PLEASE LOGIN TO KANNADANET.COM FOR REGULAR NEWS-UPDATES

ರಾಜ್ಯ ಸರ್ಕಾರದಿಂದ ಇನ್ನು ಮುಂದೆ ಇಡ್ಲಿ ಮತ್ತು ನೀರಿನ ಭಾಗ್ಯ ನೀಡಲು ಯೋಜನಾ ಆಯೋಗ ತೀರ್ಮಾನಿಸಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಶಾಲಾ-ಕಾಲೇಜು, ಬಸ್‍ಸ್ಟ್ಯಾಂಡ್, ಆಸ್ಪತ್ರೆಗಳಲ್ಲಿ ಮತ್ತು ಕ್ಯಾಂಟೀನ್‍ಗಳಲ್ಲಿ 5 ರೂ.ಗೆ 5 ಇಡ್ಲಿ ನೀಡುವ ಬಗ್ಗೆ ಯೋಜನಾ ಆಯೋಗ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ಯೋಜನೆಯನ್ನು ಮುಂದಿನ ಬಜೆಟ್‍ನಲ್ಲಿ ಘೋಷಣೆ ಮಾಡಲಾಗುತ್ತದೆ. ಈ ನೂತನ ಯೋಜನೆಯನ್ನು ಮೊದಲು ನಗರ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಶಿಫಾರಸ್ಸು ಮಾಡಿದ್ದು, ತಿಂಗಳಿಗೆ 40 ಕೋಟಿ ವೆಚ್ಛವಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.

Advertisement

0 comments:

Post a Comment

 
Top