನ್ನು ಉಳ್ಳಂತಹ ಶಿವಯೋಗಿ ಎಂದು ಅಲ್ಲಮ ಪ್ರಭುದೇವರು ಕೊಂಡಾಡಿರುವುದನ್ನು ನೋಡಿದರೆ ಇವರು ಎಂತಹ ಶರಣರು ಎಂದು ಗೊತ್ತಾಗುತ್ತದೆ ಸಮಾಜ ಪ್ರೇಮಿ, ಶರಣರ ಸಮೂಹದಲ್ಲಿ ಹೆಚ್ಚಿನ ಸಮಾಜ ಪ್ರೇಮವನ್ನು ಧರ್ಮಗುರು ಬಸವಣ್ಣನವರಲ್ಲಿ ಎರಡನೇಯದಾಗಿ ಸಿದ್ಧರಾಮೇಶ್ವರರಲ್ಲಿ ಕಾಣುತ್ತೇವೆ ಇಂತಹ ಶಿವಯೋಗಿಗಳ ಆದರ್ಶಗುಣಗಳು ಇಂದಿನ ಸಮಾಜಕ್ಕೆ ಮಾದರಿ ಎಂದರು.
    ಮುಖ್ಯಅತಿಥಿ ಸಂತೋಷ ಡಂಬ್ರಳ್ಳಿ ಮಾತನಾಡುತ್ತಾ ಸಿದ್ಧರಾಮೇಶ್ವರರ ಒಂದು ವಚನದಲ್ಲಿ ಭಕ್ತರ ತಾಪತ್ರಯಗಳನ್ನು ತಿಳಿದು ಅವರ ಸುಖ ದುಃಖಗಳಿಗೆ ಸ್ಪಂದಿಸಿ ದುಃಖಿತರಿಗೆ ಸಮಾಧಾನ ಮಾಡಿ ಸಂಕಷ್ಟಗಳಿಗೆ ಮರಗುವ ಮಾತೃ ಹೃದಯಿ ಮಾತ್ರ ಜಂಗಮ, ಶರಣ, ಎನ್ನುವ ವಿಚಾರಗಳು ಇಂದಿನ ಎಲ್ಲಾ ಶರಣರಿಗೆ ಮಾದರಿಯಾಗಿವೆ. ಜಾತಿ ವ್ಯವಸ್ಥೆಯನ್ನು ಮೀರಿನಿಂತ ಇಂತಹ ಶರಣರ ಜಯಂತಿ ಆಚರಣೆ ತುಂಬಾ ಸಂತಸದ ವಿಷಯ ಎಂದರು.
    ಈ ಕಾರ್ಯಕ್ರಮದಲ್ಲಿ ಕೊಟ್ರೇಶ ಸಬರದ, ಹುಲಿಗೇಶ ಭೋವಿ, ಸಂಸ್ಥೆ ಅಧ್ಯಕ್ಷ ಈಶಪ್ಪ ಸೊಂಪೂರ, ಕಾರ್ಯದರ್ಶಿ ಈರಮ್ಮ ಸೊಂಪೂರ, ಯಮನೂರಪ್ಪ ಮಂಗಳೂರ, ಛಾಯಾಗ್ರಾಹಕ ಬಸವರಾಜ ಸಬರದ, ರುಕ್ಮಣಿ ವಾಯ.ಜೆ, ಪ್ರವೀಣ ಸೊಂಪೂರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಅಶ್ವಿನಿ ಸಬರದ ಮತ್ತು ರೇಖಾ ಭೋವಿ ಪ್ರಾರ್ಥಿಸಿದರು, ಈಶಪ್ಪ ಸೊಂಪೂರ ಸ್ವಾಗತಿಸಿದರು ಶಿಕ್ಷಕಿ, ಫಕೀರಮ್ಮ ತಳವಾರ ನಿರೂಪಿಸಿದರು ಕೊನೆಯಲ್ಲಿ ಶಿಕ್ಷಕಿ ಮರಿಯಮ್ಮ ಹರಿಜನ ವಂದಿಸಿದರು.

Advertisement

0 comments:

Post a Comment

 
Top