PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ. ೧೫ (ಕ ವಾ) ಕೊಪ್ಪಳ ಜಿಲ್ಲೆಯೂ ಸೇರಿದಂತೆ ಉತ್ತರ ಕರ್ನಾಟಕದ ಒಣ ಭಾಗಗಳಲ್ಲಿ ಶೇಂಗಾ ಬೆಳೆಗೆ ಸುರುಳಿ ಪೂಚಿ ಹುಳುವಿನ ಬಾಧೆ ಕಂಡುಬಂದಿದ್ದು, ಇದರ ನಿವಾರಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
     ಜಿಲ್ಲೆಯ ಕೆಲವೆಡೆ ಶೇಂಗಾ ಬೆಳೆಗೆ ಸುರುಳಿ ಪೂಚಿ ಹುಳು ಬಾಧೆ ಹೆಚ್ಚಾಗಿದ್ದು, ಇದು  ಇಳುವರಿಯಲ್ಲಿ ಶೇ. ೨೦-೮೦ ರಷ್ಟು ಹಾನಿಯನ್ನುಂಟು ಮಾಡುತ್ತದೆ.  ಈ ಹುಳು ಬಾದೆಯ ಲಕ್ಷಣಗಳು ಇಂತಿದೆ. ಈ ಕೀಟವು ಚಿಗುರೆಲೆಯನ್ನು ಕೊರೆದು ಸುರಂಗ ಮಾಡಿ ಎಲೆಯ ಒಳಗಿನ ಹರಿತ್ತನ್ನು ತಿನ್ನುವುದರಿಂದ ಬೆಳೆಯು ಸುಟ್ಟಂತೆ ಕಾಣುತ್ತದೆ. ಬಾಧೆ ಹೆಚ್ಚಾದಲ್ಲಿ ಗಿಡವು ಒಣಗಿ ಹೋಗುತ್ತವೆ.  ಇದರ ನಿರ್ವಹಣೆಗೆ ಅಂತರಬೆಳೆಯಾಗಿ ಜೋಳ, ಸಜ್ಜೆ, ಮೆಕ್ಕೆಜೋಳ ಮತ್ತು ತೊಗರಿ ಬೆಳೆಯನ್ನು ಬೆಳೆಯಬೇಕು. ಒಂದು ಎಕರೆಗೆ ಬೇಕಾಗುವ ಶೇಂಗಾ ಬೀಜದಲ್ಲಿ ೨೦೦ ಗ್ರಾಂ ಔಡಲ(ಹರಳು) ಬೀಜವನ್ನು ಸೇರಿಸಿ ಬಿತ್ತಬೇಕು. ಬಿಸಿಲಿನ ಸಮಯದಲ್ಲಿ ಕೀಟನಾಶಕಗಳನ್ನು ಸಿಂಪರಣೆ ಮಾಡಬಾರದು. ೧-೨ ದೀಪದ ಬಲೆಗಳನ್ನು ಅಳವಡಿಸಬೇಕು.  ೨ ಮಿ.ಲೀ ಪ್ರೋಪೆನೋಫಾಸ್ ೫೦ ಇ.ಸಿ, ೨ ಮಿ.ಲೀ ಡೈಮೆಥೋಯೇಟ್ ೩೦ ಇ.ಸಿ ಅಥವಾ ಮೋನೊಕ್ರೋಟೋಫಾಸ್, ೩೬ ಎಸ್.ಎಲ್ ಅಥವಾ ೦.೩ ಮಿ,ಲೀ ಇಮಿಡಾಕ್ಲೋಪ್ರಿಡ್ ೧೭.೮ ಎಸ್.ಎಲ್  ಅಥವಾ ೨ ಮಿ.ಲೀ ಕ್ವಿನಾಲ್‌ಫಾಸ್ ೨೫ ಇ.ಸಿ ಪ್ರತೀ ಲೀಟರ್ ನಿರಿನಲ್ಲಿ ಬೆರೆಸಿ ಸಿಂಪಡಿಸಬೇಕು.
     ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯ ತಜ್ಞರಾದ ರೋಹಿತ್ ಕೆ.ಎ (೯೮೪೫೧೯೪೩೨೮) ಇವರನ್ನು ಸಂಪರ್ಕಿಸಬೇಕೆಂದು ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ (೯೪೮೦೬೯೬೩೧೯) ತಿಳಿಸಿದ್ದಾರೆ. 

Advertisement

0 comments:

Post a Comment

 
Top