PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-18- ನಗರದ ಶ್ರೀಗವಿಸಿದ್ಧೇಶ್ವರ ಜಾತ್ರೆ ಹತ್ತಿರ ಬರುತ್ತಿದ್ದಂತೆಯೇ ಗವಿಮಠದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಲಿದೆ. ಇಂದು ಸಿಂಧನೂರ ತಾಲುಕಾ ಬುಕನಟ್ಟಿ, ಭಾಣಾಪುರ, ಬೋಚನಾಳ, ಕುಕ್ಕುನಪಳ್ಳಿ, ಹಿರೇವಡ್ರಕಲ್, ಜೀರಾಳ ಕಲ್ಗುಡಿ, ಚಿಲ್ಕಮುಕ್ಕಿ ,ಆಗೋಲಿ ಗ್ರಾಮಗಳ ಭಕ್ತರು ರೊಟ್ಟಿ, ದವಸ-ಧಾನ್ಯ, ತರಕಾರಿ ಹಾಗೂ ಸಿಹಿಬೂಂದಿ ಮೊದಲಾದವುಗಳನ್ನು ಸಮರ್ಪಣೆ ಮಾಡಿದರು.
ಇಂದು ಸೋಮವಾರ ವಿರುವದರಿಂದ ಭಕ್ತರು ಬೆಳಿಗ್ಗೆಯಿಂದಲೇ ಭಾಜಾ,ಭಜಂತ್ರಿ, ಭಜನೆಯೊಂದಿಗೆ ಅಲಂಕರಿಸಿದ ಎತ್ತಿನಬಂಡಿ , ಲಘುವಾಹನಗಳಲ್ಲಿ  ಗವಿಮಠಕ್ಕೆ ಬಂದು ಶ್ರೀಗವಿಸಿದ್ಧೇಶ್ವರ ಕರ್ತೃ ಗದ್ದುಗೆಯ ದರ್ಶನ ಪಡೆದುಕೊಂಡು ಪೂಜ್ಯಶ್ರೀಗಳ ಆಶಿರ್ವಾದ ಪಡೆದುಕೊಂಡು ಪ್ರಸಾದ ಸ್ವೀಕರಿಸಿಕೊಂಡು ಹೋಗುತ್ತಿರುವ ದೃಶ ಗವಿಮಠದಲ್ಲಿ ಕಾಣುತ್ತಿತ್ತು. ದಾನಿಗಳಿಗೆಲ್ಲ ಪೂಜ್ಯ ಶ್ರೀಗವಿಸಿದ್ಧೇಶ್ವರ ಸ್ವಾಮಿಗಳು ಆಶಿರ್ವದಿಸಿದ್ಧಾರೆ.

ಪೂಜ್ಯ ಶ್ರೀಗಳ ಕಟೌಟ್ ಅರ್ಪಣೆ:
ಕೊಪ್ಪಳ : ನಗರದ ಶ್ರೀಗವಿಸಿದ್ಧೇಶ್ವರ ಜಾತ್ರೆಯಲ್ಲಿ ಒಂದೆಡೆ ಭಕ್ತರು ಧವಸ ಧಾನ್ಯ ತರಕಾರಿಗಳನ್ನು ಸಮರ್ಪಣೆ ಮಾಡುತಲಿದ್ದರೆ ಮತ್ತೊಂದೆಡೆ ಭಕ್ತರು ಪೂಜ್ಯ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿಗಳ ಬೃಹತ್ ಕಟೌಟ್ ಗವಿಮಠಕ್ಕೆ ಅರ್ಪಿಸಿದ್ದಾರೆ. ಕುದರಿಮೋತಿಯ ಭಕ್ತರಾದ ನಾಗರಾಜ ಚಿತ್ರಗಾರ ಮತ್ತು ಹನುಮಂತಪ್ಪ ಚಿತ್ರಗಾರ ಅವರು ಈ ಬೃಹತ್ ಆಕರ್ಷಕ ಕಟೌಟ್ ನೀಡಿದ್ದಾರೆ. ಒಟ್ಟು ೧೫ ಸಾವಿರ ರೂಪಾಯಿ ವೆಚ್ಚದಲ್ಲಿ ೨೬ ಅಡಿ ಎತ್ತರದ ಹಾಗೂ ೮ ಅಡಿ ಅಗಲದ ಈ ಬೃಹತ್ ಕಟೌಟ್‌ನ್ನು ಆ ಕಲಾವಿದರು ತಯಾರಿಸಿ ಶ್ರೀಗವಿಮಠಕ್ಕೆ ಅರ್ಪಿಸಿದ್ದಾರೆ. ಆ ಕಲಾವಿದರಿಗೆ ಪೂಜ್ಯಶ್ರೀಗಳು ಆಶಿರ್ವದಿಸಿದ್ದಾರೆ.


Advertisement

0 comments:

Post a Comment

 
Top