ಕೊಪ್ಪಳ.-10- ಜಿಲ್ಲೆಯಲ್ಲಿ ಮತ್ತು ರಾಯಚೂರ ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಡಿಸೆಂಬರ್ ೧೧ ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಕೊಪ್ಪಳ - ಕೊಪ್ಪಳದಲ್ಲಿ ದಿ. ೧೧ ರಂದು ಶುಕ್ರವಾರ ಹೆಚ್.ಡಿ.ಎಫ್.ಸಿ. ಬ್ಯಾಂಕ್‌ನ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಹೆಚ್.ಡಿ.ಎಫ್.ಸಿ. ಬ್ಯಾಂಕ್‌ನಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಶಿಬಿರ ಜರುಗಲಿದೆ. ರಾಯಚೂರು - ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ದಿ. ೧೧ ರಂದು ಶುಕ್ರವಾರ ಹೆಚ್.ಡಿ.ಎಫ್.ಸಿ. ಬ್ಯಾಂಕ್‌ನ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಹೆಚ್.ಡಿ.ಎಫ್.ಸಿ. ಬ್ಯಾಂಕ್‌ನಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಶಿಬಿರ ಜರುಗಲಿದೆ. ಈ ಎರಡು ಶಿಬಿರಗಳಲ್ಲಿ ಆಸಕ್ತರು ರಕ್ತದಾನ ಮಾಡಿ ಸಹಕರಿಸುವಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ ಕೋರಿದ್ದಾರೆ.
Subscribe to:
Post Comments (Atom)
0 comments:
Post a Comment