PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ.೨೨ (ಕ ವಾ) ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರಿನ ಗುದ್ನೆಪ್ಪನ ಮಠದ ಶ್ರೀ ಗುದ್ನೇಶ್ವರ ಸ್ವಾಮಿಯ ಪಂಚಕಳಸ ಮಹಾರಥೋತ್ಸವ ಡಿ.೨೫ ರಂದು ನಡೆಯಲಿದೆ.      ರಥೋತ್ಸವವು ಅಂದು ಸಂಜೆ ೦೪ ಗಂಟೆಗೆ ಬಿನ್ನಾಳ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ನಂದಿಕೋಲು ಸೇವೆ ಹಾಗೂ ಕಕ್ಕಿಹಳ್ಳಿ ಗ್ರಾಮದ ಶ್ರೀ ಅಳಿಯ ಚನ್ನಬಸವೇಶ್ವರ ಪಲ್ಲಕ್ಕಿ ಸೇವೆ ಸೇರಿದಂತೆ ಸಕಲ ವಾದ್ಯಮೇಳಗಳೊಂದಿಗೆ ವೈಭವೋಪೇತವಾಗಿ ಜರುಗಲಿದೆ. ರಥೋತ್ಸವದ ಅಂಗವಾಗಿ ಡಿ.೨೬ ರಿಂದ ಡಿ.೨೯ ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಪ್ರತಿದಿನ ಸಂಜೆ ೦೬ ಗಂಟೆಗೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಮುಂಭಾಗದ ಗುದ್ನೆಪ್ಪನ ಮಠದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಡಿ.೨೬ ರಂದು ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಡಿ.೨೭ ರಂದು ಅಭಿನವ ಸಂಗೀತ ಸೇವಾ ಸಂಸ್ಥೆ, ಕೊಪ್ಪಳ ಇವರಿಂದ ಸಂಗೀತ ಸಂಪದ ಹಾಗೂ ಸಿದ್ದಪ್ಪ ಬೀಳಗಿ ಅವರಿಂದ ತತ್ವಪದ ಮತ್ತು ಹಾಸ್ಯ ಸಂಪದ ಕಾರ್ಯಕ್ರಮ, ಡಿ.೨೮ ರಂದು ಶ್ರೀ ಬೂದೀಶ್ವರ ಮಹಾಸ್ವಾಮಿಗಳಿಂದ ಜ್ಞಾನ ದಾಸೋಹ, ಡಿ.೨೯ ರಂದು ಖ್ಯಾತ ಕಲಾವಿದರುಗಳಾದ ಬಸವರಾಜ ಮಹಾಮನಿ, ನರಸಿಂಹ ಜೋಶಿ, ಜೀವನಸಾಬ ಬಿನ್ನಾಳ ಮತ್ತು ಜೆ.ಮರಿಯಪ್ಪ ಇವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯಲಬುರ್ಗಾ ತಹಶೀಲ್ದಾರ್ ಶಿವಲಿಂಗಪ್ಪ ತಿಳಿಸಿದ್ದಾರೆ.

Advertisement

0 comments:

Post a Comment

 
Top