PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-08- ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸಲು ಕುಮಾರ ನಾಯಕ ವರದಿ ಯಥಾವತ್ ಜಾರಿಗಾಗಿ ಕೊಪ್ಪಳ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಹಾಗೂ ಉಪನ್ಯಾಸಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಪರವಾಗಿ ಮುನ್ಸಿಪಲ್ ತಹಶೀಲ್ದಾರರಾದ ಮಲ್ಲಿಕಾರ್ಜುನ ಜಾನೇಕಲ್ ಮನವಿ ಸ್ವೀಕರಿಸಿದರು.
    ಕುಮಾರ ನಾಯಕ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಮತ್ತು ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸುವುದು ಮತ್ತು ಪ್ರಾಂಶುಪಾಲರಿಗೆ ಪ್ರತ್ಯೇಕ ವೇತನ ಶ್ರೇಣಿಮತ್ತು ಎಕ್ಸಗ್ರೇಸಿಯಾ ಸೌಲಭ್ಯ ನೀಡುವುದು, ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸಿ ಅನುದಾನಕ್ಕೊಳಪಟ್ಟ ಉಪನ್ಯಾಸಕರಿಗೆ ಸೇವೆಗೆ ಸೇರಿದ ದಿನಾಂಕದಿಂದ ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ ಬಗೆಹರಿಸುವುದು, ಎಂ.ಫಿಲ್. ಪಿಎಚ್.ಡಿ. ನೆಟ್, ಸ್ಲೆಟ್, ಪಾಸಾ ದ ಪಿ.ಯು ಉಪನ್ಯಾಸಕರಿಗೆ ವಿಶೇಷ ಬಡ್ತಿ ನೀಡಿ ಪದವಿ ಕಾಲೇಜುಗಳಿಗೆ ನೇಮಕ ಮಾಡುವುದು, ೩೭೧ ಜೆ ರ ಅನ್ವಯ ಹೈ.ಕ.ಪ್ರದೇಶದಲ್ಲಿ ಖಾಲಿ ಇರುವ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವುದು ಸೇರಿದಂತೆ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು. ಕೊಪ್ಪಳ ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಬಸಪ್ಪ ನಾಗೋಲಿ, ಉಪಾಧ್ಯಕ್ಷರಾದ ಜಿ.ಬಿ.ಗಡೇದ,  ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಾಚಪ್ಪ ಕೇಸರಭಾವಿ, ಖಚಾಂಚಿಯಾದ ಶಿವಾನಂದ ಹಿರೇಮಠ, ಕೊಪ್ಪಳ ತಾಲೂಕ ಅಧ್ಯಕ್ಷರಾದ ಬಸವರಾಜ ಸವಡಿ, ಯಲಬುರ್ಗಾ ತಾಲೂಕ ಅಧ್ಯಕ್ಷರಾದ ಬಿಸಲದಿನ್ನಿ, ಕುಷ್ಟಗಿ ತಾಲೂಕ ಅಧ್ಯಕ್ಷರಾದ ರಮೇಶಗೌಡ, ಗಂಗಾವತಿ ತಾಲೂಕ ಅಧ್ಯಕ್ಷರಾದ ಎಸ್.ವಿ.ಪಾಟೀಲ, ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷರಾದ ಎ.ಜಿ.ಶರಣಪ್ಪ, ಪ್ರಾಚಾರ್ಯರಾದ ಡಾ.ವಿ.ಬಿ.ರಡ್ಡೇರ, ಡಿ.ಪಿ.ಶಂಕರಪ್ಪ, ಅಮೀನಸಾಬ ಸೂಡಿ, ವಿ.ಎಚ್.ಮಂಡಸೊಪ್ಪಿ, ಜಿ.ಎಂ.ಭೂಸನೂರಮಠ, ಐ.ಎಂ.ಚಿಕ್ಕರಡ್ಡಿ, ಶಂಶುದ್ದೀನ್, ನಾಗರಾಜರಾವ್, ಉಪನ್ಯಾಸಕರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ರಾಜಶೇಖರ ಪಾಟೀಲ, ಸೋಮನಗೌಡ ಪಾಟೀಲ, ಆರ್.ಎಸ್.ಸರಗಣಾಚಾರ, ಲಲಿತಾ ಅಂಗಡಿ, ಸೌಭಾಗ್ಯ ಡಂಬಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.  
               

Advertisement

0 comments:

Post a Comment

 
Top